For Quick Alerts
  ALLOW NOTIFICATIONS  
  For Daily Alerts

  'ಈ' ಚೆಲುವೆ ಯಾರೂಂತ ನೀವು ಗುರುತಿಸಿ ಹೇಳಬಲ್ಲಿರಾ?

  By Suneetha
  |

  ಆಗಿನ ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಎತ್ತಲೋ ಕೊಂಡೊಯ್ದ ಖ್ಯಾತ ನಟರ, ಮಕ್ಕಳು ಚಿತ್ರರಂಗಕ್ಕೆ ಕಾಲಿಡೋತ್ತಿರೋದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ಅದರಲ್ಲೂ ಖ್ಯಾತ ನಟರ ಪುತ್ರಿಯರು ಬೆಳ್ಳಿ ತೆರೆಯ ಮೇಲೆ ಮಿಂಚಲು ಭರ್ಜರಿ ತಯಾರಿ ನಡೆಸಿರೋದು ವಿಶೇಷ.

  ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಮಗಳು ಕಾಲಿವುಡ್ ಚಿತ್ರರಂಗದ ಮೂಲಕ ಬೆಳ್ಳಿತೆರೆ ಪ್ರವೇಶಿಸಿ, ಇದೀಗ ಕನ್ನಡ ಚಿತ್ರರಂಗದಲ್ಲಿ ಕಮಾಲ್ ಮಾಡಲು ತಯಾರಾಗಿದ್ದು, ಎಲ್ಲರಿಗೂ ತಿಳಿದಿರೋ ವಿಚಾರ.

  ಬಿಗ್ ಬಾಸ್ ಖ್ಯಾತಿಯ ಚಂದನ್ ಅವರ ಜೊತೆ 'ಪ್ರೇಮ ಬರಹ' ಎಂಬ ಸಿನಿಮಾದ ಮೂಲಕ ಕನ್ನಡದಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ, ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಅರ್ಜುನ್ ಅವರು.[ಚಿತ್ರಗಳು: ಅದ್ದೂರಿಯಾಗಿ 'ಪ್ರೇಮ ಬರಹ' ಆರಂಭಿಸಿದ ಅರ್ಜುನ್ ಸರ್ಜಾ]

  ಇದೀಗ ಐಶ್ವರ್ಯ ಅರ್ಜುನ್ ಅವರ ಸಾಲಿಗೆ ಇನ್ನೊಂದು ಪ್ರತಿಭೆ ಹೊಸತಾಗಿ ಸೇರ್ಪಡೆಗೊಳ್ಳುತ್ತಿದೆ. ಆಗಿನ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೀರೋ ಕಮ್ ವಿಲನ್ ಆಗಿ ಘರ್ಜನೆ ಮಾಡಿದ್ದ ಖ್ಯಾತ ನಟರೊಬ್ಬರ ಮುದ್ದು ಮಗಳು, ಇದೀಗ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಒಳ ಬರಲು ಸಜ್ಜಾಗುತ್ತಿದ್ದಾರೆ. ಯಾರು 'ಆ' ಚೆಲುವೆ, ಮುಂದೆ ಓದಿ....

  ಯಾರು 'ಆ' ಚೆಲುವೆ

  ಯಾರು 'ಆ' ಚೆಲುವೆ

  'ನಿಷ್ಕರ್ಷ' ಚಿತ್ರದಲ್ಲಿ ಖಳನಟನಾಗಿ ಮಿಂಚಿದ್ದ ನಟ ಬಿಸಿ ಪಾಟೀಲ್ ಅವರ ಮುದ್ದು ಮಗಳು ಇದೀಗ ಬೆಳ್ಳಿ ತೆರೆಗೆ ಎಂಟ್ರಿ ಕೊಡಲು ತುದಿಗಾಲಲ್ಲಿ ನಿಂತಿದ್ದಾರೆ. 'ಕೌರವ' ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡಿ 'ಕೌರವ' ಅಂತಾನೇ ಸ್ಯಾಂಡಲ್ ವುಡ್ ನಲ್ಲಿ ಪರಿಚಿತರಾದ ನಟ ಬಿಸಿ ಪಾಟೀಲ್ ಅವರು ತಮ್ಮ ಪ್ರೊಡಕ್ಷನ್ ನಲ್ಲಿಯೇ ಮಗಳನ್ನು ಚಿತ್ರರಂಗಕ್ಕೆ ಪರಿಚಯ ಮಾಡಿ ಕೊಡಲಿದ್ದಾರೆ.[ರಜತ ಪರದೆಗೆ ಬಿಸಿ ಪಾಟೀಲ್ ಕುವರಿ ಸೃಷ್ಠಿ ಪಾಟೀಲ್?]

  ಸೃಷ್ಟಿ ಪಾಟೀಲ್

  ಸೃಷ್ಟಿ ಪಾಟೀಲ್

  ಸದ್ಯಕ್ಕೆ ಆಗಾಗ ಸಿನಿಮಾಗಳಲ್ಲಿ ಕಾಣಿಸಿಕೊಂಡು, ರಾಜಕೀಯದಲ್ಲಿ ಸಕ್ರೀಯರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ, ನಟ ಬಿಸಿ ಪಾಟೀಲ್ ಅವರ ಮುದ್ದು ಮಗಳು ಸೃಷ್ಟಿ ಪಾಟೀಲ್ ಅವರು ಇದೀಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ.

  ಪನ್ನಗಾಭರಣ ನಿರ್ದೇಶನ

  ಪನ್ನಗಾಭರಣ ನಿರ್ದೇಶನ

  ಹಿರಿಯ ನಿರ್ದೇಶಕ ನಾಗಾಭರಣ ಪುತ್ರ ಪನ್ನಗಾಭರಣ ಅವರು ಚೊಚ್ಚಲವಾಗಿ ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ನಟಿ ಸೃಷ್ಟಿ ಪಾಟೀಲ್ ಅವರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಬಿಸಿ ಪಾಟೀಲ್ ಅವರೇ ಬಂಡವಾಳ ಹೂಡುತ್ತಿದ್ದಾರೆ.

  ಯಾವ ಸಿನಿಮಾ?

  ಯಾವ ಸಿನಿಮಾ?

  'ಹ್ಯಾಪಿ ನ್ಯೂ ಇಯರ್' ಎಂಬ ಚಿತ್ರದಲ್ಲಿ ಸೃಷ್ಟಿ ಪಾಟೀಲ್ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಈಗಾಗಲೇ ಸಿನಿಮಾ ಮುಹೂರ್ತ ನೆರವೇರಿಸಿಕೊಂಡಿದ್ದು, ಸದ್ಯದಲ್ಲೇ ಶೂಟಿಂಗ್ ಆರಂಭವಾಗಲಿದೆ.

  ಮಲ್ಟಿಸ್ಟಾರರ್ ಸಿನಿಮಾ

  ಮಲ್ಟಿಸ್ಟಾರರ್ ಸಿನಿಮಾ

  ಅಂದಹಾಗೆ ಇದೊಂದು ಮಲ್ಟಿಸ್ಟಾರರ್ ಸಿನಿಮಾ ಆಗಿದ್ದು, ಚಿತ್ರದಲ್ಲಿ ಧನಂಜಯ್, ಶ್ರುತಿ ಹರಿಹರನ್, ವಿಜಯ ರಾಘವೇಂದ್ರ, ಸೃಷ್ಟಿ ಪಾಟೀಲ್, ಬಿಸಿ ಪಾಟೀಲ್, ದಿಗಂತ್, ಸಾಯಿ ಕುಮಾರ್ ಹಾಗೂ ಇನ್ನೂ ಕೆಲವು ಖ್ಯಾತ ನಟ-ನಟಿಯರು ಅಭಿನಯಿಸುತ್ತಿದ್ದಾರೆ.

  ತಂದೆ-ಮಗಳ ಜುಗಲ್ ಬಂದಿ

  ತಂದೆ-ಮಗಳ ಜುಗಲ್ ಬಂದಿ

  ಇನ್ನು ಈ ಸಿನಿಮಾದಲ್ಲಿ ನಟ ಬಿಸಿ ಪಾಟೀಲ್ ಅವರು ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದ್ದರಿಂದ ಚೊಚ್ಚಲ ಚಿತ್ರದಲ್ಲಿಯೇ ಸೃಷ್ಟಿ ಪಾಟೀಲ್ ಅವರಿಗೆ ಅಪ್ಪನ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ದೊರೆತಿದೆ.

  ದಿಗಂತ್ ಗೆ ಜೋಡಿಯಾದ ಸೃಷ್ಟಿ

  ದಿಗಂತ್ ಗೆ ಜೋಡಿಯಾದ ಸೃಷ್ಟಿ

  'ಹ್ಯಾಪಿ ನ್ಯೂ ಇಯರ್' ಚಿತ್ರದಲ್ಲಿ ನಟ ದೂದ್ ಪೇಡಾ ದಿಗಂತ್ ಅವರ ಜೊತೆ ಸೃಷ್ಟಿ ಪಾಟೀಲ್ ಅವರು ಡ್ಯುಯೆಟ್ ಹಾಡಲಿದ್ದಾರೆ. ಮೊದಲ ಚಿತ್ರದಲ್ಲಿಯೇ ಸ್ಟಾರ್ ನಟನ ಜೊತೆ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಸೃಷ್ಟಿ ಫುಲ್ ಖುಷ್ ಆಗಿದ್ದಾರೆ.

  English summary
  Daughter of actor-turned- politician BC Patil, Shrusti Patil, is all set to make her Sandalwood debut. Shrusti Patil has act in Pannaga Bharana's debut directorial Kannada Movie 'Happy New Year' along with Actor Diganth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X