For Quick Alerts
  ALLOW NOTIFICATIONS  
  For Daily Alerts

  ರಜತ ಪರದೆಗೆ ಬಿಸಿ ಪಾಟೀಲ್ ಕುವರಿ ಸೃಷ್ಠಿ ಪಾಟೀಲ್?

  By Rajendra
  |

  ನಟ ಕಮ್ ರಾಜಕಾರಣಿ ಬಿ.ಸಿ.ಪಾಟೀಲ್ ಅವರೇನೋ ಕೌರವನಾಗಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಈಗ ಅವರ ಎರಡನೇ ಮಗಳು ಸೃಷ್ಠಿ ಪಾಟೀಲ್ ಸಹ ರಜತ ಪರದೆ ಬೆಳಗಲು ಬರುತ್ತಿದ್ದಾರೆ. ಸದ್ಯಕ್ಕೆ ಅವರು ಸ್ಮಾರ್ಟ್ ಹೋಂ ಅಪ್ಲೈಯನ್ಸಸ್ ಬಿಜಿನೆಸ್ ನಲ್ಲಿ ತೊಡಗಿಕೊಂಡಿದ್ದು ಈಗ ಬೆಳ್ಳಿಪರದೆಗೆ ಅಡಿಯಿಡಲು ಮುಂದಾಗಿದ್ದಾರೆ.

  'ಕೌರವ' ಚಿತ್ರದ ಭಾಗ 2 ಮಾಡುವ ಸಂಬಂಧ ಪಾಟೀಲ್ ಅವರು ಸುದ್ದಿಗೋಷ್ಠಿ ಕರೆದಿದ್ದರು. ಈ ಸಂದರ್ಭದಲ್ಲಿ ಅಪ್ಪನ ಜೊತೆ ಸೃಷ್ಠಿಯೂ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬೆಳ್ಳಿತೆರೆಗೆ ಅಡಿಯಿಡುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸೃಷ್ಟಿ ಅವರ ಉತ್ತರ ಮೌನವೇ ಆಗಿತ್ತು. ಅಂದರೆ ಮೌನಂ ಸಮ್ಮತಿ ಲಕ್ಷಣಂ ಎಂದರ್ಥ ತಾನೆ?

  ಸೃಷ್ಠಿ ಅವರು ಬೆಳ್ಳಿತೆರೆಗೆ ಬರುವ ಬಗ್ಗೆ ಮನೆಯಲ್ಲಾಗಲಿ ಅಥವಾ ಪಾಟೀಲ್ ಕಡೆಯಿಂದಲಾಗಲಿ ಏನೂ ವಿರೋಧ ಇಲ್ಲವಂತೆ. "ಅವಳು ಈಗಷ್ಟೇ ಬಿಬಿಎಂ ಮುಗಿಸಿದ್ದಾರೆ. ಮುಂದೆ ಎಂಬಿಎ ಮಾಡಬೇಕು ಎಂಬುದು ಅವಳ ಉದ್ದೇಶ" ಎನ್ನುತ್ತಾರೆ ಸೃಷ್ಠಿ ಅವರ ತಾಯಿ ಶ್ರೀಮತಿ ವನಜಾ ಪಾಟೀಲ್.

  ಕಮ್ಮನಹಳ್ಳಿ ಕಲ್ಯಾಣನಗರದಲ್ಲಿರುವ ಕೌರವ ಫ್ಲಾಜಾದಲ್ಲಿ ಸ್ಮಾರ್ಟ್ ಹೋಂ ಅಪ್ಲೈಯನ್ಸನ್ ನಡೆಸಿತ್ತಿರುವ ಸೃಷ್ಠಿ ಅವರು ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಪಾಟೀಲ್ ಅವರ ಲಂಕೇಶ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ. ಚಿತ್ರರಂಗದ ಕಡೆಗೆ ಅವರಿಗೆ ಒಲವು ಇದ್ದೇ ಇದೆ. ಯಾವಾಗ ಎಂಬುದನ್ನು ಕಾಲವೇ ನಿರ್ಧರಿಸಬೇಕು. (ಏಜೆನ್ಸೀಸ್)

  English summary
  Actor cum politician BC Patil second daughter Srushti Patil is likely to debut Kannada silver screen. Srushti Patil is a graduate in BBM as of now and she wants to do MBA.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X