»   » 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರಕ್ಕೆ ಸ್ಫೂರ್ತಿಯಾದ ಮಂಗಳೂರಿನ ನೈಜ ಘಟನೆ!

'ಬ್ಯೂಟಿಫುಲ್ ಮನಸ್ಸುಗಳು' ಚಿತ್ರಕ್ಕೆ ಸ್ಫೂರ್ತಿಯಾದ ಮಂಗಳೂರಿನ ನೈಜ ಘಟನೆ!

Posted By:
Subscribe to Filmibeat Kannada

ಸತೀಶ್ ನೀನಾಸಂ ಹಾಗೂ ಶೃತಿ ಹರಿಹರನ್ ಅಭಿನಯದ 'ಬ್ಯೂಟಿಫುಲ್ ಮನಸ್ಸುಗಳು' ಎರಡನೇ ವಾರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

ಈ ಹಿಂದೆ ಚಿತ್ರದ ನಿರ್ದೇಶಕ ಜಯತೀರ್ಥ, 'ಬ್ಯೂಟಿಫುಲ್ ಮನಸ್ಸುಗಳು' ನೈಜಕಥೆಯಾಧರಿತ ಚಿತ್ರ, ಇದು ನಿಜಜೀವನದಲ್ಲಿ ನಡೆದ ನೈಜ ಘಟನೆ ಎಂದು ಹೇಳಿಕೊಂಡಿದ್ದರು. ಈಗ ಸಿನಿಮಾ ರಿಲೀಸ್ ಆಗಿದ್ದು, ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಕೆಲವರಿಗೆ ಇದು ಯಾವ ನೈಜ ಘಟನೆ ಎಂದು ಗೊತ್ತಾಗಿದ್ರೆ, ಮತ್ತೆ ಕೆಲವರಿಗೆ ಇದು ಯಾವಾಗ ನಡೆದ ಘಟನೆ ಎಂದು ಅನುಮಾನ ಕಾಡುತ್ತಿತ್ತು. ಸೋ, ಡೋಂಟ್ ವರಿ, ನಾವ್ ಅದನ್ನ ವಿಡಿಯೋ ಸಮೇತ ತೋರಿಸ್ತಿವಿ.

ಮಂಗಳೂರಿನ ಘಟನೆ ಆಧರಿತ ಸಿನಿಮಾ!

2012, ಫೆಬ್ರವರಿ 2 ರಂದು ಮಂಗಳೂರಿನ ಬ್ಯೂಟಿಪಾರ್ಲರ್ ಗಳ ಮೇಲೆ ಪೊಲೀಸರು ದಾಳಿ ಮಾಡಿ, ವೇಶ್ಯವಾಟಿಕೆ ಆರೋಪದಡಿ ಮಾಲೀಕ ಹಾಗೂ ಅಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯರನ್ನ ಬಂಧಿಸಿದ್ದರು. ಈ ಹುಡುಗಿಯರಲ್ಲಿ ಒಬ್ಬರ ಪ್ರೇಮಕಥೆಯೇ ಈಗ 'ಬ್ಯೂಟಿಫುಲ್ ಮನಸ್ಸುಗಳು' ಆಗಿ ತೆರೆಮೇಲೆ ಮೂಡಿಬಂದಿದೆ.[ಬ್ಯೂಟಿಫುಲ್ ಆದ 'ಬ್ಯೂಟಿಫುಲ್ ಮನಸ್ಸುಗಳು' ಗೆ ವಿಮರ್ಶಕರ ಕಾಮೆಂಟ್‌ಗಳಿವು...]

ವೇಶ್ಯವಾಟಿಕೆ ಆರೋಪದಲ್ಲಿ ಹುಡುಗಿ ಬಂಧನ!

ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಕಿರಣ್ ಮತ್ತು ಪೊಲೀಸ್ ಪೇದೆಗಳಾದ ಪ್ರಮೋದ್, ಶಿವಪ್ಪ ಎಂಬವರು ಈ ಬ್ಯೂಟಿ ಪಾರ್ಲರ್ ಮೇಲೆ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪದಡಿ ದಾಳಿ ಮಾಡಿದ್ದರು. ಈ ವೇಳೆ ಬ್ಯೂಟಿಪಾರ್ಲರ್ ಮಾಲೀಕ ಲೊಕೇಶ್ ಸೇರಿದಂತೆ ಮಹಿಳೆಯರನ್ನ ಬಂಧಿಸಲಾಗಿತ್ತು. ಇವರಲ್ಲಿ ಒಬ್ಬ ಹುಡುಗಿ ಕೂಡ ಇದ್ದಳು.[ಬ್ಯೂಟಿಫುಲ್ ಮನಸ್ಸುಗಳು' ಚಿತ್ರ ನೋಡಿದವರ ಟ್ವಿಟರ್ ಕಾಮೆಂಟ್ಸ್]

ನಿಜವಾಗಲೂ ನಡೆದಿದ್ದೇನು?

ಆದ್ರೆ, ಬ್ಯೂಟಿ ಪಾರ್ಲರ್ ನಲ್ಲಿ ಯಾವುದೇ ರೀತಿಯ ಅನೈತಿಕ ಚಟುವಟಿಕೆ ನಡೆಯುತ್ತಿರಲಿಲ್ಲ. ಪೊಲೀಸರು ಸುಳ್ಳು ಆರೋಪ ಮಾಡಿ, ಅವರೇ ಈ ಕೃತ್ಯವನ್ನ ಪೂರ್ವ ನಿಯೋಜಿತವಾಗಿ ಸೃಷ್ಟಿಸಿ ಹಣ ವಸೂಲಿ ಮಾಡಿದ್ದರು. ಅದಾದ ಬಳಿಕ ತನಿಖೆಯಲ್ಲಿ ಪೊಲೀಸರೇ ತಪ್ಪಿತಸ್ಥರು ಎಂದು ತಿಳಿದು ಅಮಾನತು ಕೂಡ ಆಗಿದ್ದರು.[ಇಲ್ಲಿದೆ ನೋಡಿ ಆ ನೈಜ ಘಟನೆಯ ವಿಡಿಯೋ]

ಈ ಪ್ರಕರಣದಲ್ಲಿ ನಲಗಿತ್ತು ಮುಗ್ದ ಪ್ರೇಮ!

ಈ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯೊಬ್ಬಳ ಪ್ರೀತಿ, ಈ ಪ್ರಕರಣದಿಂದ ನಲುಗಿ ಹೋಗಿತ್ತು. ಈ ಕಥೆಯನ್ನಿಟ್ಟು ನಿರ್ದೇಶಕ ಜಯತೀರ್ಥ 'ಬ್ಯೂಟಿಫುಲ್ ಮನಸ್ಸುಗಳು' ಎಂಬ ಸಿನಿಮಾ ಮಾಡಿದ್ದಾರೆ.[ವಿಮರ್ಶೆ: 'ಬ್ಯೂಟಿಫುಲ್ ಮನಸ್ಸುಗಳು' ಪ್ರಸ್ತುತ ಸಮಾಜಕ್ಕೆ ಕನ್ನಡಿ]

ನೈಜ ಘಟನೆ ಬಿಚ್ಚಿಟ್ಟ ನೀನಾಸಂ!

ಇದೀಗ, ಘಟನೆ ಆದ ವಿಡಿಯೋವನ್ನ ನಟ ನೀನಾಸಂ ಸತೀಶ್, ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡುವ ಮೂಲಕ, ನೈಜ ಕಥೆಯ ಬಗ್ಗೆ ಬಿಚ್ಚಿಟ್ಟಿದ್ದಾರೆ.[ನೀನಾಸಂ ಸತೀಶ್ ಅಪ್ ಲೌಡ್ ಮಾಡಿರುವ ವಿಡಿಯೋ]

English summary
Neenasam Satish and Shruthi Hariharan Starrer Beautiful Manasugalu Released and Running Successfully. The Movie is said to be based on the Real-life incident. Now Actor Sathish revealed the video of Real-life incident at mangalore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada