»   » ಕನ್ನಡ ಚಿತ್ರಗಳಿಗೆ ನಿಮ್ಮಿಂದಲೇ ಅನ್ಯಾಯ: ಸತೀಶ್ ನೀನಾಸಂ ಆಕ್ರೋಶ!

ಕನ್ನಡ ಚಿತ್ರಗಳಿಗೆ ನಿಮ್ಮಿಂದಲೇ ಅನ್ಯಾಯ: ಸತೀಶ್ ನೀನಾಸಂ ಆಕ್ರೋಶ!

Written By:
Subscribe to Filmibeat Kannada

ಕನ್ನಡ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ ಎಂಬುದು ಇಂದಿನದಲ್ಲ. ಇದು ಹಲವು ವರ್ಷಗಳಿಂದ ನಡೆಯುತ್ತಲೇ ಬಂದಿದೆ. ವಿಪರ್ಯಾಸವೆಂದರೇ ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಥಿಯೇಟರ್ ಸಿಗುತ್ತಿಲ್ಲ ಎಂಬುದು ಖಂಡಿಸಬೇಕಾಗಿರುವುದೇ ಬಿಡಿ.

ಈಗ ಇಂತಹ ಸಮಸ್ಯೆಯನ್ನ ನಟ ಸತೀಶ್ ನೀನಾಸಂ ಎದುರಿಸುತ್ತಿದ್ದಾರೆ. ಹೌದು, ಸತೀಶ್ ನೀನಾಸಂ ಹಾಗೂ ಶೃತಿ ಹರಿಹರನ್ ಅಭಿನಯದ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರ ಇದೇ 20 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಆದ್ರೆ, ಈ ಚಿತ್ರಕ್ಕೆ ಹೆಚ್ಚಿನ ಚಿತ್ರಮಂದಿರಗಳು ಸಿಕ್ಕಿಲ್ಲ. ಕಾರಣ ಪರಭಾಷಾ ಚಿತ್ರಗಳ ಹಾವಳಿ.

Beautiful Manasugalu Releasing on January 20th

ಹೌದು, ಇಂತಾಹದೊಂದು ಕಷ್ಟಕರ ಪರಿಸ್ಥಿತಿ ಈಗ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರಕ್ಕೆ ಎದುರಾಗಿದ್ದು, ಸತೀಶ್ ನೀನಾಸಂ ಅವರು ಆಕ್ರೋಶಗೊಂಡಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ತಮ್ಮ ಸಾಲುಗಳ ಮೂಲಕ ಕೋಪ ಹೊರಹಾಕಿದ್ದಾರೆ.

''20 ನೇ ತಾರೀಖು ನಮ್ಮ ಸಿನಿಮಾ ಬಿಡುಗಡೆ, 2 ತೆಲುಗು ಸಿನಿಮಾ, ಕರ್ನಾಟಕದಲ್ಲಿರೋ ಅರ್ಧ ಚಿತ್ರಮಂದಿರಗಳನ್ನು ಖರೀದಿ ಮಾಡಿವೆ. 27ಕ್ಕೆ ಎರಡು ಹಿಂದಿ ಸಿನಿಮಾ ಎಲ್ಲಾ ಮಲ್ಟಿಫ್ಲೆಕ್ಸ್ ಗಳನ್ನ ಆಕ್ರಮಣ ಮಾಡುತ್ತೆ. ತಮಿಳು ಒಂದಿಷ್ಟು ಕಡೆ. ನಾವು ಒಂದೊಳ್ಳೆ ಸ್ವಮೇಕ್ ಸಿನಿಮಾ ಮಾಡಿ ಬಾಯಿ ಬಡಕೋತ ಇದೀವಿ, ಆದ್ರೆ ನಮಗೆ ಥಿಯೇಟರ್ ಇಲ್ಲ. ಹಾಗಾದ್ರೆ ನಾವು ನಮ್ಮ ಸಿನಿಮಾವನ್ನು ಎಲ್ಲಿ ಬಿಡುಗಡೆ ಮಾಡ್ಬೇಕು? ಮುಂಬೈಯಲ್ಲಾ, ಹೈದರಬಾದ್ ನಲ್ಲಾ ಅಥವಾ ಚೆನೈನಲ್ಲ''

Beautiful Manasugalu Releasing on January 20th

''ಹೊಸಪೇಟೆನಲ್ಲಿ 'ಕಿರಿಕ್ ಪಾರ್ಟಿ' ತೆಗೆದು, ತೆಲುಗು ಸಿನಿಮಾ ಹಾಕಿದ್ದಾರೆ. ನಮ್ಮ ಬಾಯಿಗೆ ಮಣ್ಣು ಹಾಕಿ ಬೇರೆಯವರ ಬಾಯಿಗೆ ಅಮೃತ ಹಾಕುತ್ತಿದ್ದೀರಾ. ಇದನ್ನು ಕೇಳೋರು ಯಾರು ಇಲ್ವ ? ಅವರ ರಾಜ್ಯದಲ್ಲಿ ನಮ್ಮ ಸಿನಿಮಾನು ಹಾಕಿ, ನಮ್ದು ಒಳ್ಳೆ ಸಿನಿಮಾಗಳೇ, ಹೊಸ ನಿರ್ದೇಶಕರು, ಹೊಸ ನಟರು ಹೊಸ ಪ್ರಯತ್ನ ಮಾಡಿ ಗೆದ್ದು ತೋರಿಸಿದಾರೆ. ಕನ್ನಡದಲ್ಲಿ ಹೊಸ ಪ್ರಯತ್ನ ಆಗೊಲ್ಲ ಅಂತ ಇಷ್ಟ ದಿನ ಬೊಬ್ಬೆ ಹೊಡೆಯವರೆಲ್ಲ ಎಲ್ಲಿದ್ದಿರಾ? ಇಡೀ ಇಂಡಿಯಾದಲ್ಲಿ ನಮ್ಮಷ್ಟು ವಿಶಿಷ್ಟ ಪ್ರಯತ್ನ ಈಗ ಯಾರು ಮಾಡ್ತಿಲ್ಲ, ನಾವು ಮಾಡ್ತಾ ಇದೀವಿ, ತುಳಿರಿ ಎಲ್ಲ ಕಡೆ ಒಳ್ಳೆದು. ನಾವು ಭಿಕ್ಷುಕರು ನಮ್ಮ ಜಾಗದಲ್ಲಿ ನಮ್ಮ ಥಿಯೇಟರ್‌ಗಾಗಿ ಭಿಕ್ಷೆ ಬೇಡಬೇಕು. ಭಿಕ್ಷುಕರು ನಾವು.......'' ಎಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ತಮ್ಮ ನೋವನ್ನ ವ್ಯಕ್ತಪಡಿಸಿ

English summary
Beautiful Manasugalu will be releasing in Karnataka on January 20th in a good number of screens. Jayateertha is the director of Beautiful Manasugalu And Sruthi Hariharan is the female lead in this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada