»   » ಪ್ರಜ್ವಲ್ ದೇವರಾಜ್ ಮೇಲೆ ಜೇನು ಹುಳಗಳ ದಾಳಿ

ಪ್ರಜ್ವಲ್ ದೇವರಾಜ್ ಮೇಲೆ ಜೇನು ಹುಳಗಳ ದಾಳಿ

Posted By:
Subscribe to Filmibeat Kannada

ಬೆಂಗಳೂರಿನ ವಿಜಯಪುರದ ಇಬ್ರಾಹಿಂ ರೌಜಾದಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಬಹುತಾರಾಗಣ ಇರುವ 'ಚೌಕ' ಚಿತ್ರತಂಡದ ಮೇಲೆ ಜೇನು ಹುಳಗಳು ದಾಳಿ ಮಾಡಿರುವ ಪರಿಣಾಮ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ನಟ ಪ್ರಜ್ವಲ್ ದೇವರಾಜ್, ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಚಿತ್ರತಂಡದ ಕೆಲವರಿಗೆ ಚಿಕ್ಕಪುಟ್ಟ ಗಾಯಗಳಾದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಅದರಲ್ಲಿ ಇಬ್ಬರಿಗೆ ತೀವ್ರ ಗಾಯಗಳಾದ್ದರಿಂದ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಾಗಿ ಭಾನುವಾರ ಆಸ್ಪತ್ರೆಯಿಂಧ ಡಿಸ್ಚಾರ್ಜ್ ಆಗಿದ್ದಾರೆ.[ಇದಪ್ಪಾ ಕುಳ್ಳ ದ್ವಾರಕೀಶ್ ಅವರ ಹೊಸ ಸಾಹಸ ಅಂದ್ರೆ]

Bees Attack Kannada Movie 'Chauka' Unit at Vijayapura

ಬಹುತಾರಾಗಣ ಇರುವ 'ಚೌಕ' ಚಿತ್ರದ ನಾಯಕರಲ್ಲಿ ಒಬ್ಬರಾದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಭಾಗದ ಚಿತ್ರೀಕರಣವನ್ನು ಛಾಯಾಗ್ರಾಹಕ ಎಸ್.ಕೃಷ್ಣ ಅವರ ನೇತೃತ್ವದಲ್ಲಿ ಶನಿವಾರ (ಫೆಬ್ರವರಿ 27) ಸಂಜೆ ಇಬ್ರಾಹಿಂ ರೌಜಾದಲ್ಲಿ ನಡೆಸಲಾಗಿತ್ತು.

ಶನಿವಾರ ಸಂಜೆ ಸುಮಾರು 5 ಘಂಟೆಯ ವೇಳೆಗೆ ನಿರ್ದೇಶಕ ತರುಣ್ ಸುಧೀರ್, ಕ್ಯಾಮರಾಮೆನ್ ಎಸ್.ಕೃಷ್ಣ ಹಾಗೂ ನಟ ಸೇರಿದಂತೆ ಇಡೀ ಚಿತ್ರತಂಡ ಪ್ಯಾಕಪ್ ಮಾಡುವ ಹೊತ್ತಿಗೆ ಈ ಘಟನೆ ನಡೆದಿತ್ತು.['ಚೌಕ'ದಿಂದ ಚಿರು ಹೋದ್ರು, ಚಿನ್ನಾರಿ ಮುತ್ತಾ ಬಂದ್ರು]

Bees Attack Kannada Movie 'Chauka' Unit at Vijayapura

'ನಮ್ಮ ಸೆಟ್ ನಿಂದ ಸುಮಾರು 20 ಮೀಟರ್ ದೂರದಲ್ಲಿದ್ದ ಜೇನು ಗೂಡಿನ ಬಗ್ಗೆ ನಮಗೆ ಅರಿವಿತ್ತು. ಅಲ್ಲದೆ ಸಂಜೆವರೆಗೂ ಅವುಗಳು ನಮಗೆ ತೊಂದರೆ ಕೊಡಲಿಲ್ಲ. ಆದರೆ ತದನಂತರ ಅದೇನಾಯ್ತು ಗೊತ್ತಿಲ್ಲ, ಯಾರಾದರು ಕಲ್ಲು ಹೊಡೆದಿರಬಹುದಾ? ಅಥವಾ ಹುಳಗಳಿಗೆ ಏನೋ ತೊಂದರೆ ಆಗಿರಬಹುದು. ಅವುಗಳು ನಮ್ಮತ್ತ ಧಾವಿಸಿ ಬಂದವು'.[ತರುಣ್ ಸುಧೀರ್ ನಿರ್ದೇಶನದಲ್ಲಿ ದ್ವಾರಕೀಶ್ 50ನೇ ಚಿತ್ರ]

Bees Attack Kannada Movie 'Chauka' Unit at Vijayapura

'ನಾನು ಮತ್ತು ಕೃಷ್ಣ ಅವರು ಛತ್ರಿ ಹಿಡಿದು ಮಲಗಿಬಿಟ್ಟೆವು. ಅದೃಷ್ಟವಶಾತ್ ನಾಯಕ ಪ್ರಜ್ವಲ್ ಅವರಿಗೂ ಹೆಚ್ಚಾಗಿ ಜೇನು ಹುಳಗಳು ಕಚ್ಚಲಿಲ್ಲ. ತಂಡದಲ್ಲಿದ್ದ ಕೆಲವು ಸದಸ್ಯರಿಗೆ ಗಂಭೀರ ಗಾಯಗಳಾಗಿದೆ' ಎಂದು ನಿರ್ದೇಶಕ ತರುಣ್ ಅವರು ನಡೆದ ಘಟನೆಯನ್ನು ವಿವರಿಸಿದ್ದಾರೆ.

ನಿರ್ಮಾಪಕ ಕಮ್ ನಟ 'ಕುಳ್ಳ' ದ್ವಾರಕೀಶ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ 50ನೇ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ದೂದ್ ಪೇಡಾ ದಿಗಂತ್, ಲವ್ಲಿ ಸ್ಟಾರ್ ಪ್ರೇಮ್, ವಿಜಯ ರಾಘವೇಂದ್ರ ಮುಂತಾದವರು ಮಿಂಚಿದ್ದಾರೆ.

English summary
Thousands of bees sting the crew members of Chauka film, swarming over them during the shoot, is currently taking place in Vijayapur's Ibrahim Rauza. The incident, which took place on Saturday (Feb 27). 35 people being stung, all working for Chauka film. There were rushed to a hospital. Apparently two people were seriously injured and admitted in the ICU and discharged on Sunday.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada