For Quick Alerts
  ALLOW NOTIFICATIONS  
  For Daily Alerts

  ಐಂದ್ರಿತಾಗೂ ಮೊದಲೇ ಸ್ಯಾಂಡಲ್ ವುಡ್ ಬಗ್ಗೆ ಉರಿದುಬಿದ್ದಿದ್ದ ರಮ್ಯಾ.!

  By Harshitha
  |

  ''ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ. ಹೀಗಾಗಿ ನಾನು ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇಲ್ಲಿ ನಾಯಕಿಯರಿಗೆ ಉತ್ತಮ ಪಾತ್ರಗಳೇ ಲಭ್ಯವಾಗುತ್ತಿಲ್ಲ. ಹೀರೋ ಹಾಗೂ ಹೀರೋಯಿನ್ ನಡುವೆ ಭೇದಭಾವ ಇದೆ. ಹೀರೋಗಳಿಗೆ ಸಿಗುವ ಶೇ.5% ರಷ್ಟು ಸಂಭಾವನೆ ನಾಯಕಿಯರಿಗೆ ಕೊಡುವುದಿಲ್ಲ'' ಅಂತ ನಟಿ ಐಂದ್ರಿತಾ ರೇ ಸ್ಯಾಂಡಲ್ ವುಡ್ ಬಗ್ಗೆ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. [ಸ್ಯಾಂಡಲ್ ವುಡ್ ಕಹಿಸತ್ಯಗಳನ್ನು ಬಿಚ್ಚಿಟ್ಟ ಐಂದ್ರಿತಾ ರೇ]

  ನಟಿ ಐಂದ್ರಿತಾ ರೇ ನೀಡಿರುವ ಹೇಳಿಕೆ ಅನೇಕರಿಗೆ ಕೋಪ ತರಿಸಿರಬಹುದು. ಕೆಲ ನಿರ್ಮಾಪಕರು ಕಣ್ಣು ಕೆಂಪಗೆ ಮಾಡಿಕೊಂಡಿರಬಹುದು. 'ನಟಿ ಐಂದ್ರಿತಾ ಮೊದಲು ಆಕ್ಟಿಂಗ್ ಕಲಿಯಲಿ' ಅಂತ ಹಲವು ಮಂದಿ ಕಾಮೆಂಟ್ ಮಾಡಬಹುದು.

  ಇಂದು ಸ್ಯಾಂಡಲ್ ವುಡ್ ನಲ್ಲಿ ಹೀರೋಯಿನ್ ಗಳ ಸ್ಥಿತಿ-ಗತಿ ಬಗ್ಗೆ ಬಾಯ್ಬಿಟ್ಟು ನಟಿ ಐಂದ್ರಿತಾ ವಿವಾದಕ್ಕೆ ಗುರಿಯಾಗಿರುವಂತೆ ಕರೆಕ್ಟಾಗಿ ಎರಡು ವರ್ಷದ ಹಿಂದೆ 'ಲಕ್ಕಿ ಸ್ಟಾರ್' ರಮ್ಯಾ ಕೂಡ ಇದೇ ವಿಚಾರದ ಬಗ್ಗೆ ಸೌಂಡ್ ಮಾಡಿದ್ದರು. ಸ್ಯಾಂಡಲ್ ವುಡ್ ನಲ್ಲಿರುವ ಲಿಂಗ ತಾರತಮ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಉರಿದುಬಿದ್ದಿದ್ದರು.

  ನಿಮಗೆ ನೆನಪಿಲ್ಲಾ ಅಂದ್ರೆ, ಒಂದು ಸಣ್ಣ ಫ್ಲ್ಯಾಶ್ ಬ್ಯಾಕ್ ಗೆ ಹೋಗ್ಬರೋಣ ಬನ್ನಿ.....

  ಅಂದು ರಮ್ಯಾ ಏನಂತ ಹೇಳಿದ್ರು?

  ಅಂದು ರಮ್ಯಾ ಏನಂತ ಹೇಳಿದ್ರು?

  ''ಸಮಾಜದಲ್ಲಿ ಹೆಣ್ಣು ಗಂಡು ಸಮಾನರು, ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ಇಂದು ಸಬಲರಾಗಿದ್ದಾರೆ. ಆದರೆ, ಅವರ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಕನ್ನಡ ಚಿತ್ರರಂಗದಲ್ಲಿ ಇನ್ನೆಷ್ಟು ದಿನ ಈ ರೀತಿ ಲಿಂಗ ತಾರತಮ್ಯ ಮುಂದುವರೆಯಬೇಕು?'' ಅಂತ ತಮ್ಮ ಫೇಸ್ ಬುಕ್ ನಲ್ಲಿ ರಮ್ಯಾ ಸ್ಟೇಟಸ್ ಪೋಸ್ಟ್ ಮಾಡಿದ್ದರು. [ಸಮಾನ ಸಂಭಾವನೆ ಕೇಳಿದ ರಮ್ಯಾ, ಕೆರಳಿದ ಫ್ಯಾನ್ಸ್]

  ಕಾರಣ ಏನು?

  ಕಾರಣ ಏನು?

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ 'ದೊಡ್ಮನೆ ಹುಡ್ಗ' ಚಿತ್ರದಲ್ಲಿ ಲಕ್ಕಿ ಸ್ಟಾರ್ ರಮ್ಯಾ ನಾಯಕಿ ಆಗಿ ಅಭಿನಯಿಸಬೇಕಿತ್ತು. ಆದ್ರೆ, ಸಂಭಾವನೆ ವಿಚಾರದಲ್ಲಿ ಕಿರಿಕ್ ಆದ ಕಾರಣ 'ದೊಡ್ಮನೆ ಹುಡ್ಗ' ಚಿತ್ರದಿಂದ ರಮ್ಯಾ ಹೊರ ನಡೆದರು ಎನ್ನಲಾಗಿದೆ.

  ಸಂಭಾವನೆ ಬಗ್ಗೆ ಚಕಾರ ಎತ್ತಿದ ರಮ್ಯಾ.!

  ಸಂಭಾವನೆ ಬಗ್ಗೆ ಚಕಾರ ಎತ್ತಿದ ರಮ್ಯಾ.!

  ಪರಭಾಷೆ ನಾಯಕಿಯರಿಗೆ ಹೆಚ್ಚಿನ ಸಂಭಾವನೆ ಕೊಡುವ ನಿರ್ಮಾಪಕರು ಕನ್ನಡದ ನಟಿಯರಿಗೆ ಯಾಕೆ ಕೊಡುವುದಿಲ್ಲ ಎಂಬುದು ರಮ್ಯಾ ಪ್ರಶ್ನೆ ಆಗಿತ್ತು.

  ಹೀರೋ ಜೊತೆ ತಾರತಮ್ಯ

  ಹೀರೋ ಜೊತೆ ತಾರತಮ್ಯ

  ''ಹೀರೋಗಳಿಗೆ ಸಿಗುವ ಸಂಭಾವನೆಯ ಕಾಲು ಭಾಗದಷ್ಟು ಮಾತ್ರ ನಮಗೆ ಸಿಗುತ್ತದೆ'' ಅಂತ ರಮ್ಯಾ ಅಂದೇ ಹೇಳಿದ್ದರು.

  ನಿರ್ಮಾಪಕರ ಪರ ಇದ್ದ ರಮ್ಯಾ.!

  ನಿರ್ಮಾಪಕರ ಪರ ಇದ್ದ ರಮ್ಯಾ.!

  ''ಸೇವಂತಿ ಸೇವಂತಿ', 'ಆಕಾಶ್', 'ಅರಸು' ಚಿತ್ರಗಳಿಗೆ ಸಂಭಾವನೆ ಬಗ್ಗೆ ಮಾತನಾಡದೆ ಒಪ್ಪಿಕೊಂಡು ನಿರ್ಮಾಪಕರ ಪರ ನಿಂತಿದ್ದೆ. ಆದ್ರೆ, ನನಗೆ ಅನ್ಯಾಯವಾಗಿದೆ'' ಅಂತ ಹೇಳಿದ್ದರು ರಮ್ಯಾ.

  ರಮ್ಯಾ ಪರ ನೆಗೆಟಿವ್ ಕಾಮೆಂಟ್ಸ್ ಹೆಚ್ಚು.!

  ರಮ್ಯಾ ಪರ ನೆಗೆಟಿವ್ ಕಾಮೆಂಟ್ಸ್ ಹೆಚ್ಚು.!

  ಆಗಲೂ ನಟಿ ರಮ್ಯಾ ಪರ ನೆಗೆಟಿವ್ ಕಾಮೆಂಟ್ಸ್ ಹೆಚ್ಚಾಗಿ ಬಂದಿದ್ದವು.

  ನಟಿ ಐಂದ್ರಿತಾ ರೇ ಏನು ಹೇಳುತ್ತಾರೆ?

  ನಟಿ ಐಂದ್ರಿತಾ ರೇ ಏನು ಹೇಳುತ್ತಾರೆ?

  ''ನಾಯಕ ನಟರು ಬಟ್ಟೆ ಬದಲಿಸಲು ಕ್ಯಾರಾವ್ಯಾನ್ ಇರುತ್ತೆ. ಆದ್ರೆ, ಹೀರೋಯಿನ್ ಗಳಿಗೆ ಇರುವುದಿಲ್ಲ. ನಾನು ಎಷ್ಟೋ ಬಾರಿ ಮರದ ಕೆಳಗೆ ಡ್ರೆಸ್ ಚೇಂಜ್ ಮಾಡಿದ್ದೇನೆ'' ಎನ್ನುತ್ತಾರೆ ನಟಿ ಐಂದ್ರಿತಾ ರೇ.

  ಮೊದಲು ದನಿ ಎತ್ತಿದ್ದು ನಟಿ ತಾರಾ.!

  ಮೊದಲು ದನಿ ಎತ್ತಿದ್ದು ನಟಿ ತಾರಾ.!

  ಹಾಗ್ನೋಡಿದ್ರೆ, ಕನ್ನಡ ಚಿತ್ರರಂಗದಲ್ಲಿ ಕನ್ನಡ ನಟಿಯರು ಎದುರಿಸುತ್ತಿರುವ ತಾರತಮ್ಯದ ಬಗ್ಗೆ ಮೊದಲು ದನಿ ಎತ್ತಿದ್ದು ನಟಿ ತಾರಾ. ಆಗ, ಇಷ್ಟೆಲ್ಲಾ ವಿವಾದ ಆಗಲೇ ಇಲ್ಲ.

  English summary
  Much before Kannada Actress Aindrita Ray, 'Lucky Star', EX MP, Ramya had demanded for the equal pay for both the genders in Kannada Film Industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X