For Quick Alerts
  ALLOW NOTIFICATIONS  
  For Daily Alerts

  ರೈತರನ್ನು ಭಯೋತ್ಪಾದಕರೆಂದ ಕಂಗನಾ ವಿರುದ್ಧ ಬೆಳಗಾವಿಯಲ್ಲಿ ದೂರು

  By ಬೆಳಗಾವಿ ಪ್ರತಿನಿಧಿ
  |

  ಹಿಡಿತವಿಲ್ಲದ ಟ್ವೀಟ್‌ಗಳಿಂದಾಗಿ ಪದೇ-ಪದೇ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ನಟಿ ಕಂಗನಾ ರಣೌತ್. ಆದರೂ ಅವರಿಗೆ ಬುದ್ಧಿ ಬಂದಂತಿಲ್ಲ. ಈ ಹಿಂದೆ ರೈತ ಮಹಿಳೆಯ ಬಗ್ಗೆ ಬಹು ಕೀಳಾಗಿ ಟ್ವೀಟ್ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದ ಕಂಗನಾ ಈಗ ಮತ್ತೊಮ್ಮೆ ರೈತರನ್ನು ಭಯೋತ್ಪಾದಕರು ಎಂದಿದ್ದಾರೆ.

  ರೈತ ಪ್ರತಿಭಟನೆಗೆ ಬೆಂಬಲ ನೀಡಿ ಅಂತರಾಷ್ಟ್ರೀಯ ಪಾಪ್ ತಾರೆ ರಿಹಾನ್ನ ಮಾಡಿದ್ದ ಟ್ವೀಟ್‌ಗೆ ಪ್ರತಿಟ್ವೀಟ್ ಮಾಡಿದ್ದ ನಟಿ ಕಂಗನಾ ರಣೌತ್, 'ಅಲ್ಲಿ ಪ್ರತಿಭಟಿಸುತ್ತಿರುವವರು ರೈತರಲ್ಲ, ಭಯೋತ್ಪಾದಕರು' ಎಂದಿದ್ದರು. ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ ಕಂಗನಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹಲವು ಕಡೆ ದೂರುಗಳು ಸಹ ದಾಖಲಾಗಿದ್ದವು. ಇದೀಗ ರಾಜ್ಯದ ಬೆಳಗಾವಿಯಲ್ಲಿ ಸಹ ಕಂಗನಾ ವಿರುದ್ಧ ದೂರು ದಾಖಲಾಗಿದೆ.

  ಬೆಳಗಾವಿಯ ನ್ಯಾಯವಾದಿ ಹರ್ಷವರ್ಧನ ಪಾಟೀಲ್ ಅವರು ನಟಿ ಕಂಗನಾ ರಣೌತ್ ವಿರುದ್ಧ ಟಿಳಕವಾಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಕಂಗನಾ ವಿರುದ್ಧ ದೂರು ದಾಖಲಿಸಿಕೊಳ್ಳಲು ಕಾಲಾವಕಾಶ ಕೋರಿದ್ದಾರೆ ಪೊಲೀಸರು.

  ಐಪಿಸಿ ಸೆಕ್ಷನ್ 153, 153(A) 503, 504, 505 (1), 505 (B), 505 (c), 505(2), 506 ಅಡಿ ದೂರು ದಾಖಲಿಸಿಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ ವಕೀಲ ಹರ್ಷವರ್ಧನ್ ಪಾಟೀಲ್. ಒಂದೊಮ್ಮೆ ಪೊಲೀಸರು ದೂರು ದಾಖಲಿಸಿಕೊಳ್ಳದಿದ್ದ ಪಕ್ಷದಲ್ಲಿ ನ್ಯಾಯಾಲಯದಲ್ಲಿ ಖಾಸಗಿಯಾಗಿ ದೂರು ಸಲ್ಲಿಸುತ್ತೇನೆ ಎಂದು ಹರ್ಷವರ್ಧನ್ ಹೇಳಿದ್ದಾರೆ.

  ಮದುವೆಯ ಖುಷಿ ಎಷ್ಟಿದೆ ಅನ್ನೋದನ್ನ ಹಂಚಿಕೊಂಡ ಮಿಲನಾ ನಾಗರಾಜ್ | Filmibeat Kannada

  ದೂರು ನೀಡಿದ ಹರ್ಷವರ್ಧನ್ ಪಾಟೀಲ್, ನಟಿ ಕಂಗನಾ ರಣೌತ್‌ ರ ಅಧಿಕೃತ ಟ್ವಿಟ್ಟರ್ ಖಾತೆಯನ್ನು ರದ್ದು ಮಾಡಬೇಕು, ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

  English summary
  Belgaum lawyer Harshavardhan Patil gave complaint against Kangana Ranaut for calling farmers as terrorists.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X