125 ದಿನ ಪೂರೈಸಿ ವರ್ಷದ ದೊಡ್ಡ ಹಿಟ್ ಆದ 'ಬೆಲ್ ಬಾಟಂ'
Recommended Video
ಒಂದು ಒಳ್ಳೆಯ ಕಥೆ, ಒಂದು ಒಳ್ಳೆಯ ಸಿನಿಮಾದ ಶಕ್ತಿ ಏನು ಎನ್ನುವುದನ್ನು 'ಬೆಲ್ ಬಾಟಂ' ಸಿನಿಮಾ ಸಾಬೀತು ಮಾಡಿದೆ. 125 ದಿನ ಪೂರೈಸಿರುವ ಈ ಚಿತ್ರ ಈ ವರ್ಷದ ದೊಡ್ಡ ಹಿಟ್ ಆಗಿ ಹೊರಹೊಮ್ಮಿದೆ.
ಫೆಬ್ರವರಿ 15 ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಅರ್ಧ ಶತಕ, ಶತಕ ಬಾರಿಸಿ ಈಗ 125 ದಿನ ಪೂರೈಸಿದೆ. ಕಳೆದ ವಾರ ಸಿನಿಮಾ ಕಿರುತೆರೆಯಲ್ಲಿ ಪ್ರಸಾರ ಆಗಿದ್ದರೂ, ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾದ ಪ್ರದರ್ಶನ ಇನ್ನು ನಡೆಯುತ್ತಿದೆ.
ಕಳೆದ ವರ್ಷ 'ಟಗರು' ಸಿನಿಮಾ 125 ದಿನ ಓಡಿತ್ತು. ಅದರ ಬಳಿಕ ಈ ವರ್ಷ 'ಬೆಲ್ ಬಾಟಂ' ಆ ಸಾಧನೆ ಮಾಡಿದೆ. ಈ ವರ್ಷ 125 ದಿನ ಪೂರೈಸಿದ ಮೊದಲ ಸಿನಿಮಾ ಇದಾಗಿದೆ.

ಸಿಕ್ಕಾಪಟ್ಟೆ ಕಾಮಿಡಿಯ ಇದ್ದ ದಿವಾಕರನ ಕಥೆ ಪ್ರೇಕ್ಷಕರಿಗೆ ಬಹಳ ಇಷ್ಟ ಆಗಿತ್ತು. ಫ್ಯಾಮಿಲಿ ಮತ್ತು ಕಾಲೇಜು ಹುಡುಗ ಹುಡುಗಿ ಹೀಗೆ ಎಲ್ಲ ವರ್ಷದ ಪ್ರೇಕ್ಷಕರು ಸಿನಿಮಾವನ್ನು ಏಂಜಾಯ್ ಮಾಡಿದರು.
ಸಿನಿಮಾದ ಈ ಮಟ್ಟದ ಗೆಲುವಿನಲ್ಲಿ ಕಥೆ, ಸಂಭಾಷಣೆ, ನಿರ್ದೇಶನ, ಸಂಗೀತ, ನಟನೆ ಹೀಗೆ ಎಲ್ಲವೂ ಸಾಥ್ ನೀಡಿದೆ. ಈ ಚಿತ್ರದ ಮೂಲಕ ಮತ್ತೆ ನಿರ್ದೇಶಕ ಜಯತೀರ್ಥ ದೊಡ್ಡ ಹಿಟ್ ನೀಡಿದ್ದಾರೆ.
ನಿರ್ದೇಶಕ ರಿಷಬ್ ಶೆಟ್ಟಿ ನಾಯಕನಾದ ಮೊದಲ ಚಿತ್ರದಲ್ಲಿಯೇ ಗೆಲುವು ಕಂಡಿದ್ದಾರೆ. ಹರಿಪ್ರಿಯಾಗೂ ಚಿತ್ರ ಒಳ್ಳೆಯ ಹೆಸರು ತಂದುಕೊಟ್ಟಿದೆ.


Click it and Unblock the Notifications











