For Quick Alerts
  ALLOW NOTIFICATIONS  
  For Daily Alerts

  ಜೂನ್ 16ರಿಂದ ಬೆಂಗಳೂರಿನಲ್ಲಿ ಬೆಂಗಾಳಿ ಮತ್ತು ಕನ್ನಡ ಚಲನಚಿತ್ರೋತ್ಸವ

  By Bharath Kumar
  |

  ಜೂನ್ 16 ರಿಂದ ಬೆಂಗಳೂರಿನಲ್ಲಿ ಬೆಂಗಾಳಿ ಮತ್ತು ಕನ್ನಡ ಚಲನಚಿತ್ರೋತ್ಸವ ನಡೆಯಲಿದ್ದು, ಚಿತ್ರಪ್ರೇಮಿಗಳಿಗೆ ಸಿನಿ ಹಬ್ಬವಾಗಲಿದೆ. ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಸಹಕಾರದಲ್ಲಿ ಈ ಚಿತ್ರೋತ್ಸವ ನಡೆಯಲಿದ್ದು, ಪರ್ಪಲ್ ಹಾರ್ಟ್ ಸಂಸ್ಥೆ ಚಿತ್ರೋತ್ಸವವನ್ನು ನಿರ್ವಹಿಸಲಿದೆ.

  ಜೂನ್ 16, 2017 ರಂದು ಸಂಜೆ 5.00 ಗಂಟೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ. ಬಂಗಾಳಿ ಖ್ಯಾತ ನಟಿ ಮಧಬಿ ಮುಖರ್ಜಿ ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ.

  ಈ ಕಾರ್ಯಕ್ರಮದಲ್ಲಿ ಬಂಗಾಳಿ ನಟ ಹಾಗು ಪಶ್ಚಿಮ ಬಂಗಾಳ ಸರ್ಕಾರದ ಸಚಿವರೂ ಆಗಿರುವ ಬ್ರತ್ಯ ಬಸು, ಬಂಗಾಳಿಯ ಖ್ಯಾತ ನಿರ್ದೇಶಕರುಗಳಾದ ಶೇಖರ್ ದಾಸ್, ಸತರೂಪ ಸನ್ಯಾಲ್, ಅತನು ಘೋಷ್, ಅನಿಕೇತ್ ಚಟ್ಟೋಪಾಧ್ಯಾಯ, ಬವುಧ್ಯಾಯಾನ್ ಮುಖರ್ಜಿ, ಕನ್ನಡದ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಾಗಾಭರಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್.ಆರ್.ವಿಶುಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಎಸ್.ವಿ.ರಾಜೇಂದ್ರಸಿಂಗ್ ಬಾಬು ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ. ಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿ ಶೇಖರ್ ದಾಸ್ ನಿರ್ದೇಶನದ 'ಜೋಗಾಜೋಗ್' (ಬೆಂಗಾಲಿ) (2015, 2.18 ಗಂಟೆ) ಪ್ರದರ್ಶನಗೊಳ್ಳಲಿದೆ

  ಜೂನ್ 16 ರಿಂದ 18ನೇ ತಾರೀಖಿನ ವರೆಗೂ ಬೆಂಗಳೂರಿನಲ್ಲಿ ಈ ಚಿತ್ರೋತ್ಸವ ನಡೆಯಲಿದ್ದು, ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕನ್ನಡ ಮತ್ತು ಬೆಂಗಾಳಿ ಚಿತ್ರಗಳು ಪ್ರದರ್ಶನವಾಗಲಿದೆ. ಅದೇ ರೀತಿ ಜುಲೈ 21 ರಿಂದ 23ವರೆಗೂ ಕೊಲ್ಕತ್ತಾದಲ್ಲಿ ಚಿತ್ರೋತ್ಸವ ನಡೆಯಲಿದ್ದು, ಅಲ್ಲಿ ಕನ್ನಡ ಚಿತ್ರಗಳು ಪ್ರದರ್ಶನವಾಗಲಿದೆ.

  ಚಿತ್ರೋತ್ಸವಕ್ಕೆ ಪ್ರವೇಶ: ಚಿತ್ರೋತ್ಸದಲ್ಲಿ ಭಾಗವಹಿಸಲು ಪಾಸ್ ಗಳನ್ನ ವಿತರಿಸಲಾಗುವುದು. ಆಸಕ್ತರು ಪಾಸ್ ಗಳನ್ನು ಪಡೆಯಲು ಪರ್ಪಲ್ ಹಾರ್ಟ್ ಸಂಸ್ಥೆಯ ಡಾ: ಮಧುಶ್ರೀ ಸೇನ್ ಗುಪ್ತಾ ಅವರನ್ನು ಸಂಪರ್ಕಿಸಬಹುದು.

  ಮೊಬೈಲ್ ಸಂಖ್ಯೆ: 9916400132

  English summary
  Federation of Film Societies of India founded by renowned Indian Director Satyajit Ray and Karnataka Chalanachitra Academy is jointly organizing Bengali and Kannada Film Festival in Bengaluru and Kolkata from 16th to 18th June 2017.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X