For Quick Alerts
  ALLOW NOTIFICATIONS  
  For Daily Alerts

  ಅಮಿತಾಬ್ ಬಚ್ಚನ್‌ ರೋಲ್ಸ್ ರಾಯ್ಸ್ ಕಾರು ಸೀಜ್ ಮಾಡಿದ ಬೆಂಗಳೂರು ಪೊಲೀಸರು!

  |

  ಬೆಂಗಳೂರು ಪೊಲೀಸರು ಮತ್ತು ಆರ್‌ಟಿಓ ಅಧಿಕಾರಿಗಳು ಜಂಟಿಯಾಗಿ ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಿ ಕೆಲವು ಐಶಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

  ನಿನ್ನೆ ರಾತ್ರಿ ಬೆಂಗಳೂರಿನ ಪ್ರತಿಷ್ಠಿತ ಯುಬಿ ಸಿಟಿ ಬಳಿಕ ಕಾರ್ಯಚಾರಣೆ ನಡೆಸಿದ ಪೊಲೀಸರು ಹಾಗೂ ಆರ್‌ಟಿಓ ಅಧಿಕಾರಿಗಳು ಆಡಿ, ರೋಲ್ಸ್ ರಾಯ್ಸ್, ಲ್ಯಾಂಬೊರ್ಗಿನಿ, ಲ್ಯಾಂಡ್ ರೋವರ್, ಬೆಂಜ್‌ನಂಥಹಾ ಭಾರಿ ದುಬಾರಿ ಬೆಲೆಯ ಏಳು ಕಾರುಗಳನ್ನು ಸೀಜ್ ಮಾಡಿ ವಶಕ್ಕೆ ಪಡೆದಿದ್ದಾರೆ.

  ಅಧಿಕಾರಿಗಳು ಸೀಜ್ ಮಾಡಿರುವ ಒಂದು ಕಾರು ಅಮಿತಾಬ್ ಬಚ್ಚನ್ ಅವರಿಗೆ ಸೇರಿದ್ದಾಗಿದೆ! ಹೌದು ಅಧಿಕಾರಿಗಳು ರಾತ್ರಿ ಸೀಜ್ ಮಾಡಿದ ರೋಲ್ಸ್ ರಾಯ್ಸ್ ಕಾರು ಅಮಿತಾಬ್ ಬಚ್ಚನ್ ಅವರಿಗೆ ಸೇರಿದ್ದಾಗಿದ್ದು, ಅದನ್ನು ಸಲ್ಮಾನ್ ಖಾನ್ ಎಂಬ ವ್ಯಕ್ತಿ ದಾಖಲೆಗಳಿಲ್ಲದೆ ಚಲಾಯಿಸುತ್ತಿದ್ದ. ಹಾಗಾಗಿ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  ವಾಹನ್ ವೆಬ್‌ಸೈಟ್ ಮಾಹಿತಿ ಸಿಗುತ್ತಿಲ್ಲ: ಎನ್.ಶಿವಕುಮಾರ್

  ವಾಹನ್ ವೆಬ್‌ಸೈಟ್ ಮಾಹಿತಿ ಸಿಗುತ್ತಿಲ್ಲ: ಎನ್.ಶಿವಕುಮಾರ್

  ಸಂಚಾರಿ ವಿಭಾಗದ ಆಯುಕ್ತ ಎನ್.ಶಿವಕುಮಾರ್ ಮಾಧ್ಯಮಗಳಿಗೆ ನೀಡಿರುವ ಮಾಹಿತಿಯಂತೆ, ''ಈಗ ಸೀಜ್ ಮಾಡಲಾಗಿರುವ ಕೆಲವು ವಾಹನಗಳ ಮಾಹಿತಿ 'ವಾಹನ್' ವೆಬ್‌ಸೈಟ್‌ನಲ್ಲಿ ಸಿಗುತ್ತಿಲ್ಲ. ಹಾಗಾಗಿ ಸುಳ್ಳು ನಂಬರ್ ಪ್ಲೇಟ್ ಇಟ್ಟುಕೊಂಡು ವಾಹನ ಚಲಾಯಿಸುತ್ತಿರುವ ಅನುಮಾನವಿದೆ. ಈ ಬಗ್ಗೆ ತನಿಖೆ ಜಾರಿಯಲ್ಲಿದೆ'' ಎಂದಿದ್ದಾರೆ.

  ದಾಖಲೆ ನೀಡದ ಕಾರಣ ಕಾರು ವಶಕ್ಕೆ

  ದಾಖಲೆ ನೀಡದ ಕಾರಣ ಕಾರು ವಶಕ್ಕೆ

  ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್ ಮಾತನಾಡಿ, ''ನಮ್ಮ ಮಾಹಿತಿದಾರರು ನೀಡಿದ ಮಾಹಿತಿ ಆಧರಿಸಿ ನಿನ್ನೆ ಯುಬಿ ಸಿಟಿ ಬಳಿ ಕಾರ್ಯಚಾರಣೆ ನಡೆಸಿ ಹಲವು ಐಶಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದೇವೆ. ಅದರಲ್ಲಿ ಒಂದು ರೋಲ್ಸ್ ರಾಯ್ಸ್ ಸಹ ಸೇರಿದೆ. ಈ ಕಾರು 2019ರಲ್ಲಿ ಅಮಿತಾಬ್ ಬಚ್ಚನ್ ಎಂಬುವರ ಹೆಸರಿನಲ್ಲಿ ನೊಂದಣಿ ಆಗಿದೆ. ಆ ನಂತರ ಅದನ್ನು ಒಬ್ಬ ಬೆಂಗಳೂರಿನ ಉದ್ಯಮಿ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ನಾವು ಕಾರ್ಯಾಚರಣೆ ಮಾಡಿದಾಗ ಸಲ್ಮಾನ್ ಖಾನ್ ಹೆಸರಿನ ವ್ಯಕ್ತಿ ಕಾರು ಚಲಾಯಿಸುತ್ತಿದ್ದರು. ಕಾರಿನ ಯಾವುದೇ ದಾಖಲೆಯನ್ನು ಆ ವ್ಯಕ್ತಿ ನೀಡಲಿಲ್ಲ ಹಾಗಾಗಿ ಕಾರನ್ನು ವಶಕ್ಕೆ ಪಡೆದಿದ್ದೇವೆ. ಆ ಕಾರು ಮಹಾರಾಷ್ಟ್ರದ ನೊಂದಣಿ ಸಂಖ್ಯೆ ಹೊಂದಿದೆ'' ಎಂದಿದ್ದಾರೆ.

  ಕೆಲವಕ್ಕೆ ನಕಲಿ ನಂಬರ್ ಪ್ಲೇಟ್ ಇವೆ

  ಕೆಲವಕ್ಕೆ ನಕಲಿ ನಂಬರ್ ಪ್ಲೇಟ್ ಇವೆ

  ಏಳು ಕಾರುಗಳಲ್ಲಿ ಕೆಲವು ನಕಲಿ ನಂಬರ್ ಪ್ಲೇಟ್‌ಗಳಿವೆ. ಬೇರೆ ರಾಜ್ಯಗಳಲ್ಲಿ ನೊಂದಣಿ ಮಾಡಿಸಿರುವವು. ರಸ್ತೆ ತೆರಿಗೆ ಪಾವತಿಸದೇ ಇರುವ ವಾಹನಗಳು, ವಿಮೆ ಮಾಡಿಸದೆ ಓಡಿಸುತ್ತಿರುವ ವಾಹನಗಳು ಸಹ ಇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರಾತ್ರಿ 11 ಗಂಟೆ ವರೆಗೆ ಕಾರ್ಯಾಚರಣೆ ಮಾಡಿದ್ದು, ವಶಪಡಿಸಿಕೊಂಡ ವಾಹನಗಳನ್ನು ನೆಲಮಂಗಲ ಆರ್‌ಟಿಓ ಕಚೇರಿಯಲ್ಲಿ ಪಾರ್ಕ್ ಮಾಡಲಾಗಿದೆ.

  ಕಾರು ಮಾರಿರುವ ಅಮಿತಾಬ್ ಬಚ್ಚನ್

  ಕಾರು ಮಾರಿರುವ ಅಮಿತಾಬ್ ಬಚ್ಚನ್

  ನಟ ಅಮಿತಾಬ್ ಬಚ್ಚನ್ ಬಳಿ ರೋಲ್ಸ್ ರಾಯ್ಸ್ ಕಾರು ಇತ್ತು. ಆದರೆ ಮೂರು ವರ್ಷಗಳ ಹಿಂದೆ 2019ರ ಫೆಬ್ರವರಿ 19ರಂದು ರೋಲ್ಸ್ ರಾಯ್ಸ್ ಕಾರನ್ನು ಬಚ್ಚನ್ ಮಾರಾಟ ಮಾಡಿದ್ದಾರೆ. ಕಾರಿನ ಎಲ್ಲ ದಾಖಲೆಗಳನ್ನು ಬಚ್ಚನ್ ನೀಡಿದ್ದಾರೆ. ಡೀಲರ್ ಒಬ್ಬರ ಮೂಲಕ ಬೆಂಗಳೂರಿನ ಷರೀಫ್ ಅಲಿಯಾಸ್ ಬಾಬು ಎಂಬುವರು ಬಚ್ಚನ್ ಕಾರನ್ನು ಖರೀದಿಸಿದ್ದಾರೆ. ನಿನ್ನೆ ಕಾರು ಸೀಜ್ ಆದಾಗ ಮಾತನಾಡಿದ್ದ ಷರೀಫ್ ತಾವು 6 ಕೋಟಿ ಹಣ ಕೊಟ್ಟು ಕಾರು ಖರೀದಿಸಿದ್ದಾಗಿ ಹೇಳಿದ್ದರು. ಆರ್‌ಟಿಓ ನೀಡಿರುವ ಮಾಹಿತಿಯಂತೆ ಕಾರಿಗೆ 1.30 ಕೋಟಿ ಹಣವನ್ನಷ್ಟೆ ತೆರಲಾಗಿದೆ. ಕಾರು ಮಾರಾಟದ ಸಂದರ್ಭದಲ್ಲಿಯೇ ಕಾರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಬಚ್ಚನ್ ನೀಡಿದ್ದಾರಂತೆ. ಆದರೆ ಕಾರು ಖರೀದಿಸಿರುವ ಷರೀಫ್ ಕಾರನ್ನು ತಮ್ಮ ಹೆಸರಿಗೆ ಮಾಡಿಕೊಳ್ಳದೆ ಬಚ್ಚನ್ ಹೆಸರಿನಲ್ಲಿಯೇ ಕಾರು ಚಲಾವಣೆ ಮಾಡುತ್ತಿದ್ದಾರೆ. ಇದೀಗ ನಟ ಅಮಿತಾಬ್ ಬಚ್ಚನ್‌ಗೆ ಬೆಂಗಳೂರು ಪೊಲೀಸರು ನೊಟೀಸ್ ಕಳಿಸಿದ್ದು, ಬಚ್ಚನ್ ಅವರ ಉತ್ತರಕ್ಕಾಗಿ ನಿರೀಕ್ಷಿಸುತ್ತಿದ್ದಾರೆ.

  English summary
  Bengaluru police and RTO officers Seized Amitabh Bachchan's Rolls Royce car. Bengaluru police sized 7 luxury cars in Bengaluru yesterday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X