»   » ಖ್ಯಾತ ನಟಿಗೆ ಕಿರುಕುಳ ನೀಡುತ್ತಿದ್ದ ಬೆಂಗಳೂರಿನ ಯುವಕ ಬಂಧನ!

ಖ್ಯಾತ ನಟಿಗೆ ಕಿರುಕುಳ ನೀಡುತ್ತಿದ್ದ ಬೆಂಗಳೂರಿನ ಯುವಕ ಬಂಧನ!

Posted By:
Subscribe to Filmibeat Kannada

ಮಲೆಯಾಳಂನ ಖ್ಯಾತ ನಟಿ ರೆಬಾ ಮೊನಿಕಾ ಜಾನ್ ಅವರಿಗೆ ಕಿರುಕುಳ ನೀಡುತ್ತಿದ್ದ ಬೆಂಗಳೂರಿನ ಯುವಕನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

ಫ್ರಾಂಕ್ಲಿನ್ ಎಂಬ ಬೆಂಗಳೂರಿನ ಯುವಕ ಪ್ರತಿ ದಿನ ನಟಿ ರೆಬಾ ಮೊನಿಕಾ ಜಾನ್ ಅವರಿಗೆ ''ನೀನು ನನ್ನನ್ನೇ ಪ್ರೀತಿಸು.. ನನ್ನನ್ನೇ ಮದುವೆ ಆಗು'' ಎಂದು ಪೀಡಿಸುತ್ತಿದ್ದ. ಬಳಿಕ ಈತನ ಕಿರುಕುಳ ತಾಳಲಾರದೆ ಕಳೆದ ಒಂದು ತಿಂಗಳ ಹಿಂದೆ ರಿಬಾ ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇಂದು ಪೊಲೀಸರು ಫ್ರಾಂಕ್ಲಿನ್ ನನ್ನು ವಶಕ್ಕೆ ಪಡೆದಿದ್ದಾರೆ. ಮುಂದೆ ಓದಿ...

ನಟಿಗೆ ಕಿರುಕುಳ

ಬೆಂಗಳೂರಿನಲ್ಲಿ ವಾಸವಾಗಿದ್ದ ಮಲೆಯಾಳಂ ನಟಿ ರೆಬಾ ಮೊನಿಕಾ ಜಾನ್ ಅವರಿಗೆ ಮದುವೆಯಾಗುವಂತೆ ಅನೇಕ ತಿಂಗಳುಗಳಿಂದ ಫ್ರಾಂಕ್ಲಿನ್ ಎಂಬ ಯುವಕ ಕಿರುಕುಳ ನೀಡುತ್ತಿದ್ದ.

ತೊಂದರೆ ಕೊಡುತ್ತಿದ್ದ

ಕೋರಮಂಗಲದಲ್ಲಿ ವಾಸವಾಗಿದ್ದ ರಿಬಾ ಪ್ರತಿ ಭಾನುವಾರ ಸೆಟ್ ಜಾನ್ಸ್ ಚರ್ಚ್ ಗೆ ಹೋಗುತ್ತಿದ್ದರು. ಈ ವೇಳೆ ಫ್ರಾಂಕ್ಲಿನ್ ತೊಂದರೆ ನೀಡುತ್ತಿದ್ದನಂತೆ.

ಪರಿಚಯ ಇತ್ತು

ತಾನು ಚರ್ಚ್ ಗೆ ಹೋಗಿ ಮೊದಲು ರಿಬಾ ಪರಿಚಯ ಮಾಡಿಕೊಂಡ ಫ್ರಾಂಕ್ಲಿನ್ ನಂತರ ಆಕೆಯ ಮೊಬೈಲ್ ನಂಬರ್ ಪಡೆದುಕೊಂಡು ಅಶ್ಲೀಲ ಸಂದೇಶಗಳನ್ನು ಕಳುಹಿಸುವುದಕ್ಕೆ ಶುರು ಮಾಡಿದ್ದ.

ಫೇಸ್ ಬುಕ್ ನಲ್ಲಿ ಕಿಡಿಗೇಡಿಗಳಿಂದ ಕಾಟ: ಗುಡುಗಿದ ನಟಿ ಸಂಗೀತಾ ಭಟ್

ಇಂದು ಬಂಧನ

ಫ್ರಾಂಕ್ಲಿನ್ ವರ್ತನೆ ಮಿತಿ ಮೀರಿದಾಗ ಆತನ ವಿರುದ್ಧ ಒಂದು ತಿಂಗಳ ಹಿಂದೆ ನಟಿ ರಿಯಾ ಪೊಲೀಸರಿಗೆ ದೂರು ನೀಡಿದ್ದರು. ರಿಯಾ ಕಿರುಕುಳ ಪ್ರಕರಣ ತನಿಖೆ ನಡೆಸಿದ ಮಡಿವಾಳ ಪೊಲೀಸರು ಇಂದು ಫ್ರಾಂಕ್ಲಿನ್ ನನ್ನು ಬಂಧಿಸಿದ್ದಾರೆ.

ಮಲಯಾಳಿ ನಟಿಯನ್ನು ಕಾಡಿದ ಫ್ರಾಂಕ್ಲಿನ್ ಬಂಧಿಸಿದ ಮಡಿವಾಳದ ಪೊಲೀಸರು

ನಟಿ ರಿಬಾ ಬಗ್ಗೆ

ಮೂಲತಃ ಕೇರಳದ ಹುಡುಗಿಯಾದ ನಟಿ ರೆಬಾ ಮೊನಿಕಾ ಜಾನ್ ಮಲೆಯಾಳಂ ನಲ್ಲಿ ಎರಡು ಸಿನಿಮಾ ಮಾಡಿದ್ದರು. ಜೊತೆಗೆ 'ಮಿಡುಕ್ಕಿ' ಎಂಬ ರಿಯಾಲಿಟಿ ಶೋ ಕಾರ್ಯಕ್ರಮ ವಿಜೇತೆ ಕೂಡ ಆಗಿದ್ದರು. ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಮುಗಿಸಿದ ಇವರು ಸದ್ಯ ಬೆಂಗಳೂರಿನಲ್ಲೇ ವಾಸವಾಗಿದ್ದರು.

English summary
A 28-year-old youth was arrested by Madiwala police in Bengaluru for allegedly stalking a Malayalam actress Reba Monica John and pressuring her to love and marry him.
Please Wait while comments are loading...