»   » ಈ ವರ್ಷ ಕನ್ನಡದ 'ಸ್ಟಾರ್' ನಟಿಯ ಪಟ್ಟ ಯಾರಿಗೆ?

ಈ ವರ್ಷ ಕನ್ನಡದ 'ಸ್ಟಾರ್' ನಟಿಯ ಪಟ್ಟ ಯಾರಿಗೆ?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ನಟಿಯರು ಮಿಂಚಿದ್ದು ಕಮ್ಮಿ. ಪರಭಾಷೆಯ ಬಂದವರು ಒಂದೊಂದೆ ಚಿತ್ರಗಳಿಗೆ ಸುಸ್ತಾದರು. ಕಳೆದ ವರ್ಷ ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಶ್ರುತಿ ಹರಿಹರನ್ ಈ ವರ್ಷವೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಗಮನ ಸೆಳೆದರು. ಶಾನ್ವಿ ಶ್ರೀವಾಸ್ತವ್, ಮೇಘನಾ ರಾಜ್, ರಚಿತಾ ರಾಮ್ ಸೌಂಡ್ ಮಾಡಿದರು.

ಅಮೂಲ್ಯ ಈ ವರ್ಷ ಸಿನಿಮಾಗಿಂತ ಮದುವೆಗೆ ಹೆಚ್ಚು ಸುದ್ದಿಯಲ್ಲಿದ್ದರು. ರಾಧಿಕಾ ಪಂಡಿತ್ ಅಂತೂ ತೆರೆ ಮೇಲೆ ಕಾಣಲೇ ಇಲ್ಲ. ರಾಗಿಣಿ, ಹರಿಪ್ರಿಯಾ ಕಾಣಿಸಿಕೊಂಡಿದ್ದು ಒಂದೊಂದೇ ಸಿನಿಮಾ.

ಹಾಗಿದ್ರೆ, ಈ ವರ್ಷ ಯಾವ ನಟಿ ಅತ್ಯುತ್ತಮ ನಾಯಕಿ ಎಂಬ ಪಟ್ಟಕ್ಕೆ ಅರ್ಹರಾಗಿದ್ದಾರೆ. 2017ರಲ್ಲಿ ಸ್ಟಾರ್ ನಟಿಯರು ಯಾರು ಎಂದು ಪಟ್ಟಿ ಮಾಡಲಾಗಿದೆ. ಇವರಲ್ಲಿ 'ದಿ ಬೆಸ್ಟ್' ಯಾರು ಎಂದು ನೀವು ಕಾಮೆಂಟ್ ಮೂಲಕ ನಿಮ್ಮ ನೆಚ್ಚಿನ ನಟಿಯನ್ನ ಆಯ್ಕೆ ಮಾಡಿ. ಮುಂದೆ ಓದಿ.....

ರಚಿತಾ ರಾಮ್

ರಚಿತಾ ರಾಮ್ ಈ ವರ್ಷ ಮಾಡಿದ್ದು ಎರಡು ಸಿನಿಮಾ. ರಮೇಶ್ ಅರವಿಂದ್ ಅಭಿನಯದ 'ಪುಷ್ಪಕ ವಿಮಾನ' ಮತ್ತು ಧ್ರುವ ಸರ್ಜಾ ಜೊತೆ ಭರ್ಜರಿ. 'ಪುಷ್ಪಕ ವಿಮಾನ'ದಲ್ಲಿ ರಮೇಶ್ ಅವರ ಮಗಳ ಪಾತ್ರ ನಿರ್ವಹಿಸಿದ್ದ ರಚಿತಾ, ತಮ್ಮ ಭಾವನಾತ್ಮಕ ಪಾತ್ರದ ಮೂಲಕ ಎಲ್ಲರ ಮನಮುಟ್ಟಿದ್ದರು. ಭರ್ಜರಿ ಚಿತ್ರದಲ್ಲಿ ಗ್ಲಾಮರ್ ಹುಡುಗಿಯಾಗಿ ಎಂದಿನಂತೆ ಮಿಂಚಿದ್ದರು.

ಶ್ರುತಿ ಹರಿಹರನ್

ಶ್ರುತಿ ಹರಿಹರನ್ ಈ ವರ್ಷ ಐದು ಸಿನಿಮಾದಲ್ಲಿ ಅಭಿನಯಿಸಿದರು. 'ಬ್ಯೂಟಿಫುಲ್ ಮನಸುಗಳು' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡರು. 'ಉರ್ವಿ' ಚಿತ್ರದಲ್ಲಿ ಮೂವರು ನಾಯಕಿಯರ ಪೈಕಿ ಶ್ರುತಿ ವಿಶೇಷವಾಗಿ ಗಮನ ಸೆಳೆದರು. ಅರ್ಜುನ್ ಸರ್ಜಾ ಅಭಿನಯದ 'ವಿಸ್ಮಯ', ದರ್ಶನ್ ಅಭಿನಯದ 'ತಾರಕ್' ಹಾಗೂ ಉಪೇಂದ್ರ ಅಭಿನಯದ 'ಉಪೇಂದ್ರ ಮತ್ತೆ ಬಾ' ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡರು.

2017ರಲ್ಲಿ ಹವಾ ಸೃಷ್ಟಿಸಿದ ಕನ್ನಡ ಚಿತ್ರರಂಗದ ಸ್ಟಾರ್ ನಟರು

ಶಾನ್ವಿ ಶ್ರೀವಾಸ್ತವ್

'ಮಾಸ್ಟರ್ ಪೀಸ್' ಹುಡುಗಿ ಶಾನ್ವಿ ಶ್ರೀವಾಸ್ತವ್ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಬೇಡಿಕೆ ಹೊಂದಿದ್ದಾರೆ. ಅದು ಈ ವರ್ಷವೂ ಸಾಬೀತಾಗಿದೆ. 'ತಾರಕ್' ಚಿತ್ರದಲ್ಲಿ ಅತ್ಯುತ್ತಮವೆನಿಸಿಕೊಂಡು, 'ಸಾಹೇಬ'ನ ಜೊತೆ ಕುಣಿದು ಶ್ರೀಮುರಳಿಯ 'ಮಫ್ತಿ'ಯಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು.

ಮೇಘನಾ ರಾಜ್

ಟಿ.ಎಸ್ ನಾಗಾಭರಣ ನಿರ್ದೇಶನದ 'ಅಲ್ಲಮ' ಚಿತ್ರದಲ್ಲಿ ಪೌರಾಣಿಕ ಪಾತ್ರ ನಿರ್ವಹಿಸಿದ ಮೇಘನಾ ರಾಜ್, 'ನೂರೊಂದು ನೆನಪು' ಚಿತ್ರದಲ್ಲಿ ರೆಟ್ರೋ ನಾಯಕಿ ಆಗಿ ಬಣ್ಣ ಹಚ್ಚಿದ್ದರು. ಇದರ ಜೊತೆಗೆ ಹೊಸಬರ 'ಜಿಂದಾ' ಚಿತ್ರದಲ್ಲೂ ಮೇಘನಾ ತೆರೆಹಂಚಿಕೊಂಡರು.

ಸಂಗೀತಾ ಭಟ್

'ಎರಡನೇ ಸಲ' ಚಿತ್ರದ ಮೂಲಕ ಎರಡನೇ ಅವಕಾಶ ಪಡೆದುಕೊಂಡ ಸಂಗೀತಾ ಭಟ್ ಪ್ರೇಕ್ಷಕರ ಮನಸ್ಸು ಮುಟ್ಟಿದರು. 'ದಯವಿಟ್ಟು ಗಮನಿಸಿ' ಚಿತ್ರದಲ್ಲೂ ಅದೇ ಮೋಡಿ ಮುಂದುವರಿಸಿ ಈ ವರ್ಷವನ್ನ ಯಶಸ್ವಿಯಾಗಿರಿಸಿಕೊಂಡರು.

ಈ ವರ್ಷ ಸ್ಯಾಂಡಲ್ ವುಡ್ ಗೆ ಬಂದ ಬೆಳದಿಂಗಳ ಬಾಲೆಯರಿವರು

ಶ್ರದ್ಧಾ ಶ್ರೀನಾಥ್

ಕಳೆದ ವರ್ಷ ಚಿತ್ರರಂಗಕ್ಕೆ ಪರಿಚಯವಾಗಿದ್ದ ಶ್ರದ್ಧಾ, ಈ ವರ್ಷ ಎರಡು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದರು. 'ಉರ್ವಿ' ಮತ್ತು 'ಆಪರೇಷನ್ ಅಲಮೇಲಮ್ಮ' ಚಿತ್ರಗಳಲ್ಲಿ ವಿಭಿನ್ನ ಪಾತ್ರದ ಮೂಲಕ ಮೆಚ್ಚುಗೆ ಗಳಿಸಿಕೊಂಡರು.

ದೀಪಾ ಸನ್ನಿಧಿ

ದೀಪಾ ಸನ್ನಿಧಿ ಈ ವರ್ಷ 'ಚೌಕ' ಹಾಗೂ 'ಚಕ್ರವರ್ತಿ' ಎರಡು ಸಿನಿಮಾದಲ್ಲಿ ಕಾಣಿಸಿಕೊಂಡರು. ಎರಡು ಸಿನಿಮಾದಲ್ಲೂ ದೀಪಾ ಅವರದ್ದು ವಿಶೇಷವಾದ ಪಾತ್ರಗಳು.

ಐಂದ್ರಿತಾ ರೈ

ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡ್ತಿರುವ ಐಂದ್ರಿತಾ ರೇ ಈ ವರ್ಷ ಎರಡು ಸಿನಿಮಾ ಮಾಡಿದರು. ಜಗ್ಗೇಶ್ ಅವರ ಜೊತೆ 'ಮೇಲುಕೋಟೆ ಮಂಜ' ಮತ್ತು 'ಚೌಕ' ಚಿತ್ರದಲ್ಲಿ ನಾಲ್ಕು ನಟಿಯರ ಜೊತೆ ಒಬ್ಬರಾಗಿ ಮಿಂಚಿದ್ದರು.

ಪೂಜಾ ಗಾಂಧಿ

'ಜಿಲೇಬಿ' ಅಂತ ಕಾಮಿಡಿ ಸಿನಿಮಾ ಮಾಡಿದ್ದ ಪೂಜಾ ಗಾಂಧಿ 'ದಂಡುಪಾಳ್ಯ-2 ಚಿತ್ರದಲ್ಲಿ ರಗಡ್ ಆಗಿ ಕಾಣಿಸಿಕೊಂಡರು.

ಒಂದೇ ಸಿನಿಮಾ ಮಾಡಿದ ನಟಿಯರು

ಬ್ಯೂಸಿಯೆಸ್ಟ್ ನಟಿ ಹರಿಪ್ರಿಯಾ ಈ ವರ್ಷ ಮಾಡಿದ್ದು ಒಂದೇ ಸಿನಿಮಾ 'ಭರ್ಜರಿ'. 'ಮುಗುಳುನಗೆ' ಚಿತ್ರದ ಮೂರು ಹೀರೋಯಿನ್ ಗಳ ಪೈಕಿ ಆಶಿಕಾ ರಂಗನಾಥ್ ಹೆಚ್ಚು ಇಷ್ಟವಾದರು. ಮಿತ್ರ ಅಭಿನಯದ 'ರಾಗ'ದಲ್ಲಿ ಭಾಮಾ ಅವರದ್ದು ಅಮೋಘ ಅಭಿನಯ. ಅಮೂಲ್ಯ ಅಭಿನಯಿಸಿದ್ದ 'ಮಾಸ್ತಿಗುಡಿ' ಈ ವರ್ಷ ತೆರೆಕಂಡಿತ್ತು. ಐಟಂ ಹಾಡುಗಳಿಗೆ ಹೆಜ್ಜೆ ಹಾಕಿದ್ದ ರಾಗಿಣಿ 'ವೀರ ರಣಚಂಡಿ' ಅವತಾರವೆತ್ತಿದ್ದರು.

ಈ ವರ್ಷ ಎಂಟ್ರಿ ಕೊಟ್ಟ ನವನಟರಲ್ಲಿ ನಿಮ್ಮ ನೆಚ್ಚಿನ ಹೀರೋ ಯಾರು?

ರಶ್ಮಿಕಾ ಮಂದಣ್ಣ

'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಖ್ಯಾತಿ ಗಳಿಸಿಕೊಂಡ ರಶ್ಮಿಕಾ ಮಂದಣ್ಣ ಅಭಿನಯದ ಎರಡು ಚಿತ್ರಗಳು ಬಿಡುಗಡೆಯಾಗಬೇಕಿದೆ. ಪುನೀತ್ ಅಭಿನಯದ 'ಅಂಜನಿಪುತ್ರ' ಮತ್ತು ಗಣೇಶ್ ಅಭಿನಯದ 'ಚಮಕ್' ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿದ್ದು, ಇವರೆಡು ಚಿತ್ರಗಳು ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುತ್ತಿದೆ.

English summary
Who is the best Actress of this year 2017. Shruti Hariharan acted in five films. Shanvi Srivastava and Meghana Raj acted in three films. Rachita ram, Haripriya, Sangeeta Bhat, Deepa Sannidhi also got the attention.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X