»   » ಈ ವರ್ಷದ ಅತ್ಯುತ್ತಮ ಚಿತ್ರವಾಗಿ ಗೆದ್ದ 'ಪವರ್ ***'

ಈ ವರ್ಷದ ಅತ್ಯುತ್ತಮ ಚಿತ್ರವಾಗಿ ಗೆದ್ದ 'ಪವರ್ ***'

Posted By: ಉದಯರವಿ
Subscribe to Filmibeat Kannada

ಈ ವರ್ಷದ (2014ನೇ ಸಾಲಿನ) ಅತ್ಯುತ್ತಮ ಚಿತ್ರವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು 'ಫಿಲ್ಮಿಬೀಟ್ ಕನ್ನಡ' ತನ್ನ ಕೋಟ್ಯಾಂತರ ಓದುಗ ದೊರೆಗಳಿಗೆ ನೀಡಿತ್ತು. ಇದಕ್ಕಾಗಿ ಆನ್ ಲೈನ್ ಮತಗಟ್ಟೆಯಲ್ಲಿ ತಮ್ಮ ಅತ್ಯುತ್ತಮ ಚಿತ್ರಕ್ಕೆ ಮತ ಹಾಕುವಂತೆ ಕರೆ ನೀಡಿತು.

ಬಹಳ ಬಿರುರು, ಉತ್ಸಾಹದಿಂದ ನಡೆದ ಈ ಮತದಾನ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಪುನೀತ್ ರಾಜ್ ಕುಮಾರ್ ಅಭಿನಯದ ಪವರ್ *** ಚಿತ್ರ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ನಾಮನಿರ್ದೇಶನಗೊಂಡಿದ್ದ ಐದು ಚಿತ್ರಗಳ ಪೈಕಿ 'ಪವರ್ ***' ಶೇ.31ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಅತ್ಯುತ್ತಮ ಚಿತ್ರವೆಂದು ಓದುಗರು ಅಂತಿಮ ತೀರ್ಪು ನೀಡಿದ್ದಾರೆ. [ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ಕಿಸಿ]

Best Kannada movie of the year 2014 Power ***

'ಉಳಿದವರು ಕಂಡಂತೆ', ಬಹದ್ದೂರ್, ಅಧ್ಯಕ್ಷ, ದೃಶ್ಯಂ ಹಾಗೂ 'ಉಗ್ರಂ' ನಂತಹ ಸ್ವಮೇಕ್ ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಪಟ್ಟಿ ನೋಡಿದರೆ 'ಪವರ್ ***' ಚಿತ್ರಕ್ಕಿಂತಲ್ಲೂ ಉತ್ತಮ ಚಿತ್ರಗಳಿದ್ದವಲ್ಲಾ ಎಂಬ ಆಲೋಚನೆ ಬರಬಹುದು. ಆದರೆ ಮತದಾರರ ಅಂತಿಮ ತೀರ್ಪುನ್ನು ಪ್ರಶ್ನಿಸಲು ನಾವ್ಯಾರು?

ಉಗ್ರಂ, ಅಂಬರೀಶ, ಉಳಿದವರು ಕಂಡಂತೆ, ಮಾಣಿಕ್ಯ ಚಿತ್ರಗಳನ್ನು ಹಿಂದಿಕ್ಕಿ 'ಪವರ್ ***' ಚಿತ್ರ ಆಯ್ಕೆಯಾಗಿರುವುದು ವಿಶೇಷ. ದ್ವಿತೀಯ ಅತ್ಯುತ್ತಮ ಚಿತ್ರವಾಗಿ 'ಉಗ್ರಂ' (ಶೇ.30 ಮತಗಳು) ಆಯ್ಕೆಯಾಗಿದೆ. 'ಉಗ್ರಂ' ಚಿತ್ರ ಕೂದಲೆಳೆ ಅಂತರದಿಂದ ಮೊದಲ ಸ್ಥಾನವನ್ನು ಕಳೆದುಕೊಂಡಿದೆ. [ಪವರ್ *** ಚಿತ್ರ ವಿಮರ್ಶೆ]

ಉಳಿದಂತೆ 'ಅಂಬರೀಶ' ಚಿತ್ರಕ್ಕೆ ಶೇ.13, 'ಉಳಿದವರು ಕಂಡಂತೆ' ಚಿತ್ರಕ್ಕೆ ಶೇ. 10 ಹಾಗೂ 'ಮಾಣಿಕ್ಯ' ಚಿತ್ರಕ್ಕೆ ಶೇ.7 ಮತಗಳು ಬಿದ್ದಿವೆ. ದೃಶ್ಯಂ (ಶೇ.3), ಬಹದ್ದೂರ್ (ಶೇ.2), ಅಧ್ಯಕ್ಷ (ಶೇ.2) ಹಾಗೂ ಗಜಕೇಸರಿ (ಶೇ.2). ಹಾಗೆಯೇ ಫಿಲ್ಮಿಬೀಟ್ ಕನ್ನಡ ನಡೆಸಿದ 'ಸ್ಯಾಂಡಲ್ ವುಡ್ ಸಾರ್ವತ್ರಿಕ ಚುನಾವಣೆ -2014' ಜನವರಿ 5ಕ್ಕೆ ಮುಕ್ತಾಯವಾಗಿದೆ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ.

ಈ ಆನ್ ಲೈನ್ ಮತದಾನದಲ್ಲಿ ಬಹಳ ಸಂಯಮ, ತಾಳ್ಮೆ ಹಾಗೂ ಶ್ರದ್ಧೆಯಿಂದ ಪಾಲ್ಗೊಂಡ ಎಲ್ಲಾ ಮತದಾರ ಬಂಧುಗಳಿಗೂ 'ಫಿಲ್ಮಿಬೀಟ್ ಕನ್ನಡ' ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ. ಈ ಚಿತ್ರ ಆಯ್ಕೆಯಾಗಬೇಕಿತ್ತು, ಆ ಚಿತ್ರ ಗೆಲ್ಲಬೇಕಾಗಿತ್ತು ಎಂದು ಬೇಸರಿಸಿಕೊಳ್ಳಬೇಡಿ. ಮುಂದೆ ಇದೇ ರೀತಿಯ ಸಾಕಷ್ಟು ಆನ್ ಲೈನ್ ಮತದಾನಗಳನ್ನು ಆಯೋಜಿಸಲಾಗುತ್ತದೆ. ಇದು ಮತದಾರರ ಅಂತಿಮ ತೀರ್ಮಾನವೇ ಹೊರತು 'ಫಿಲ್ಮಿಬೀಟ್ ಕನ್ನಡ'ದ ತೀರ್ಪಲ್ಲ ಎಂಬುದನ್ನು ಗಮನಿಸತಕ್ಕದ್ದು.

    English summary
    Filmibeat Kannada 2014 poll results are out. Power Star Puneeth Rajkumar and Trisha Krishnan lead 'Power ***' movie selected as best movie of the year 2014. Here are the poll results.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada