twitter
    For Quick Alerts
    ALLOW NOTIFICATIONS  
    For Daily Alerts

    ಜನರ ಮನಗೆದ್ದ 2017 ರ ಕನ್ನಡದ ಅತ್ಯುತ್ತಮ ಚಿತ್ರಗಳು

    By Bharath Kumar
    |

    2017ನೇ ವರ್ಷದ ಕೊನೆಯ ತಿಂಗಳು ಬಂದೇ ಬಿಟ್ಟಿದೆ. ಇದುವರೆಗೂ ಬಿಡುಗಡೆಯಾಗಿರುವ (ಡಿಸೆಂಬರ್ 8ಕ್ಕೆ) ಚಿತ್ರಗಳ ಸಂಖ್ಯೆ 176ಕ್ಕೂ ಅಧಿಕ. ಇನ್ನೂ ಮೂರು ವಾರ ಬಾಕಿ ಇದೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡ್ರೆ ಈ ವರ್ಷ ಕನ್ನಡದಲ್ಲಿ ಅತಿ ಹೆಚ್ಚು ಚಿತ್ರಗಳು ತೆರೆಕಂಡಿವೆ.

    ಈ ವರ್ಷ ಸ್ಟಾರ್ ನಟರು ಅಬ್ಬರಿಸಿದ್ದು ಕಡಿಮೆ. ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಬಿಸಿನೆಸ್ ಮಾಡಿದ್ರೂ, ಜನರ ಮೆಚ್ಚುಗೆ ಗಳಿಸುವಲ್ಲಿ ಕೆಲ ಚಿತ್ರಗಳು ಹಿನ್ನೆಡೆ ಅನುಭವಿಸಿದವು. ಇನ್ನೂ ನಿರೀಕ್ಷೆ ಇಲ್ಲದೆ ಬಂದ ಕೆಲ ಚಿತ್ರಗಳು ಅಚ್ಚರಿ ಫಲಿತಾಂಶವನ್ನ ನೀಡಿ ಜನರ ಮನಸ್ಸಿನಲ್ಲಿ ಜಾಗ ಪಡೆದುಕೊಂಡವು.

    ನಿರೀಕ್ಷೆಯಂತೆ ಶಿವಣ್ಣ ಈ ವರ್ಷ ಹೆಚ್ಚು ಸಿನಿಮಾ ಮಾಡಿದರು. ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್ ತಮ್ಮ ಅಭಿಮಾನಿಗಳನ್ನ ರಂಜಿಸಿದರು. ಯಶ್ ಸಿನಿಮಾ ಈ ವರ್ಷ ಬರಲೇ ಇಲ್ಲ. ಈ ಸ್ಟೋರಿಯಲ್ಲಿ ಅತ್ಯುತ್ತಮವೆನಿಸುವ ಕೆಲವು ಚಿತ್ರಗಳನ್ನ ನಾವು ಪಟ್ಟಿ ಮಾಡಿದ್ದೇವೆ. ನಿಮಗೆ ಯಾವ ಚಿತ್ರ ಇಷ್ಟವಾಯಿತು ಎಂದು ಕಾಮೆಂಟ್ ಮಾಡಿ ತಿಳಿಸಿ.

    ಈ ವರ್ಷ ಯಾವ ಸಿನಿಮಾ ಬೆಸ್ಟ್? ಯಾವ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತು ಅನ್ನೋದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ...

    ವರ್ಷದ ಮೊದಲ ಚಿತ್ರ 'ಪುಷ್ಪಕ ವಿಮಾನ'

    ವರ್ಷದ ಮೊದಲ ಚಿತ್ರ 'ಪುಷ್ಪಕ ವಿಮಾನ'

    ಈ ವರ್ಷ ಆರಂಭವಾಗಿದ್ದೇ ರಮೇಶ್ ಅರವಿಂದ್ ಅಭಿನಯದ 'ಪುಷ್ಪಕ ವಿಮಾನ' ಚಿತ್ರದ ಮೂಲಕ. ಬುದ್ದಿಮಾಂದ್ಯ ಪಾತ್ರದಲ್ಲಿ ಕಾಣಿಸಿಕೊಂಡ ರಮೇಶ್, ತಮ್ಮ ಮೋಹಕ ಅಭಿನಯದಿಂದ ಪ್ರೇಕ್ಷಕರ ಹೃದಯ ಮುಟ್ಟಿದ್ದರು. ರಚಿತಾ ರಾಮ್, ಬೇಬಿ ಯುವಿನಾ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಇದು ರಮೇಶ್ ಅವರವಿಂದ್ ಅವರ 100ನೇ ಸಿನಿಮಾ ಆಗಿತ್ತು ಎಂಬುದು ಕೂಡ ವಿಶೇಷ.

    ವಿಮರ್ಶೆ: ಅದ್ಭುತ ಭಾವನಾತ್ಮಕ 'ಯಾನ', ಅಪ್ಪ-ಮಗಳ ಈ 'ಪುಷ್ಟಕ ವಿಮಾನ'ವಿಮರ್ಶೆ: ಅದ್ಭುತ ಭಾವನಾತ್ಮಕ 'ಯಾನ', ಅಪ್ಪ-ಮಗಳ ಈ 'ಪುಷ್ಟಕ ವಿಮಾನ'

    ಜನಮನ ಗೆದ್ದ 'ಬ್ಯೂಟಿಫುಲ್ ಮನಸುಗಳು'

    ಜನಮನ ಗೆದ್ದ 'ಬ್ಯೂಟಿಫುಲ್ ಮನಸುಗಳು'

    ಸತೀಶ್ ನೀನಾಸಂ ಮತ್ತು ಶ್ರುತಿ ಹರಿಹರನ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ. ಈ ಚಿತ್ರದ ಅಭಿನಯಕ್ಕಾಗಿ ನಾಯಕಿ ಶ್ರುತಿಗೆ ರಾಜ್ಯ ಪ್ರಶಸ್ತಿ ಕೂಡ ಲಭಿಸಿತು. ಜಯತೀರ್ಥ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಬಾಕ್ಸ್ ಆಫೀಸ್ ನಲ್ಲಿ ದುಡ್ಡು ಮಾಡದೇ ಹೋದರು, ಜನಮನ್ನಣೆ ಗಳಿಸಿಕೊಳ್ಳುವಲ್ಲಿ ಸಿನಿಮಾ ಗೆದ್ದಿತ್ತು.

    ಸ್ಟಾರ್ ನಟರ 'ಚೌಕ'

    ಸ್ಟಾರ್ ನಟರ 'ಚೌಕ'

    ವರ್ಷದ ಮೊದಲ ಕಮರ್ಷಿಯಲ್ ಹಿಟ್ ಸಿನಿಮಾ ಎನ್ನಬಹುದು. ಪ್ರೇಮ್, ಪ್ರಜ್ವಲ್ ದೇವರಾಜ್, ವಿಜಯರಾಘವೇಂದ್ರ, ದಿಗಂತ್ ಹಾಗೂ ವಿಶೇಷ ಪಾತ್ರದಲ್ಲಿ ದರ್ಶನ್ ಅಭಿನಯಿಸಿದ್ದ ಸಿನಿಮಾ. ದ್ವಾರಕೀಶ್ ನಿರ್ಮಾಣದ 50 ಸಿನಿಮಾ. ತರುಣ್ ಸುಧೀರ್ ನಿರ್ದೇಶನದ ಚೊಚ್ಚಲ ಸಿನಿಮಾ. ಪಕ್ಕಾ ಎಂಟರ್ ಟೈನರ್ ಆಗಿದ್ದ ಚೌಕ ಶತದಿನ ಆಚರಿಸಿಕೊಂಡಿತ್ತು.

    ವಿಮರ್ಶೆ: ಒಳ್ಳೆಯ ಕೆಲಸಗಳಿಗೆ ತಾಳ್ಮೆ ಇರಲಿ ಎಂದು ಹೇಳುವ 'ಚೌಕ'ವಿಮರ್ಶೆ: ಒಳ್ಳೆಯ ಕೆಲಸಗಳಿಗೆ ತಾಳ್ಮೆ ಇರಲಿ ಎಂದು ಹೇಳುವ 'ಚೌಕ'

    'ಹೆಬ್ಬುಲಿ' ಘರ್ಜನೆ

    'ಹೆಬ್ಬುಲಿ' ಘರ್ಜನೆ

    ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ವರ್ಷದ ದೊಡ್ಡ ಹಿಟ್ ಬಾರಿಸಿದ ಚಿತ್ರ. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಸಿನಿಮಾ. ಆರ್ಮಿ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುದೀಪ್ ಗೆ ಅಮಲಾ ಪೌಲ್ ಜೋಡಿಯಾಗಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್, ಸುದೀಪ್ ಗೆ ಸಾಥ್ ನೀಡಿದ್ದರು.

    'ಹೆಬ್ಬುಲಿ' ವಿಮರ್ಶೆ: ಗನ್ ಹಿಡಿದು ಘರ್ಜಿಸಿದ ಆರಡಿ ಟೈಗರ್ ಸೂಪರ್ ಗುರು'ಹೆಬ್ಬುಲಿ' ವಿಮರ್ಶೆ: ಗನ್ ಹಿಡಿದು ಘರ್ಜಿಸಿದ ಆರಡಿ ಟೈಗರ್ ಸೂಪರ್ ಗುರು

    ಮೆಗಾಹಿಟ್ 'ರಾಜಕುಮಾರ'

    ಮೆಗಾಹಿಟ್ 'ರಾಜಕುಮಾರ'

    ಈ ವರ್ಷದ ಬಹುದೊಡ್ಡ ಯಶಸ್ಸು ಕಂಡ ಸಿನಿಮಾ 'ರಾಜಕುಮಾರ'. ಪಕ್ಕಾ ಫ್ಯಾಮಿಲಿ ಎಲಿಮೆಂಟ್ಸ್ ಗಳೊಂದಿಗೆ ಮನರಂಜಿಸಿದ 'ರಾಜಕುಮಾರ' ಸೆಂಚುರಿ ಬಾರಿಸಿತು. ಕಲೆಕ್ಷನ್ ನಲ್ಲಿ ಹೊಸ ದಾಖಲೆ ಮಾಡಿದ ಈ ಚಿತ್ರ ಪುನೀತ್ ವೃತ್ತಿ ಜೀವನದಲ್ಲೂ ಮೈಲಿಗಲ್ಲು. ಈ ಚಿತ್ರವನ್ನ ಕನ್ನಡ ಅಭಿಮಾನಿಗಳು ಎರಡು ಕೈಗಳಿಂದ ಅಪ್ಪಿಕೊಂಡಿದ್ದರು. ಸಂತೋಷ್ ಆನಂದ್ ರಾಮ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.

    ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ

    'ಚಕ್ರವರ್ತಿ' ದರ್ಬಾರ್

    'ಚಕ್ರವರ್ತಿ' ದರ್ಬಾರ್

    ಚಾಲೆಂಜಿಂಗ್ ಸ್ಟಾರ್ ದಶನ್ ಅಭಿನಯಿಸಿದ್ದ ಚಕ್ರವರ್ತಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು ಸೌಂಡ್ ಮಾಡಿದ ಚಿತ್ರ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರು. ಡಿ ಬಾಸ್ ಅಭಿಮಾನಿಗಳನ್ನ ರಂಜಿಸುವಲ್ಲಿ ಸಕ್ಸಸ್ ಕಂಡಿತ್ತು. ಮೂರು ವಿಭಿನ್ನ ಶೇಡ್ ನಲ್ಲಿ ದರ್ಶನ್ ಅಬ್ಬರಿಸಿದ್ದರು. ಚಿಂತನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ದೀಪಾ ಸನ್ನಿಧಿ ನಾಯಕಿಯಾಗಿದ್ದರು.

    ವಿಮರ್ಶೆ: ಭೂಗತ ಲೋಕಕ್ಕೆ ದೇಶಪ್ರೇಮದ ಪಾಠ ಹೇಳುವ 'ಚಕ್ರವರ್ತಿ'ವಿಮರ್ಶೆ: ಭೂಗತ ಲೋಕಕ್ಕೆ ದೇಶಪ್ರೇಮದ ಪಾಠ ಹೇಳುವ 'ಚಕ್ರವರ್ತಿ'

    ಮಿತ್ರನ 'ರಾಗ'

    ಮಿತ್ರನ 'ರಾಗ'

    ಕಣ್ಣಿದ್ದವರು ಪ್ರೀತಿಸುವ ಸಮಾಜದಲ್ಲಿ ಕಣ್ಣೇ ಇಲ್ಲದವರ ಪ್ರೀತಿ ಹೇಗಿರುತ್ತೆ ಎಂಬುದನ್ನ ರಾಗ ಸಿನಿಮಾದಲ್ಲಿ ಅದ್ಭುತವಾಗಿ ಬಿಂಬಿಸಲಾಗಿತ್ತು. ಮಿತ್ರ ಮತ್ತು ಭಾಮಾ ನಾಯಕ, ನಾಯಕಿಯಾಗಿ ಅಭಿನಯಿಸಿದ್ದರು. ಪಿ.ಸಿ ಶೇಖರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಬಾಕ್ಸ್ ಆಫೀಸ್ ನಲ್ಲಿ ಬಿಸಿನೆಸ್ ಮಾಡಿಲ್ಲ ಅಂದ್ರು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಳ್ಳುವಲ್ಲಿ ಗಮನ ಸೆಳೆದಿತ್ತು.

    ಬಂಗಾರ ಸನ್ ಆಫ್ ಬಂಗಾರದ ಮನುಷ್ಯ

    ಬಂಗಾರ ಸನ್ ಆಫ್ ಬಂಗಾರದ ಮನುಷ್ಯ

    ಈ ವರ್ಷದಲ್ಲಿ ಶಿವರಾಜ್ ಕುಮಾರ್ ಅಭಿನಯದ ಎರಡನೇ ಸಿನಿಮಾ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ'. ರೈತ ನಾಯಕನಾಗಿ (NRI) ಮಿಂಚಿದ್ದ ಶಿವಣ್ಣ ಈ ಚಿತ್ರದ ಮೂಲಕ ಎರಡನೇ ಬಂಗಾರದ ಮನುಷ್ಯ ಎನಿಸಿಕೊಂಡಿದ್ದರು. ಯೋಗಿ ಜಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.

    ವಿಮರ್ಶೆ: 'ಬಂಗಾರದ ಮನುಷ್ಯ'ನ ಪ್ರತಿರೂಪ ಶಿವಣ್ಣನ ಈ 'ಬಂಗಾರ' ರೂಪವಿಮರ್ಶೆ: 'ಬಂಗಾರದ ಮನುಷ್ಯ'ನ ಪ್ರತಿರೂಪ ಶಿವಣ್ಣನ ಈ 'ಬಂಗಾರ' ರೂಪ

    ಸಕ್ಸಸ್ ಫುಲ್ 'ಆಪರೇಷನ್'

    ಸಕ್ಸಸ್ ಫುಲ್ 'ಆಪರೇಷನ್'

    ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಆಪರೇಷನ್ ಅಲಮೇಲಮ್ಮ' ಸಿನಿಮಾ ಈ ವರ್ಷದ ಸರ್ಪ್ರೈಸ್ ಹಿಟ್ ಸಿನಿಮಾ. ಸರಳ ಕಥೆಯ ಮೂಲಕ ಥ್ರಿಲ್ಲಿಂಗ್ ಮನರಂಜನೆ ನೀಡಿದ ಈ ಚಿತ್ರಕ್ಕೆ ಚಿತ್ರಪ್ರೇಮಿಗಳು ಮನಸೋತ್ತಿದ್ದರು. ಶ್ರದ್ಧಾ ಶ್ರೀನಾಥ್, ರಿಷಿ ಈ ಚಿತ್ರದಲ್ಲಿ ಮೋಡಿ ಮಾಡಿದ್ದರು.

    'ಅಲಮೇಲಮ್ಮ' ವಿಮರ್ಶೆ: ಸಿಂಪಲ್ಲಾಗ್ ಒಂದು 'ಕಿಡ್ನಾಪ್' ಸ್ಟೋರಿ'ಅಲಮೇಲಮ್ಮ' ವಿಮರ್ಶೆ: ಸಿಂಪಲ್ಲಾಗ್ ಒಂದು 'ಕಿಡ್ನಾಪ್' ಸ್ಟೋರಿ

    ಭಟ್ಟರ 'ಮುಗುಳುನಗೆ'

    ಭಟ್ಟರ 'ಮುಗುಳುನಗೆ'

    ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ತಯಾರಾಗಿ ತೆರೆಕಂಡ ಚಿತ್ರ. 'ಮುಂಗಾರು ಮಳೆ', 'ಗಾಳಿಪಟ' ನಂತರ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದು ಈ ಚಿತ್ರದಲ್ಲಿಯೇ. ಹ್ಯಾಟ್ರಿಕ್ ಜೋಡಿ ನಿರೀಕ್ಷೆಯಂತೆ ಮೋಡಿ ಮಾಡುವಲ್ಲಿ ಯಶಸ್ವಿಯಾಗಲಿಲ್ಲ.

    ವಿಮರ್ಶೆ: ಕಣ್ಣಾಲಿಯ ಜಲಪಾತ ಬಂಧಿಸುವ 'ಮುಗುಳುನಗೆ'ವಿಮರ್ಶೆ: ಕಣ್ಣಾಲಿಯ ಜಲಪಾತ ಬಂಧಿಸುವ 'ಮುಗುಳುನಗೆ'

    'ಭರ್ಜರಿ' ಸಿನಿಮಾ

    'ಭರ್ಜರಿ' ಸಿನಿಮಾ

    ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಸಿನಿಮಾ ವರ್ಷದ ಮತ್ತೊಂದು ಮೆಗಾಹಿಟ್ ಸಿನಿಮಾ. 75 ದಿನಗಳನ್ನ ಪೂರೈಸಿ ಶತದಿನದತ್ತ ಮುನ್ನಗ್ಗುತ್ತಿದೆ. ಬಾಕ್ಸ್ ಅಫೀಸ್ ನಲ್ಲಿ ಭರ್ಜರಿ ಗಳಿಕೆ ಕಂಡ ಧ್ರುವ ಸರ್ಜಾ ಹ್ಯಾಟ್ರಿಕ್ ಗೆಲವು ಕಂಡಿದ್ದರು. ಚೇತನ್ ಕುಮಾರ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ರಚಿತಾ ರಾಮ್, ಹರಿಪ್ರಿಯಾ, ವೈಶಾಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದರು.

    ವಿಮರ್ಶೆ: 'ಬಹದ್ದೂರ್' ಹುಡುಗನ 'ಭರ್ಜರಿ' ಪ್ರೇಮ ಕಥೆವಿಮರ್ಶೆ: 'ಬಹದ್ದೂರ್' ಹುಡುಗನ 'ಭರ್ಜರಿ' ಪ್ರೇಮ ಕಥೆ

    ದರ್ಶನ್ 'ತಾರಕ್'

    ದರ್ಶನ್ 'ತಾರಕ್'

    ಪುನೀತ್ ರಾಜ್ ಕುಮಾರ್ ಅವರ ರಾಜಕುಮಾರ ಚಿತ್ರದ ನಂತರ ಅದೇ ಮಾರ್ಗ ಅನುಸರಿಸಿದ ಸಿನಿಮಾ ತಾರಕ್. ದರ್ಶನ್ ಅವರ ಇಮೇಜ್ ಬದಲಾಯಿಸಿಕೊಂಡಿದ್ದ ಈ ಚಿತ್ರವನ್ನ ಸ್ಯಾಂಡಲ್ ವುಡ್ ಪ್ರಿಯರು ಮೆಚ್ಚಿಕೊಂಡರು. ರೆಗ್ಯೂಲರ್ ಕಥೆಗಳನ್ನು ಬದಿಗಿಟ್ಟಿದ್ದ ದರ್ಶನ್ ಫ್ಯಾಮಿಲಿ ಸೆಂಟಿಮೆಂಟ್ ಮೂಲಕ ಮೋಡಿ ಮಾಡಿದ್ದರು. ಪ್ರಕಾಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಶ್ರುತಿ ಹರಿಹರನ್ ಮತ್ತು ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿದ್ದರು.

    ವಿಮರ್ಶೆ: ದರ್ಶನ್ ಇಮೇಜ್ ಬದಲಿಸಿದ 'ತಾರಕ್'ವಿಮರ್ಶೆ: ದರ್ಶನ್ ಇಮೇಜ್ ಬದಲಿಸಿದ 'ತಾರಕ್'

    ಕಾಲೇಜ್ ಕುಮಾರ್

    ಕಾಲೇಜ್ ಕುಮಾರ್

    ಸಂತು ನಿರ್ದೇಶನ ಮಾಡಿದ್ದ ಕಾಲೇಜ್ ಕುಮಾರ ಸಿನಿಮಾ ಅಚ್ಚರಿಯ ಗೆಲುವು ಕಂಡಿದೆ. ಈ ಸಿನಿಮಾ ಬಿಡುಗಡೆಯಾದಾಗ, ಸಾಧಾರಣ ಯಶಸ್ಸು ಕಾಣಬಹುದು ಎಂಬ ಲೆಕ್ಕಾಚಾರವಿತ್ತು. ಆದ್ರೆ, ಅಚ್ಚರಿಯಂತೆ ಸಿನಿಮಾ ದೊಡ್ಡ ಗೆಲುವು ಸಾಧಿಸಿದೆ. ವಿಕ್ಕಿ, ಸಂಯುಕ್ತ ಹೆಗಡೆ, ರವಿಶಂಕರ್ ಮತ್ತು ಶ್ರುತಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

    ವಿಮರ್ಶೆ : 'ಕಾಲೇಜ್ ಕುಮಾರ'ನಿಗೆ ಪ್ರೇಕ್ಷಕ ಕ್ಲೀನ್ ಬೌಲ್ಡ್ವಿಮರ್ಶೆ : 'ಕಾಲೇಜ್ ಕುಮಾರ'ನಿಗೆ ಪ್ರೇಕ್ಷಕ ಕ್ಲೀನ್ ಬೌಲ್ಡ್

    ವರ್ಷಾಂತ್ಯಕ್ಕೆ 'ಮಫ್ತಿ'

    ವರ್ಷಾಂತ್ಯಕ್ಕೆ 'ಮಫ್ತಿ'

    ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಜೋಡಿಯ ಮಫ್ತಿ ಡಿಸೆಂಬರ್ 1 ರಂದು ಬಿಡುಗಡೆಯಾಗಿದೆ. ಚಿತ್ರಕ್ಕೆ ಸೂಪರ್ ರೆಸ್ಪಾನ್ಸ್ ಸಿಕ್ಕಿದ್ದು, ಬಾಕ್ಸ್ ಆಫೀಸ್ ನಲ್ಲೂ ಸವಾರಿ ಮಾಡ್ತಿದೆ. ಈ ವರ್ಷ ಶಿವಣ್ಣ ಅಭಿನಯದ ನಾಲ್ಕನೇ ಸಿನಿಮಾ ಇದಾಗಿದೆ. ನರ್ತನ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.

    ಫ್ತಿ' ವಿಮರ್ಶೆ : ಹಿತವನು ಬಯಸುವ ಕಡು ರಾಕ್ಷಸನ ಕಥೆ !ಫ್ತಿ' ವಿಮರ್ಶೆ : ಹಿತವನು ಬಯಸುವ ಕಡು ರಾಕ್ಷಸನ ಕಥೆ !

    ಯಾವುದು ದಿ ಬೆಸ್ಟ್?

    ಯಾವುದು ದಿ ಬೆಸ್ಟ್?

    ಈ ಎಲ್ಲ ಚಿತ್ರಗಳು ಒಂದಲ್ಲ ಒಂದು ಕಾರಣಕ್ಕೆ ಪ್ರೇಕ್ಷಕನಿಗೆ ಹೆಚ್ಚು ಇಷ್ಟವಾಗಿರುವ ಚಿತ್ರಗಳು. ನಾವು ಅತ್ಯುತ್ತಮವೆನಿಸುವ ಕೆಲವು ಚಿತ್ರಗಳ ಪಟ್ಟಿ ನೀಡಿದ್ದೇವೆ. ಇವುಗಳಲ್ಲಿ ದಿ ಬೆಸ್ಟ್ ಸಿನಿಮಾ ಯಾವುದು? ನಿಮಗೆ ಯಾವ ಸಿನಿಮಾ ತುಂಬ ಇಷ್ಟವೆಂದು ಕಾಮೆಂಟ್ ಮಾಡಿ ತಿಳಿಸಿ.....

    'ಸ್ಟಾರ್' ಇಲ್ಲದೆ ಸಕ್ಸಸ್ ಕಂಡ ವರ್ಷದ 'ಡಿಸೆಂಟ್' ಚಿತ್ರಗಳು'ಸ್ಟಾರ್' ಇಲ್ಲದೆ ಸಕ್ಸಸ್ ಕಂಡ ವರ್ಷದ 'ಡಿಸೆಂಟ್' ಚಿತ್ರಗಳು

    English summary
    Kannada Movies 2017 yearly report includes Box Office Success and popularity meter rate. Here is the Top best movies of 2017.
    Friday, December 8, 2017, 20:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X