India
  For Quick Alerts
  ALLOW NOTIFICATIONS  
  For Daily Alerts

  'ಬೆತ್ತನಗೆರೆ' ಚಿತ್ರ ಬಿಡುಗಡೆಗೆ ಹೊಸ ತಲೆನೋವು

  By Harshitha
  |

  ಡೆಡ್ಲಿ ಬ್ರದರ್ಸ್ ಬೆತ್ತನಗೆರೆ ಸೀನ ಮತ್ತು ಬೆತ್ತನಗೆರೆ ಶಂಕ್ರ ರವರ ರಿಯಲ್ ರಕ್ತಚರಿತ್ರೆ ಕುರಿತು ರೆಡಿಯಾಗಿರುವ ಸಿನಿಮಾ 'ಬೆತ್ತನಗೆರೆ'. ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ವಿವಾದಗಳಿಂದ ಸದ್ದು ಮಾಡುತ್ತಲೇ ಇದೆ.

  ಇದೀಗ ಬಿಡುಗಡೆಗೆ ಸಿದ್ಧವಾಗಿರುವ 'ಬೆತ್ತನಗೆರೆ' ಚಿತ್ರವನ್ನ ಸೀನನ ಸಹೋದರ ಶಂಕ್ರ ಎಲ್ಲರಿಗಿಂತ ಮೊದಲು ನೋಡಬೇಕಂತೆ. ಹಾಗಂತ ಚಿತ್ರತಂಡಕ್ಕೆ ಶಂಕ್ರ ತಾಕೀತು ಮಾಡಿದ್ದಾರೆ. ['ಬೆತ್ತನಗೆರೆ' ಚಿತ್ರಕ್ಕೆ ಎದುರಾಗಿದೆ ಹೊಸ ಸಂಕಷ್ಟ]

  ಇದರಿಂದ ಚಿತ್ರತಂಡ ರಿಲೀಸ್ ಗೂ ಮುನ್ನ ಸ್ಪೆಷಲ್ ಸ್ಕ್ರೀನಿಂಗ್ ಮಾಡೋಕೆ ನಿರ್ಧರಿಸಿದೆ. ಇಷ್ಟಾದ್ರೆ ಪರ್ವಾಗಿಲ್ಲ. ಆದ್ರೆ, 'ಬೆತ್ತನಗೆರೆ' ಸಿನಿಮಾ ಬಿಡುಗಡೆ ಮಾಡುವುದಕ್ಕೆ ಬಿಡುವುದಿಲ್ಲ ಅಂತ ಬೆತ್ತನಗೆರೆ ಸೀನನ ತಾಯಿ ಹೊಸ ಕ್ಯಾತೆ ತೆಗೆದಿದ್ದಾರೆ. ಇದರಿಂದ ಚಿತ್ರತಂಡಕ್ಕೆ ತಲೆನೋವು ಶುರುವಾಗಿದೆ. ['ಬೆತ್ತನಗೆರೆ' ಸೀನನ್ನ ಕೊಚ್ಚಿ ಹಾಕಿದ ಸೆನ್ಸಾರ್ ಮಂಡಳಿ]

  ಅಸಲಿಗೆ, 'ಬೆತ್ತನಗೆರೆ' ಚಿತ್ರ ಮುಹೂರ್ತ ಮುಗಿಸಿದಾಗಲೇ ಫಿಲ್ಮ್ ಚೇಂಬರ್ ಮಟ್ಟಿಲೇರಿದ್ದ ಸೀನನ ತಾಯಿ, ಚಿತ್ರತಂಡದ ವಿರುದ್ಧ ದೂರು ನೀಡಿದ್ದರು. ಈಗ ತಮ್ಮ ಮಗನ ಹೆಸರಲ್ಲಿ ಸಿನಿಮಾ ಮಾಡಿರುವುದು ಸರಿಯಿಲ್ಲ. ರಿಲೀಸ್ ಮಾಡೋಕೆ ಬಿಡೋದಿಲ್ಲ ಅಂತ ಪಟ್ಟು ಹಿಡಿದು ಕೂತಿದ್ದಾರೆ.

  ಬೆತ್ತನಗೆರೆ ಸೀನನ ತಾಯಿ ಮನವೊಲಿಸುವ ಕಾರ್ಯದಲ್ಲಿ ಚಿತ್ರದ ನಿರ್ದೇಶಕ ಮೋಹನ್ ತೊಡಗಿದ್ದಾರೆ. ಎಲ್ಲಾ ವಿವಾದಗಳು ಬಗೆಹರಿದು 'ಬೆತ್ತನಗೆರೆ' ಸಿನಿಮಾ ರಿಲೀಸ್ ಆಗುತ್ತಾ ಅನ್ನೋದು ಸದ್ಯದ ಸಸ್ಪೆನ್ಸ್.

  ಅಂದ್ಹಾಗೆ, 'ಬೆತ್ತನಗೆರೆ' ಚಿತ್ರದಲ್ಲಿ ಬೆತ್ತನಗೆರೆ ಸೀನ ಪಾತ್ರದಲ್ಲಿ ಸುಮಂತ್ ಶೈಲೇಂದ್ರ ಬಾಬು ಕಾಣಿಸಿಕೊಂಡಿದ್ದರೆ, ಬೆತ್ತನಗೆರೆ ಶಂಕ್ರ ಪಾತ್ರದಲ್ಲಿ 'ಸಿಲ್ಕ್' ಖ್ಯಾತಿಯ ಅಕ್ಷಯ್ ಇದ್ದಾರೆ. ವಿಶೇಷ ಪಾತ್ರದಲ್ಲಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಕೂಡ ಅಭಿನಯಿಸಿದ್ದಾರೆ.

  English summary
  Rowdysheeter Bettanagere Seena's mother is unhappy as the movie 'Bettanagere' is based upon her son. Hence, the movie is facing trouble for its release. Kannada Movie 'Bettanagere' features Akshay, Sumanth Shailendra, Vinod Kambli in the lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X