»   » 'ಎ' ಚಿತ್ರದ ನಿರ್ಮಾಪಕ ಸಿಲ್ಕ್ ಮಂಜು ಹೊಸ ಸಾಹಸ ಉಪ್ಪಿ 50

'ಎ' ಚಿತ್ರದ ನಿರ್ಮಾಪಕ ಸಿಲ್ಕ್ ಮಂಜು ಹೊಸ ಸಾಹಸ ಉಪ್ಪಿ 50

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸುಮಾರು 18 ವರ್ಷಗಳ ಹಿಂದೆ 25 ಕೋಟಿಗೂ ಮೀರಿ ಹಣ ಮಾಡಿದ ಐತಿಹಾಸಿಕ 'ಎ' ಚಿತ್ರದ ನಿರ್ಮಾಪಕ ಬಿ.ಜಿ ಮಂಜುನಾಥ್ ಅಲಿಯಾಸ್ ಸಿಲ್ಕ್ ಮಂಜು ಅವರು ಮತ್ತೊಮ್ಮೆ ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ. ಈ ಬಾರಿ, ಉಪೇಂದ್ರ ಅವರ 50ನೇ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ.

  20 ಸಿನಿಮಾ ಮಂದಿರಗಳಲ್ಲಿ ರಜತೋತ್ಸವ ಆಚರಿಸಿದ, ಉಪೇಂದ್ರರನ್ನು ಸೂಪರ್ ಸ್ಟಾರ್ ಮಟ್ಟಕ್ಕೆ ಏರಿಸಿ, ಅವರಿಗೆ ರಾಜ್ಯ ಶ್ರೇಷ್ಟ ನಟ ಪ್ರಶಸ್ತಿ ಬರಲು ಕಾರಣರಾದ ಹಾಗೂ ಪ್ರೀತಿಯಿಂದ 'ಸಿಲ್ಕ್ ಮಂಜು' ಎಂದು ಕರೆಯಲ್ಪಡುವ ಬಿಜಿ ಮಂಜುನಾಥ್ ಅವರು ಯಶಸ್ಸಿನಿಂದ ದೂರಸರಿದಿದ್ದರು. ಚಿತ್ರದ ವಿತರಣೆ ಹಕ್ಕನ್ನು ಕೂಡಾ ಮಾರಾಟ ಮಾಡಿ ಅಚ್ಚರಿ ಮೂಡಿಸಿದ್ದರು.

  'ಎ' ಮೂಲಕ ಗುರುಕಿರಣ್ ಅವರನ್ನು ಸಂಗೀತ ನಿರ್ದೇಶಕರನ್ನಾಗಿ ಮಾಡಿ, ಅವರೂ ಸಹ ಪ್ರಶಸ್ತಿ ಗಿಟ್ಟಿಸಿಕೊಂಡರು. ವೇಣು ಛಾಯಾಗ್ರಾಹಕರಾಗಿ ಮೊದಲ ಬಾರಿ ಪಾದಾರ್ಪಣೆ ಮಾಡಿ ಚಿತ್ರರಸಿಕರ ಮನಸೂರೆಗೊಂಡು ತೆಲುಗು ಹಾಗೂ ತಮಿಳು ಭಾಗಳಲ್ಲೂ ಈ ಚಿತ್ರ ನಿರ್ಮಾಣವಾಯಿತು.

  BG Manjunath Producer of Upendra's A film is back with Uppi's 50th Film

  1998ರಲ್ಲಿ ಬಿಡುಗಡೆಯಾದ 'ಎ', ಈ ಸಹಸ್ರಮಾನದ ಪ್ರೇಕ್ಷಕರಿಗೆ ಮಾನಸಿಕವಾಗಿ ಕಾಡಿತು. ಒಬ್ಬ ಚಿತ್ರ ನಿರ್ದೇಶಕ ಹಾಗೂ ಒಬ್ಬ ನಟಿಯ ನಡವೆ ಪ್ರೀತಿ ಮುರಿದ ಕಥೆಯನ್ನು ಫ್ಲಾಷ್ ಬ್ಯಾಕ್ ಮೂಲಕ ಸುಂದರವಾದ ನಿರೂಪಣೆಯಿಂದ ಕೂಡಿದ ಚಿತ್ರ ಬಿಗಿಯಾದ ಚಿತ್ರಕಥೆ ಹೊಂದಿತ್ತು.

  ಈ ಚಿತ್ರದಲ್ಲಿ ನಿರ್ದೇಶಕನಾಗಿ ಉಪೇಂದ್ರ, ಕನ್ನಡ ಚಿತ್ರರಂಗದ ಮೇರು ನಿರ್ದೇಶಕರಲ್ಲಿ ಒಬ್ಬರಾದ ಶ್ರೀ ಪುಟ್ಟಣ ಕಣಗಾಲ್ ಅವರನ್ನು ನೆನಪಿಗೆ ತಂದರು. ಪ್ರೇಕ್ಷಕರನ್ನು ಕೊನೆಯವರೆಗೆ ಗೂಢತೆಯಲ್ಲಿ ಮುಳುಗಿಸಲು ಉಪ್ಪಿ, ಹಿಮ್ಮುಖ ಚಿತ್ರಕಥೆ ಶೈಲಿ ಅಳವಡಿಸಿದ್ದರು. ಇದರಿಂದ ಪ್ರೇಕ್ಷಕರು ಮತ್ತೆ ಮ ಚಿತ್ರ ನೋಡಲು ಬರುವಂತಾಯಿತು.

  ಚಿತ್ರದಷ್ಟೇ ನಿಗೂಢ: 'ಎ' ಯಶಸ್ಸಿನ ಬಳಿಕ ಕನ್ನಡ ಚಿತ್ರರಂಗ ಅಕ್ಷರಶಃ ಉಪ್ಪಿಯ ತಾಳಕ್ಕೆ ಕುಣಿಯಿತು. ಆದರೆ ಸಿಲ್ಕ್ ಮಂಜು ಮಾತ್ರ ಸುಮಾರು ಎರಡು ದಶಕಗಳ ಕಾಲ ಹಿನ್ನೆಲೆಯಲ್ಲೇ ಉಳಿಯಲು ನಿರ್ಧರಿಸಿದರು. ಇದೂ ಸಹ, ಅವರು ನಿರ್ಮಿಸಿದ ಚಿತ್ರದಷ್ಟೇ ನಿಗೂಢ.

  ಆದರೆ ಸಿಲ್ಕ್ ಮಂಜುಗೆ ಮಾತ್ರ ಇದರಲ್ಲಿ ಯಾವ ನಿಗೂಢತೆಯೂ ಇಲ್ಲ ಎಂದೇ ಭಾವನೆ. ಅವರ ವ್ಯಾಪಾರ ವಹಿವಾಟು ಅಥವಾ 'ಎ' ಚಿತ್ರ ಕಾಡಿದಂತೆ ಇನ್ನಾವ ಚಿತ್ರಕಥೆಯೂ ಅವರಿಗೆ ಕಾಡಲಿಲ್ಲ ಎನ್ನುವುದೂ ಕಾರಣವಿರಬಹುದು.

  ಬಹುಶ: ಈಗ ವಿಧಿಯೇ ಅವರನ್ನು ಸರಿಯಾದ ಸಮಯಕ್ಕೆ ಅವರನ್ನು ಮತ್ತೆ ಕನ್ನಡ ಚಿತ್ರರಂಗಕ್ಕೆ ಎಳೆದು ತಂದಿದೆ. ಈ ಬಾರಿ ಅದು, ಕನ್ನಡ ಚಿತ್ರರಂಗದಲ್ಲಿ ಉಪ್ಪಿಯ ಸ್ವರ್ಣೋತ್ಸವ ಆಚರಿಸಲು ಉಪ್ಪಿಗಾಗಿ ಮತ್ತೊಂದು ಚಿತ್ರ ನಿರ್ಮಾಣ ಮಾಡಲಿದ್ದಾರೆ.

  ಉಪ್ಪಿಯ ಅನನ್ಯ ಶೈಲಿಗೆ ಸರಿಹೊಂದುವಂಥ ಚಿತ್ರಕಥೆಗೆ ಮಂಜು ಹುಡುಕಾಟ ನಡೆಸಿದ್ದಾರೆ. ಇದು ಉಪ್ಪಿಯ 50ನೇ ಚಿತ್ರವಾಗಿ ಮತ್ತೊಂದು ಇತಿಹಾಸ ನಿರ್ಮಿಸಬೇಕು ಎನ್ನುವುದು ಅವರ ಆಸೆ. ಮುಂಬರುವ ಚಿತ್ರ ಕಮರ್ಶಿಯಲ್ ಥ್ರಿಲ್ಲರ್ ಎನ್ನುವುದನ್ನು ಬಿಟು ಅವರು ಬೇರೇನೂ ಬಹಿರಂಗಪಡಿಸುತ್ತಿಲ್ಲ. ಆದರೆ ಇದು ಉಪ್ಪಿಯ ಚಿತ್ರ ಎನ್ನುವ ಭರವಸೆ ನೀಡುತ್ತಾರೆ. ಅನಿರೀಕ್ಷಿತಯ ನಿರೀಕ್ಷೆ ಮಾಡಿ. ಈ ಚಿತ್ರಕ್ಕೆ ಸಂಗೀತ ಒದಗಿಸಲು ಇಳಯರಾಜ ಅವರನ್ನು ಕೋರಲಾಗಿದೆ.

  ಸಿಲ್ಕ್ ಮಂಜು ಅವರ ರೇಷ್ಮೆಯ ಸ್ಪರ್ಶ ಇದೆ ಎಂದ ಮೇಲೆ, ಒಂದಂತೂ ಖಚಿತ. ಉಪ್ಪಿ @50, ಬಾಕ್ಸ್ ಆಫೀಸ್ ದಾಖಲೆ ನಿರ್ಮಾಣ ನಿರೀಕ್ಷಿಸಬಹುದು. ಸಿಲ್ಕು ಮಂಜುಗೆ ಒಂದು ಸಾಲು ಬರೆಯಬೇಕೆ? ನಿಮ್ಮ ಅನಿಸಿಕೆಯನ್ನು ಅವರಿಗೆ ಇಮೇಲ್ ಮಾಡಿ 

  English summary
  BG Manjunath fondly called Silk Manju, the producer of the iconic ‘A’ Kannada Film is back in KFI. Silk Manju is on the hunt for a script befitting Uppi’s trademark style and image and also landmark as Uppi’s 50th film.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more