For Quick Alerts
  ALLOW NOTIFICATIONS  
  For Daily Alerts

  ಸೆಪ್ಟೆಂಬರ್ 2ಕ್ಕೆ ಸುದೀಪ್ ಹಬ್ಬ, ಸೆಪ್ಟೆಂಬರ್ 1ಕ್ಕೆ ಧನಂಜಯ್ ಹಬ್ಬ

  By Bharath Kumar
  |
  ಡಾಲಿ ಧನಂಜಯ ಏನ್ ಮಾಡ್ತಿದ್ದಾರೆ ನೋಡಿ..! | Filmibeat Kannada

  ಸೆಪ್ಟೆಂಬರ್ 2 ರಂದು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ಆ ದಿನವನ್ನ ಸುದೀಪ್ ಅಭಿಮಾನಿಗಳೆಲ್ಲಾ ಸೇರಿ 'ಕಿಚ್ಚೋತ್ಸವ' ಎಂದು ಆಚರಿಸಲು ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕು ಒಂದು ದಿನ ಮುಂಚೆಯೇ ಡಾಲಿ ಧನಂಜಯ್ ಅವರ ಅಭಿಮಾನಿಗಳು ಹಬ್ಬ ಮಾಡಲು ಸಜ್ಜಾಗುತ್ತಿದ್ದಾರೆ.

  ಅರೇ ಧನಂಜಯ್ ಅವರ ಹುಟ್ಟುಹಬ್ಬ ಕಳೆದ ವಾರವೇ (ಆಗಸ್ಟ್ 23) ಆಯ್ತಲ್ವಾ? ಮತ್ತೆ ಯಾವುದು ಹಬ್ಬ ಎಂದು ಆಶ್ಚರ್ಯ ಪಡೆಬೇಡಿ. ಸೆಪ್ಟೆಂಬರ್ 1 ರಂದು ಧನಂಜಯ್ ಅಭಿನಯಿಸುತ್ತಿರುವ 'ಬೈರವಗೀತಾ' ಚಿತ್ರದ ಟ್ರೈಲರ್ ಬಿಡುಗಡೆಯಾಗುತ್ತಿದೆ.

  ದೊರೆಗಳ ದರ್ಪಕ್ಕೆ ಜ್ವಾಲಾಮುಖಿಯಾದ 'ಡಾಲಿ' ದೊರೆಗಳ ದರ್ಪಕ್ಕೆ ಜ್ವಾಲಾಮುಖಿಯಾದ 'ಡಾಲಿ'

  ಈ ಹಿಂದೆ ಕಿಚ್ಚ ಸುದೀಪ್ ಅವರೇ, ಧನಂಜಯ್ ಅವರ 'ಬೈರವಗೀತಾ' ಚಿತ್ರದ ಬಗ್ಗೆ ಹೊಗಳಿದ್ದರು. ಚಿತ್ರದ ಪೋಸ್ಟರ್ ಶೇರ್ ಮಾಡಿ ಆಲ್ ದಿ ಬೆಸ್ಟ್ ಹೇಳಿದ್ದರು. ಹೀಗಾಗಿ, ಈ ಸಿನಿಮಾದ ಟ್ರೈಲರ್ ಗೆ ಸುದೀಪ್ ಅವರ ಒಬ್ಬ ವೀಕ್ಷಕರಾಗಲಿದ್ದಾರೆ ಎನ್ನುವುದು ನಿಜಾ.

  ಡಾಲಿಯ 'ಭೈರವ' ಲುಕ್ ಗೆ ಥ್ರಿಲ್ ಆದ ಸುದೀಪ್ ಹೇಳಿದ್ದೇನು.? ಡಾಲಿಯ 'ಭೈರವ' ಲುಕ್ ಗೆ ಥ್ರಿಲ್ ಆದ ಸುದೀಪ್ ಹೇಳಿದ್ದೇನು.?

  ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ತಯಾರಾಗುತ್ತಿರುವ 'ಬೈರವ ಗೀತಾ' ಚಿತ್ರದ ಮತ್ತಷ್ಟು ಪೋಸ್ಟರ್ ಗಳು ರಿಲೀಸ್ ಆಗಿದ್ದು, ಈ ಚಿತ್ರದಲ್ಲಿ ಧನಂಜಯ್ ಸಖತ್ ಹಾಟ್ ಆಗಿ ಅಭಿನಯಿಸಿದ್ದಾರೆ. ಹೀರೋಯಿನ್ ಜೊತೆ ಲಿಪ್ ಲಾಕ್ ಮಾಡಿರುವ ಪೋಸ್ಟರ್ ಕೂಡ ರಿಲೀಸ್ ಆಗಿರುವುದು ಇದಕ್ಕೆ ಸಾಕ್ಷಿ.

  ಭೈರವನಾದ 'ಡಾಲಿ'ಗೆ ಉಘೇ ಎಂದ ಚಂದನವನ ಭೈರವನಾದ 'ಡಾಲಿ'ಗೆ ಉಘೇ ಎಂದ ಚಂದನವನ

  ಇನ್ನು ಸಿದ್ಧಾರ್ಥ್ ಎಂಬ ಯುವ ನಿರ್ದೇಶಕ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಐರಾ ನಾಯಕಿಯಾಗಿ ಅಭಿನಯಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. 'ಬೈರವಗೀತಾ' ಚಿತ್ರವನ್ನ ಪ್ರತಿಹಂತದಲ್ಲೂ ಪ್ರಚಾರ ಮಾಡ್ತಿರುವ ವರ್ಮಾ ಈ ಸಿನಿಮಾ ಬಗ್ಗೆ ದೊಡ್ಡ ಭರವಸೆ ಇಟ್ಟುಕೊಂಡಿದ್ದಾರೆ.

  English summary
  Telugu and kannada bilingual movie 'Bhairava Geetha' trailer will release on september 1st. the movie directed by Siddhartha‘s and lead actors are Dhananjay and Irra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X