»   » 'ದಿ ವಾಲ್' ದ್ರಾವಿಡ್ ಬಗ್ಗೆ ಸಿನಿಮಾ: ಅನೂಪ್ ಭಂಡಾರಿ ಕಥೆಯಲ್ಲಿ ಏನಿರುತ್ತೆ?

'ದಿ ವಾಲ್' ದ್ರಾವಿಡ್ ಬಗ್ಗೆ ಸಿನಿಮಾ: ಅನೂಪ್ ಭಂಡಾರಿ ಕಥೆಯಲ್ಲಿ ಏನಿರುತ್ತೆ?

Posted By: Naveen
Subscribe to Filmibeat Kannada

ಭಾರತ ಕ್ರಿಕೆಟ್ ತಂಡದ 'ದಿ ವಾಲ್' ರಾಹುಲ್ ದ್ರಾವಿಡ್ ಅವರ ಜೀವನ ಚರಿತ್ರೆಯ ಸಿನಿಮಾ ಈಗ ಕನ್ನಡದಲ್ಲಿ ಬರುತ್ತದೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತಿತ್ತು. ಈ ಚಿತ್ರವನ್ನ 'ರಂಗಿತರಂಗ' ಚಿತ್ರದ ಭಂಡಾರಿ ಸಹೋದರರು ಮಾಡಲಿದ್ದಾರೆ ಅಂತ ಹೇಳಲಾಗಿತ್ತು.['ಕನ್ನಡದ ರಾಜರತ್ನ' ಜೊತೆಯಲ್ಲಿ 'ಭಂಡಾರಿ' ಸಹೋದರರ ಹೊಸ ಚಿತ್ರ ]

ಈಗ ಈ ಸುದ್ದಿಯ ಬಗ್ಗೆ ಸ್ವತಃ ನಿರ್ದೇಶಕ ಅನೂಪ್ ಭಂಡಾರಿ ಸ್ವಷ್ಟನೆ ನೀಡಿದ್ದು, ದ್ರಾವಿಡ್ ಸಿನಿಮಾದ ಬಗ್ಗೆ ಇದ್ದ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.[ನಿರುಪ್ ಹುಟ್ಟುಹಬ್ಬಕ್ಕೆ ಅನುಪ್ ನಿಮಗೆ ಉಡುಗೊರೆ ಕೊಡ್ತಾರಂತೆ.! ]

ಬಾಲಿವುಡ್ ನಲ್ಲಿ 'ಧೋನಿ', 'ಅಜರುದ್ದೀನ್', ಜೀವನಾಧಾರಿತ ಸಿನಿಮಾ ಬಂದಿತ್ತು. ಇನ್ನು ಸಚಿನ್ ತೆಂಡುಲ್ಕರ್ ಅವರ ಸಿನಿಮಾ ಸದ್ಯದಲ್ಲೇ ರಿಲೀಸ್ ಆಗಲಿದೆ. ಅದೇ ರೀತಿಯಲ್ಲಿ ಕನ್ನಡದಲ್ಲಿಯೂ ಈಗ ರಾಹುಲ್ ದ್ರಾವಿಡ್ ಅವರ ಸಿನಿಮಾ ಬರಲಿದೆಯಾ ಎನ್ನುವುದು ಎಲ್ಲರ ಪ್ರಶ್ನೆಯಾಗಿತ್ತು.? ಒಂದು ಪಕ್ಷ ಬಂದರು ದ್ರಾವಿಡ್ ಬಯೋಪಿಕ್ ನಲ್ಲಿ ಏನಿರುತ್ತೆ ಎಂಬ ಕುತೂಹಲವೂ ಸಹಜ.! ಅದಕ್ಕೆ ಉತ್ತರ ಮುಂದಿದೆ ಓದಿ...

ಅನೂಪ್ ಭಂಡಾರಿಯಿಂದ ಡೌಟ್ ಕ್ಲಿಯರ್

ದ್ರಾವಿಡ್ ಜೀವನಾಧಾರಿತ ಸಿನಿಮಾದ ಬಗ್ಗೆ ಅನೂಪ್ ಭಂಡಾರಿ ಸ್ವಷ್ಟನೆ ನೀಡಿದ್ದಾರೆ. ಸಿನಿಮಾ ಬರುತ್ತಾ? ಇಲ್ವಾ ಎಂಬುದರ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಈ ಮೂಲಕ ದ್ರಾವಿಡ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.[ಅನುಪ್ ಭಂಡಾರಿ 'ರಾಜರಥ' ಏರಿದ ರಾಣಿ ಅವಂತಿಕಾ ಶೆಟ್ಟಿ ]

ಅನೂಪ್ ಹೇಳಿದ್ದೇನು?

''ನಿರೂಪ್ ಭಂಡಾರಿ ಮತ್ತು ನಾನು ಕ್ರಿಕೆಟ್ ಆಟಗಾರರು ಸಹ ಹೌದು. ನಿರೂಪ್ ಭಂಡಾರಿ ಕ್ರಿಕೆಟ್ ಆಟದ ಶೈಲಿ ರಾಹುಲ್ ದ್ರಾವಿಡ್ ಆಟದ ಶೈಲಿಯ ರೀತಿಯೇ ಇದೆ. ಇದನ್ನ ನಾನು ಒಂದು ಪತ್ರಿಕೆಯ ಸಂದರ್ಶನದಲ್ಲಿ ಹೇಳಿದ್ದೆ'' - ಅನೂಪ್ ಭಂಡಾರಿ, ನಿರ್ದೇಶಕ [ಅನುಪ್ ಭಂಡಾರಿ ಅವರ ಮ್ಯೂಸಿಕ್ ಲವ್ ಎಂತದ್ದು ಅಂತಿರಾ? ]

ಪ್ರಶ್ನೆ ಬಂದಿತ್ತು ?

''ಪತ್ರಿಕೆಗೆ ಮಾತನಾಡುವಾಗ ನಿರೂಪ್ ಭಂಡಾರಿ ಕ್ರಿಕೆಟ್ ಶೈಲಿ ರಾಹುಲ್ ದ್ರಾವಿಡ್ ರನ್ನ ಹೋಲಿಕೆಯಾಗುತ್ತೆ ಅಂತ ಅಷ್ಟೆ ಹೇಳಿದ್ದೆ. ಆಗ 'ನೀವು ರಾಹುಲ್ ಡ್ರಾವಿಡ್ ಅವರ ಸಿನಿಮಾ ನಿರ್ದೇಶನ ಮಾಡಬಹುದಾ'.. ಅಂತ ಪ್ರಶ್ನಿಸಿದ್ದರು. ಅವಕಾಶ ಸಿಕ್ಕರೆ ಖಂಡಿತ ಮಾಡುತ್ತೇನೆ ಅಂತ ಹೇಳಿದ್ದೆ'' - ಅನೂಪ್ ಭಂಡಾರಿ, ನಿರ್ದೇಶಕ

ಕಥೆ ಮಾಡುತ್ತೇನೆ

''ಈ ಸುದ್ದಿ ಹೊರಬಂದಾಗ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಜನರ ರೆಸ್ಪಾನ್ಸ್ ನೋಡಿ ರಾಹುಲ್ ದ್ರಾವಿಡ್ ಅವರ ಸಿನಿಮಾ ಮಾಡಬೇಕು ಅಂತ ಅನಿಸಿದೆ. ಅದಕ್ಕೆ ಒಳ್ಳೆಯ ಕಥೆ ಮಾಡಿಕೊಳ್ಳುತ್ತೇನೆ'' - ಅನೂಪ್ ಭಂಡಾರಿ, ನಿರ್ದೇಶಕ

ದ್ರಾವಿಡ್ ಒಪ್ಪಿದರೆ ಸಿನಿಮಾ ಗ್ಯಾರೆಂಟಿ

''ರಾಹುಲ್ ದ್ರಾವಿಡ್ ಅವರ ಜೀವನಾಧರಿತ ಸಿನಿಮಾಗೆ ಒಳ್ಳೆಯ ಕಥೆ ಮಾಡಿಕೊಂಡು ಮೊದಲು ಅದನ್ನ ಅವರಿಗೆ ಹೇಳುತ್ತೆವೆ. ಒಂದು ವೇಳೆ ಅವರಿಗೆ ಕಥೆ ಇಷ್ಟ ಆದರೆ ಖಂಡಿತ ದ್ರಾವಿಡ್ ಅವರ ಜೀವನಾಧಾರಿತ ಸಿನಿಮಾವನ್ನ ಮಾಡುತ್ತೇವೆ'' - ಅನೂಪ್ ಭಂಡಾರಿ, ನಿರ್ದೇಶಕ

ಅನೇಕರ ಆಸೆ ಕೂಡ ಅದೇ

''ಬಾಲಿವುಡ್ ನಲ್ಲಿ 'ಧೋನಿ', ಅಜರುದ್ದೀನ್, ಸಚಿನ್ ರವರ ಸಿನಿಮಾ ಬಂದಾಗ ದ್ರಾವಿಡ್ ಅವರ ಸಿನಿಮಾ ಸಹ ಬರಬೇಕು ಅಂತ ಅನೇಕರ ಆಸೆಯಾಗಿದೆ. ಈಗ ಈ ಸಿನಿಮಾ ಕನ್ನಡದಲ್ಲಿ ಬಂದರೆ ಕನ್ನಡಿಗರ ಖುಷಿಗೆ ಭಾರವೇ ಇರುವುದಿಲ್ಲ'' - ಅನೂಪ್ ಭಂಡಾರಿ, ನಿರ್ದೇಶಕ

English summary
Former India captain Rahul Dravid biopic movie in kannada. rangitaranga director anup bhandari write a story on it.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada