For Quick Alerts
  ALLOW NOTIFICATIONS  
  For Daily Alerts

  ಏನಾಯ್ತು 'ಭರತ ಬಾಹುಬಲಿ' ಲಕ್ಕಿ ಡ್ರಾ?: ನಿರ್ಮಾಪಕರ ಪ್ರತಿಕ್ರಿಯೆ ಏನು?

  |

  ಇವತ್ತು ಜನರನ್ನು ಚಿತ್ರಮಂದಿರಕ್ಕೆ ಕರೆಸುವುದು ದೊಡ್ಡ ಸವಾಲು. ಅದಕ್ಕಾಗಿ ಚಿತ್ರತಂಡಗಳು ಹೊಸ ಹೊಸ ಪ್ಲಾನ್ ಮಾಡುತ್ತವೆ. ಈ ರೀತಿ ತಮ್ಮ ಸಿನಿಮಾವನ್ನು ಲಕ್ಕಿ ಡ್ರಾ ಮೂಲಕ 'ಭರತ ಬಾಹುಬಲಿ' ಚಿತ್ರತಂಡ ಪ್ರಚಾರ ಮಾಡಿತ್ತು.

  'ಭರತ ಬಾಹುಬಲಿ' ಸಿನಿಮಾವನ್ನು ಕರ್ನಾಟಕದ ಯಾವುದೇ ನಿಗದಿತ ಚಿತ್ರಮಂದಿರದಲ್ಲಿ ನೋಡಿದವರು ಈ ಲಕ್ಕಿ ಡ್ರಾದಲ್ಲಿ ಭಾಗಿಯಾಗಬಹುದು. ಚಿತ್ರದ ಟಿಕೆಟ್ ಜೊತೆಗೆ ಲಕ್ಕಿ ಕೂಪನ್ ಅನ್ನು ಸಹ ಪಡೆದುಕೊಳ್ಳಬೇಕು. ಸಿನಿಮಾ ಜನವರಿ 17 ರಂದು ಬಿಡುಗಡೆಯಾಗಿದ್ದು, ಜನವರಿ 31ರ ಒಳಗೆ ಈ ಅವಕಾಶ ನೀಡಲಾಗುವುದು ಎಂದು ಚಿತ್ರತಂಡ ತಿಳಿಸಿತ್ತು.

  Review: ಭರಪೂರ ಮನರಂಜನೆ ಕೊಡ್ತಾರೆ ಭರತ, ಬಾಹುಬಲಿReview: ಭರಪೂರ ಮನರಂಜನೆ ಕೊಡ್ತಾರೆ ಭರತ, ಬಾಹುಬಲಿ

  ಸಿನಿಮಾದ ಲಕ್ಕಿಡಿಪ್ ಗೆ ಒಂದು ಕೋಟಿ ಹಣವನ್ನು ಚಿತ್ರತಂಡ ನಿಗದಿ ಮಾಡಿತ್ತು. 20 ಅದೃಷ್ಟಶಾಲಿಗಳಿಗೆ ತಲಾ 5 ಲಕ್ಷ ಮೌಲ್ಯದ ಚಿನ್ನ ಅಥವಾ ಕಾರು ನೀಡುವುದಾಗಿ ಹೇಳಿತ್ತು. ಹೀಗಾಗಿ, ಲಕ್ಕಿ ಡ್ರಾ ವಿಜೇತರನ್ನು ಘೋಷಣೆ ಮಾಡುವುದು ಯಾವಾಗ ಎನ್ನುವ ಪ್ರಶ್ನೆ ಇದೀಗ ಮೂಡಿದೆ.

  ಇದೀಗ ಈ ಬಗ್ಗೆ ಸಿನಿಮಾದ ನಿರ್ಮಾಪಕ ಶಿವ ಪ್ರಕಾಶ್ ಹಾಗೂ ನಿರ್ದೇಶಕ ಮಂಜು ಮಾಂಡವ್ಯ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ್ದು, ಲಕ್ಕಿ ಡ್ರಾ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

  ಚಿತ್ರಮಂದಿರಗಳಿಂದ ಲೆಕ್ಕ ಸಿಗಬೇಕು

  ಚಿತ್ರಮಂದಿರಗಳಿಂದ ಲೆಕ್ಕ ಸಿಗಬೇಕು

  'ಭರತ ಬಾಹುಬಲಿ' ಲಕ್ಕಿ ಡ್ರಾ ಬಗ್ಗೆ ಸಿನಿಮಾದ ನಿರ್ಮಾಪಕ, ಐಶ್ವರ್ಯ ಫಿಲ್ಮ್ ಪ್ರೊಡಕ್ಷನ್ಸ್ ನ ಶಿವ ಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಕೇವಲ 20 ದಿನ ಕಳೆದಿದ್ದು, ಇನ್ನು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಮೊದಲು ಚಿತ್ರಮಂದಿರಗಳಿಂದ ಲೆಕ್ಕ ಪಡೆಯಬೇಕು. ಆ ನಂತರ ಲಕ್ಕಿ ಡ್ರಾ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.

  ಇನ್ನು ಆಫರ್ ನಡೆಯುತ್ತಿದೆ

  ಇನ್ನು ಆಫರ್ ನಡೆಯುತ್ತಿದೆ

  ಮೊದಲು ಸಿನಿಮಾದ ಲಕ್ಕಿ ಡ್ರಾಗೆ ಜನವರಿ 17 ರಿಂದ ಜನವರಿ 31ರವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ಈಗ ಈ ಅವಧಿಯನ್ನು ಹೆಚ್ಚು ಮಾಡಲಾಗಿದೆ. ಈಗಲೂ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗುತ್ತಿದ್ದು, ಇನ್ನಷ್ಟು ಜನರು ಬರಲಿ ಎಂಬ ಕಾರಣಕ್ಕೆ ಈ ಆಫರ್ ಅನ್ನು ಮುಂದುವರೆಸಲಾಗಿದೆಯಂತೆ.

  ಉಳಿದ ಲಕ್ಕಿ ಕೂಪನ್ ವಾಪಸ್

  ಉಳಿದ ಲಕ್ಕಿ ಕೂಪನ್ ವಾಪಸ್

  ಸಿನಿಮಾದ ಟಿಕೆಟ್ ಜೊತೆಗೆ ತಮ್ಮ ನಿರ್ಮಾಣ ಸಂಸ್ಥೆಯ ಲಕ್ಕಿ ಕೂಪನ್ ಗಳನ್ನು ಪ್ರೇಕ್ಷಕರಿಗೆ ನೀಡಲು ಚಿತ್ರಮಂದಿರಗಳಿಗೆ ಕೂಪನ್ ಕೊಡಲಾಗಿತ್ತು. ಇದರಲ್ಲಿ ಉಳಿದ ಕೂಪನ್ ಗಳನ್ನು ಹಿಂದೆ ಪಡೆಯಬೇಕಾಗಿದೆ. ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಇರುವ ಕೂಪನ್ ವಾಪಸ್ ನಿರ್ಮಾಣ ಸಂಸ್ಥೆಗೆ ಸೇರಬೇಕಾಗುತ್ತದೆ.

  ವ್ಯವಹಾರ ಸರಿಯಾಗಬೇಕು

  ವ್ಯವಹಾರ ಸರಿಯಾಗಬೇಕು

  ನಿರ್ಮಾಣ ಸಂಸ್ಥೆಗೆ ಸಿನಿಮಾದ ಪ್ರದರ್ಶನದ ಬಗ್ಗೆ ಲೆಕ್ಕ ಸಿಗಬೇಕು. ಕರ್ನಾಟಕದ ಎಷ್ಟು ಚಿತ್ರಮಂದಿರಗಳಲ್ಲಿ, ಎಷ್ಟು ಪ್ರದರ್ಶನ ಆಗಿದೆ. ಎಷ್ಟು ಟಿಕೆಟ್, ಎಷ್ಟು ಕೂಪನ್ ಹೋಗಿದೆ ಎಂದು ನೋಡಬೇಕು. ನಂತರ ವಿತರಕರ ಜೊತೆಗೆ ವ್ಯವಹಾರ ಬಗ್ಗೆ ಮಾತನಾಡಬೇಕು. ಇವುಗಳು ಮುಗಿದ ನಂತರ ಅದೃಷ್ಟಶಾಲಿಗಳನ್ನು ಘೋಷಣೆ ಮಾಡಿ, ಅವರಿಗೆ ನೀಡಬೇಕಾದ ಬಹುಮಾನ ನೀಡುತ್ತೇವೆ ಎಂದು ಚಿತ್ರದ ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.

  English summary
  Producer Shiva Prakash gave clarification about Bharatha Bahubali kannada movie lucky dip.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X