twitter
    For Quick Alerts
    ALLOW NOTIFICATIONS  
    For Daily Alerts

    ಭಾರತಿ ವಿಷ್ಣುವರ್ಧನ್ ಇಂದ ಯಡಿಯೂರಪ್ಪ ಭೇಟಿ, ಭೂಮಿ ಪೂಜೆಗೆ ಆಹ್ವಾನ

    |

    ಅಭಿಮಾನಿಗಳ, ವಿಷ್ಣವರ್ಧನ್ ಕುಟುಂಬದವರ ಬಹುಕಾಲದ ಬೇಡಿಕೆ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಹಸಿರು ನಿಶಾನೆ ಈಗಾಗಲೇ ದೊರೆತಿದ್ದು, ಕೆಲವೇ ದಿನಗಳಲ್ಲಿ ಗುದ್ದಲಿಪೂಜೆ ನೆರವೇರಲಿದೆ.

    ಸರ್ಕಾರಗಳ ಮೇಲೆ ಸತತ ಒತ್ತಾಯ, ಒತ್ತಡಗಳ ನಂತರ ಕಳೆದ ಡಿಸೆಂಬರ್ ನಲ್ಲಿ ಸಿಎಂ ಯಡಿಯೂರಪ್ಪ ಅವರು ಸ್ಮಾರಕ ನಿರ್ಮಾಣದ ಭರವಸೆ ನೀಡಿದ್ದರು. ಅಂತೆಯೇ ಈಗ ಸ್ಮಾರಕ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದ್ದು, ಗುದ್ದಲಿ ಪೂಜೆ ಮೂಲಕ ಸ್ಮಾರಕ ನಿರ್ಮಾಣ ಕಾರ್ಯ ಪ್ರಾರಂಭ ವಾಗಬೇಕಿದೆ.

    ರಾಜ್ ಕುಮಾರ್ ಅಪಹರಣವಾದ ಸಮಯದಲ್ಲಿ ವಿಷ್ಣುದಾದ ಹೇಳಿದ್ದ ಮಾತುಗಳಿವು...ರಾಜ್ ಕುಮಾರ್ ಅಪಹರಣವಾದ ಸಮಯದಲ್ಲಿ ವಿಷ್ಣುದಾದ ಹೇಳಿದ್ದ ಮಾತುಗಳಿವು...

    ಇದೇ ವಿಷಯವಾಗಿ ಇಂದು ನಟಿ ವಿಷ್ಣುವರ್ಧನ್ ಹಾಗೂ ನಟ ಅನಿರುದ್ಧ ಅವರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದರು. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ಗುದ್ದಲಿ ಪೂಜೆಯನ್ನು ನೆರವೇರಿಸುವಂತೆ ಸಿಎಂ ಅವರಲ್ಲಿ ಮನವಿಯನ್ನು ಮಾಡಿದರು.

    ಸೆಪ್ಟೆಂಬರ್ 15 ರಂದು ಗುದ್ದಲಿ ಪೂಜೆ

    ಸೆಪ್ಟೆಂಬರ್ 15 ರಂದು ಗುದ್ದಲಿ ಪೂಜೆ

    ಸೆಪ್ಟೆಂಬರ್ 15 ಕ್ಕೆ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಲಿದ್ದು, ಆನ್‌ಲೈನ್‌ ಮೂಲಕ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಅವರು ಚಾಲನೆ ನೀಡಲಿದ್ದಾರೆ.

    ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣ

    ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣ

    ಅಭಿಮಾನಿಗಳ ಆಸೆಯಂತೆ ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕಾರ್ಯ ಪ್ರಾರಂಭವಾಗಿದ್ದು, ಸೆಪ್ಟೆಂಬರ್ 15 ರಂದು ಬೆಳಿಗ್ಗೆ 10:30 ಕ್ಕೆ ಮುಹೂರ್ತ ನಿಗದಿಪಡಿಸಲಾಗಿದೆ. ಕೋವಿಡ್ ಭೀತಿ ಇರುವ ಕಾರಣ ಸಿಎಂ ಅವರು ಆನ್‌ಲೈನ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

    ಅಂಬರೀಶ್ ನಟಿಸಬೇಕಿದ್ದ 'ಬಂಧನ' ಚಿತ್ರ ವಿಷ್ಣುವರ್ಧನ್ ಪಾಲಾಗಿದ್ದು ಹೇಗೆ?ಅಂಬರೀಶ್ ನಟಿಸಬೇಕಿದ್ದ 'ಬಂಧನ' ಚಿತ್ರ ವಿಷ್ಣುವರ್ಧನ್ ಪಾಲಾಗಿದ್ದು ಹೇಗೆ?

    ಸಿಎಂ ಅನ್ನು ಭೇಟಿಯಾದ ನಿಯೋಗ

    ಸಿಎಂ ಅನ್ನು ಭೇಟಿಯಾದ ನಿಯೋಗ

    ಇದೇ ದಿನ, ನಟ ಶಿವರಾಜ್ ಕುಮಾರ್ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದ ಸಿನಿಮಾ ರಂಗ ಪ್ರಮುಖರ ನಿಯೋಗವೊಂದು ಇಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಯಿತು. ಕೊರೊನಾ ದಿಂದ ಚಲನಚಿತ್ರ ರಂಗ ಅನುಭವಿಸುತ್ತಿರುವ ಸಂಕಷ್ಟ, ಸರ್ಕಾರದಿಂದ ಎದುರುನೋಡುತ್ತಿರುವ ಸಹಾಯ, ಚಿತ್ರಮಂದಿರಗಳಿಗೆ ಮಾಡಬೇಕಾದ ಸಹಾಯ ಹೀಗೆ ಹಲವು ಮನವಿಗಳನ್ನು ಸಿಎಂ ಮುಂದೆ ನಿಯೋಗ ಇಟ್ಟಿದೆ.

    Recommended Video

    ಧನ್ವೀರ್ ಯಶಸ್ಸು ನೋಡಿ ಖುಷಿಪಟ್ಟ ಸ್ನೇಹಿತ | Filmibeat Kannada
    ಯಶ್, ದುನಿಯಾ ವಿಜಯ್ ಭಾಗಿ

    ಯಶ್, ದುನಿಯಾ ವಿಜಯ್ ಭಾಗಿ

    ಡಿಸಿಎಂ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್, ಕಲಾವಿದರಾದ ಶಿವರಾಜ್ ಕುಮಾರ್, ತಾರಾ ಅನುರಾಧ, ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ನಟ ಯಶ್, ವಿಜಯ್, ಸಾಧು ಕೋಕಿಲಾ ಉಪಸ್ಥಿತರಿದ್ದರು.

    English summary
    Actress Bharati Vishnuvardhan and Anirudh met CM Yediyurappa today and invite him to Vishnuvardha's
    Tuesday, September 29, 2020, 17:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X