ಪುತ್ಥಳಿ ಧ್ವಂಸ ಅವಮಾನವಲ್ಲ, ಆರ್ಶಿವಾದ ಅಂದುಕೊಳ್ಳೋಣ; ನಟಿ ಭಾರತಿ ವಿಷ್ಣುವರ್ಧನ್

ಇಂದು ಸಾಹಸಿಂಹ ವಿಷ್ಣುವರ್ಧನ್ ಅವರ 11ನೇ ಪುಣ್ಯಸ್ಮರಣೆ. ಅಭಿಮಾನಿಗಳು ಮತ್ತು ಗಣ್ಯರು ಹೃದಯವಂತನನ್ನು ಸ್ಮರಿಸುತ್ತಿದ್ದಾರೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಅವರ ಸಮಾಧಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.

Recommended Video

ಮಾತಾಡೋರು ಇದ್ರೇನೆ ಅವರು ಬದುಕಿದ್ದಾರೆ ಅನೋದು ಗೊತ್ತಾಗೋದು | Filmibeat Knnada

ಸದ್ಯ ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇಂದು ಭಾರತಿ ವಿಷ್ಣುವರ್ಧನ್ ಸೇರಿದಂತೆ ಇಡೀ ಕುಟುಂಬ ಭೇಟಿ ನೀಡಿ, ವಿಷ್ಣುವರ್ಧನ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಲಾಯಿತು. ಇದೇ ಸಮಯದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ನಟಿ ಭಾರತಿ ವಿಷ್ಣುವರ್ಧನ್, ವಿಷ್ಣುವರ್ಧನ್ ಸ್ಮಾರಕ ಧ್ವಂಸದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

'ವಿಷ್ಣುವರ್ಧನ್ ಬಗ್ಗೆ ಮಾತನಾಡುವವರು ಇರಬೇಕು. ಹಾಗಿದ್ದಲ್ಲಿ ಮಾತ್ರ ಅವರ ಇರುವಿಕೆ ಗೊತ್ತಾಗುತ್ತೆ. ಮೊನ್ನೆಯ ಘಟನೆಗೆ ಇಡೀ ಚಿತ್ರರಂಗ ಪ್ರತಿಕ್ರಿಯೆಸಿದೆ. ಘಟನೆಗೆ ಪ್ರತಿಕ್ರಿಯಿಸಿದ ಎಲ್ಲರಿಗು ಧನ್ಯವಾದಗಳು. ಎಲ್ಲರ ಮನದಲ್ಲು ವಿಷ್ಣು ಇದ್ದಾರೆ' ಎಂದಿದ್ದಾರೆ.

Bharathi Vishnuvardhan reaction about demolition of Vishnuvardhan statue

ಇನ್ನು, 'ಯಾರೋ ಕೆಲವರು ಅವರ ಬಗ್ಗೆ ಮಾತನಾಡುತ್ತಾರೆ. ಮಾತನಾಡುವವರು ಇದ್ದಾಗಲೇ ನಮ್ಮವರು ಇದ್ದಾರೆ ಅನಿಸೋದು. ಪುತ್ಥಳಿ ಧ್ವಂಸವನ್ನ ಅವಮಾನ ಅಂದುಕೊಳ್ಳಬಾರದು. ಅದನ್ನ ಆರ್ಶಿವಾದ ಅಂದುಕೊಳ್ಳೋಣ. ಅಂತವರಿಗೆ ನಾನು ಏನು ಹೇಳೋದು ಇಲ್ಲ. ಅಂತವರ ಬಗ್ಗೆ ಏನು ಹೇಳೋದೆ ಇರೋದೆ ಉತ್ತಮ' ಎಂದು ಭಾರತಿ ಪ್ರತಿಕ್ರಿಯಿಸಿದ್ದಾರೆ.

ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಬಾಲಗಂಗಾಧರ ಸ್ವಾಮಿಜಿ ವೃತ್ತದಲ್ಲಿ ಇದ್ದ ದಿವಂಗತ ಡಾ. ವಿಷ್ಣುವರ್ದನ್ ಸ್ಮಾರಕರವನ್ನು ಯಾರೋ ಕಿಡಿಗೇಡಿಗಳು ಧ್ವಂಸ ಮಾಡಿದ್ದರು. ಸ್ಯಾಂಡಲ್ ವುಡ್ ಯಜಮಾನನ ಪ್ರತಿಮೆ ಧ್ವಂಸ ಮಾಡಿದ್ದವರ ವಿರುದ್ಧ ದರ್ಶನ್, ಸುದೀಪ್ ಸೇರಿದಂತೆ ಅನೇಕರು ಕಿಡಿಕಾರಿದ್ದರು. ಇದೀಗ ಅದೇ ವೃತ್ತದಲ್ಲಿ ಮತ್ತೆ ವಿಷ್ಣುದಾದಾನ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ.

More from Filmibeat

English summary
Senior Actress Bharathi Vishnuvardhan reaction about demolition of Vishnuvardhan statue.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X