»   » 'ಕಾಲೇಜ್ ಕುಮಾರ್'ನಿಗೆ 25, 'ಭರ್ಜರಿ'ಗೆ 75 ದಿನಗಳ ಸಂಭ್ರಮ

'ಕಾಲೇಜ್ ಕುಮಾರ್'ನಿಗೆ 25, 'ಭರ್ಜರಿ'ಗೆ 75 ದಿನಗಳ ಸಂಭ್ರಮ

Posted By:
Subscribe to Filmibeat Kannada

ವಾರಕ್ಕೆ 4.. 5.. ಕೆಲವು ಬಾರಿ 9 ಸಿನಿಮಾಗಳು ಕನ್ನಡದಲ್ಲಿ ರಿಲೀಸ್ ಆಗುತ್ತಿವೆ. ಆದರೆ ಅವುಗಳಲ್ಲಿ ಗೆಲುವು ಮಾತ್ರ ಕೆಲವು ಸಿನಿಮಾಗಳಿಗೆ ಸಿಗುತ್ತದೆ. ಇತ್ತೀಚಿಗೆ ಬಿಡುಗಡೆಯಾಗಿರುವ ಕನ್ನಡ ಚಿತ್ರಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಪಡೆದ ಸಿನಿಮಾಗಳಲ್ಲಿ 'ಭರ್ಜರಿ' ಮತ್ತು 'ಕಾಲೇಜ್ ಕುಮಾರ್' ಪ್ರಮುಖವಾದವು.

ಈ ಎರಡು ಚಿತ್ರತಂಡದವರು ಇದೀಗ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಯಾಕಂದ್ರೆ ಒಂದು ಕಡೆ 'ಕಾಲೇಜ್ ಕುಮಾರ್' ಸಿನಿಮಾ 25 ದಿನ ಪೂರೈಸಿದರೆ, 'ಭರ್ಜರಿ' ಸಿನಿಮಾ 75 ದಿನಗಳನ್ನು ಕಂಪ್ಲೀಟ್ ಮಾಡಿದೆ.

'Bharjari' completes 75 days and 'College Kumar' completes 25days

'ಭರ್ಜರಿ' ಮತ್ತು 'ಕಾಲೇಜ್ ಕುಮಾರ್'... ಎರಡೂ ಚಿತ್ರಗಳು ಪಕ್ಕಾ ಕಮರ್ಶಿಯಲ್ ಸಿನಿಮಾಗಳು. ಎರಡು ಚಿತ್ರದಲ್ಲಿ ಮನರಂಜನೆಗೆ ಕೊರತೆ ಇರಲಿಲ್ಲ. 'ಕಾಲೇಜ್ ಕುಮಾರ್' ದಲ್ಲಿನ ಒಳ್ಳೆಯ ಕಥೆ, 'ಭರ್ಜರಿ'ಯಲ್ಲಿನ ಮಸಾಲೆ ಅಂಶಗಳು ಆ ಸಿನಿಮಾಗಳನ್ನು ಗೆಲ್ಲಿಸಿದೆ.

ಅಂದಹಾಗೆ, ನಾಳೆ 'ಭರ್ಜರಿ' ಚಿತ್ರದ ಯಶಸ್ಸಿನ ಹಿನ್ನಲೆಯಲ್ಲಿ ಕಾರ್ಯಕ್ರಮವೊಂದು ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ 'ನರ್ತಕಿ' ಚಿತ್ರಮಂದಿರದ ಬಳಿ ಡೊಳ್ಳು ಕುಣಿತದ ಜೊತೆಗೆ ಸಿಹಿ ಹಂಚಿಕೆ ಮತ್ತು ಕೇಕ್ ಕತ್ತರಿಸಿ ಚಿತ್ರತಂಡ ಸಂಭ್ರಮಾಚರಣೆಯಲ್ಲಿ ತೊಡಗಲಿದೆ. ಈ ಕಾರ್ಯಕ್ರಮದಲ್ಲಿ ಚಿತ್ರದ ನಟ ಧ್ರುವ ಸರ್ಜಾ ಭಾಗಿಯಾಗಲಿದ್ದಾರೆ.

English summary
'Bharjari' movie completes 75 days and 'College Kumar' movie completes 25 days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada