»   » ಸಖತ್ ಪವರ್ ಫುಲ್ ಆಗಿರುವ 'ಭರ್ಜರಿ' ಟ್ರೇಲರ್ ಮಿಸ್ ಮಾಡದೆ ನೋಡಿ

ಸಖತ್ ಪವರ್ ಫುಲ್ ಆಗಿರುವ 'ಭರ್ಜರಿ' ಟ್ರೇಲರ್ ಮಿಸ್ ಮಾಡದೆ ನೋಡಿ

Posted By:
Subscribe to Filmibeat Kannada

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ನಟನೆಯ 'ಭರ್ಜರಿ' ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಇನ್ನು ಬಿಡುಗಡೆಗೆ ಹತ್ತಿರವಿರುವ ಈ ವೇಳೆ ಈಗ ಸಿನಿಮಾವನ್ನು ಟ್ರೇಲರ್ ವೊಂದನ್ನು ಚಿತ್ರತಂಡ ರಿಲೀಸ್ ಮಾಡಿದೆ.

ಲೇಟ್ ಆದರೂ ಎಂಟ್ರಿ 'ಭರ್ಜರಿ'ಯಾಗಿದೆ: ಪರಭಾಷಾ ಚಿತ್ರಗಳು ಸೈಡಿಗ್ಹೋಗ್ಬೇಕ್ ಅಷ್ಟೆ.!

'ಭರ್ಜರಿ' ಸಿನಿಮಾದ ಎರಡು ವಿಡಿಯೋ ಹಾಡುಗಳ ನಂತರ ಈಗ ಟ್ರೇಲರ್ ಹೊರಬಂದಿದೆ. ಟ್ರೇಲರ್ ನೋಡಿದವರಿಗೆ ಒಂದು ಕಂಪ್ಲೀಟ್ ಕಮರ್ಶಿಯಲ್ ಸಿನಿಮಾದ ಅನುಭವ ಬರುತ್ತದೆ. ಆಕ್ಷನ್, ಲವ್, ಕಾಮಿಡಿ, ಕಲರ್ ಫುಲ್ ಹಾಡುಗಳು ಹೀಗೆ ಸಿನಿಮಾ ಪಕ್ಕ ಎಂಟರ್ ಟೇನಿಂಗ್ ಪ್ಯಾಕೇಜ್ ಎಂದು ಟ್ರೇಲರ್ ನೋಡಿದರೆ ತಿಳಿಯುತ್ತದೆ.

'Bharjari' kannada movie trailer is out

ವಿಶೇಷ ಅಂದರೆ ಚಿತ್ರದ ಟ್ರೇಲರ್ ಗೆ ನಟ ದರ್ಶನ್ ಧ್ವನಿ ನೀಡಿದ್ದಾರೆ. ನಾಯಕಿಯರಾದ ರಚಿತಾ ರಾಮ್, ಹರಿಪ್ರಿಯಾ, ಮತ್ತು ವೈಶಾಲಿ ದೀಪಕ್ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. 'ಭರ್ಜರಿ' ಟ್ರೇಲರ್ ರಿಲೀಸ್ ಆದ ಒಂದು ಗಂಟೆಯ ಒಳಗೆ ಯೂಟ್ಯೂಬ್ ನಲ್ಲಿ 45 ಸಾವಿರಕ್ಕೂ ಹೆಚ್ಚು ಹಿಟ್ಸ್ ಪಡೆದಿದೆ. ಹಾಡು, ಟ್ರೇಲರ್ ಮೂಲಕ ದೊಡ್ಡ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ಇದೇ ತಿಂಗಳ 15ಕ್ಕೆ ಬಿಡುಗಡೆಯಾಗಲಿದೆ.

English summary
Dhruva Sarja starrer Kannada Movie 'Bharjari' trailer is out. The movie is directed by Chethan Kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada