For Quick Alerts
  ALLOW NOTIFICATIONS  
  For Daily Alerts

  'ಸೂರರೈ ಪೋಟ್ರು' ಚಿತ್ರ ನೋಡಿ ಮೆಚ್ಚಿಕೊಂಡ ಭಾಸ್ಕರ್ ರಾವ್

  |

  ಕನ್ನಡಿಗ ಕ್ಯಾಪ್ಟನ್ ಜಿಆರ್ ಗೋಪಿನಾಥ್ ಅವರ ಜೀವನ ಕಥೆಯನ್ನು ಆಧರಿಸಿ ಮಾಡಿರುವ ಚಿತ್ರ 'ಸೂರರೈ ಪೋಟ್ರು'. ಆನ್‌ಲೈನ್‌ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮೂಲತಃ ತಮಿಳಿನಲ್ಲಿ ತಯಾರಾಗಿರುವ ಈ ಸಿನಿಮಾದ ಕನ್ನಡ ವರ್ಷನ್ ಸಹ ಬಿಡುಗಡೆಯಾಗಿದೆ.

  ಕನ್ನಡ ಪ್ರೇಕ್ಷಕರು ಈ ಚಿತ್ರದಲ್ಲಿ ಕನ್ನಡದಲ್ಲಿ ನೋಡಿ ಮೆಚ್ಚಿಕೊಂಡಿದ್ದಾರೆ. ತಮಿಳು ನಟ ಸೂರ್ಯ ಅವರು ಅತ್ಯುತ್ತಮವಾಗಿ ನಟನೆ ಮಾಡಿದ್ದು, ಇಂದಿನ ಯುವಕರಿಗೆ ಇದು ಸ್ಫೂರ್ತಿದಾಯಕವಾಗಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಇದೀಗ, ಈ ಚಿತ್ರವನ್ನು ಆಂತರಿಕ ಭದ್ರತೆ ಇಲಾಖೆಯ ಎಡಿಜಿಪಿ ಭಾಸ್ಕರ್ ರಾವ್ ವೀಕ್ಷಿಸಿದ್ದು, ಖುಷಿ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

  ಕನ್ನಡದಲ್ಲಿ ಸಿನಿಮಾ ನೋಡಿದ ಭಾಸ್ಕರ್ ರಾವ್

  ಕನ್ನಡದಲ್ಲಿ ಸಿನಿಮಾ ನೋಡಿದ ಭಾಸ್ಕರ್ ರಾವ್

  ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸೂರರೈ ಪೋಟ್ರು ಚಿತ್ರವನ್ನು ಕನ್ನಡದಲ್ಲಿ ನೋಡಿ ಟ್ವಿಟ್ಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಚರಿತ್ರೆ 'ಸಿಂಪ್ಲಿ ಫ್ಲೈ' ಆಧರಿಸಿ ತಯಾರಾಗಿರುವ ಸೂರರೈ ಪೋಟ್ರು ಚಿತ್ರವನ್ನು ಕನ್ನಡದಲ್ಲಿ ನೋಡಿದೆ'' ಎಂದು ಟ್ವೀಟ್ ಮಾಡಿದ್ದಾರೆ.

  'ಸೂರರೈ ಪೊಟ್ರು' ಸಿನಿಮಾದಲ್ಲಿ ಕನ್ನಡಿಗರ ಹೆಮ್ಮೆಯ ಕುವೆಂಪು'ಸೂರರೈ ಪೊಟ್ರು' ಸಿನಿಮಾದಲ್ಲಿ ಕನ್ನಡಿಗರ ಹೆಮ್ಮೆಯ ಕುವೆಂಪು

  ಯುವಕರು ನೋಡಬೇಕಾದ ಚಿತ್ರ

  ಯುವಕರು ನೋಡಬೇಕಾದ ಚಿತ್ರ

  ''ಅಸಾಧ್ಯವಾದ ಕನಸುಗಳನ್ನು ಹೇಗೆ ಸಾಕಾರಗೊಳಿಸಬಹುದು ಎಂಬುದನ್ನು ಈ ಚಿತ್ರದಲ್ಲಿ ಯುವಕರು ನೋಡಬೇಕೆಂದು ನಾನು ಸಲಹೆ ನೀಡುತ್ತೇನೆ'' - ಭಾಸ್ಕರ್ ರಾವ್

  ಸೂರ್ಯ ಅದ್ಭುತ

  ಸೂರ್ಯ ಅದ್ಭುತ

  ''ಯುವ ಗೋಪಿನಾಥ್ ಪಾತ್ರದಲ್ಲಿ ನಟ ಸೂರ್ಯ ಅವರ ನಟನೆ ಮತ್ತು ಪರ್ಫಾಮೆನ್ಸ್ ಬಹಳ ಚೆನ್ನಾಗಿದೆ. ನಿರ್ದೇಶಕಿ ಸುಧಾ ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಹಿಂದಿ ಆವೃತ್ತಿಯು ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಇಡೀ ರಾಷ್ಟ್ರ ಈ ಚಿತ್ರ ನೋಡಬೇಕು. ದೇಶದ ಯುವಕರಿಗೆ ಪಾತ್ರ ಮಾದರಿ ಬೇಕು'' ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

  'ಸೂರರೈ ಪೊಟ್ರು' ಸಿನಿಮಾದ ಬಗ್ಗೆ ರಿಯಲ್ ಹೀರೋ ಕ್ಯಾಪ್ಟನ್ ಗೋಪಿನಾಥ್ ಹೇಳಿದ್ದೇನು?'ಸೂರರೈ ಪೊಟ್ರು' ಸಿನಿಮಾದ ಬಗ್ಗೆ ರಿಯಲ್ ಹೀರೋ ಕ್ಯಾಪ್ಟನ್ ಗೋಪಿನಾಥ್ ಹೇಳಿದ್ದೇನು?

  ಪಾರ್ಟ್ನರ್ ಗಳನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ KL Rahul | Filmibeat Kannada
  ಸ್ವತಃ ಗೋಪಿನಾಥ್ ಸಹ ಖುಷಿ

  ಸ್ವತಃ ಗೋಪಿನಾಥ್ ಸಹ ಖುಷಿ

  ರಿಯಲ್ ಹೀರೋ ಗೋಪಿನಾಥ್ ಸೂರರೈ ಪೊಟ್ರು ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. 'ಸೂರರೈ ಪೊಟ್ರು ನನ್ನ ಪುಸ್ತಕದ ಕಥೆಯ ನಿಜವಾದ ಸಾರವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಿಜವಾದ ರೋಲರ್ ಕೋಸ್ಟರ್. ಕಳೆದ ರಾತ್ರಿ ಈ ಸಿನಿಮಾವನ್ನು ವೀಕ್ಷಿಸಿದ್ದೇನೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  English summary
  ADG of Police, Internal Security Improving Bengaluru Bhaskar rao watched suriya starrer soorarai pottru in kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X