For Quick Alerts
  ALLOW NOTIFICATIONS  
  For Daily Alerts

  'ಈ' ಮುದ್ದು ಹುಡುಗಿ ಶಿವಣ್ಣನ ಮಗಳು, ಯಾರೀ ಪುಟಾಣಿ.?

  By Suneetha
  |

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತೆ 1998ರ ಕಾಲಕ್ಕೆ ತೆರಳಲಿದ್ದಾರೆ. ಹೌದು 2016 ರಲ್ಲಿ ಶಿವಣ್ಣ ಅವರು ಪ್ರೇಕ್ಷಕರಿಗೆ ತಮ್ಮ 'ಅಂಡಮಾನ್' ಸಿನಿಮಾವನ್ನು ನೆನಪು ಮಾಡಿಸಲಿದ್ದಾರೆ.

  ಅಂದಹಾಗೆ ಯಾಕೆ ಈ ಥರ ಪೀಠಿಕೆ ಹಾಕುತ್ತಿದ್ದೇವೆ ಅಂತ ತಲೆ ಕೆರ್ಕೋತಾ ಇದ್ದೀರಾ?. ಯಾಕಂದ್ರೆ 'ಅಂಡಮಾನ್' ಚಿತ್ರದಲ್ಲಿ ಶಿವಣ್ಣ ಅವರು ಅಪ್ಪನ ಪಾತ್ರ ವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.[ಶಿವಣ್ಣ 'ಲೀಡರ್' ಆದರು.! ಅವರಿಗೆ 'ನಾಯಕಿ' ಯಾರು.?]

  ತಮ್ಮ ಎರಡನೇ ಮಗಳು ನಿವೇದಿತಾ ಮತ್ತು ಶಿವಣ್ಣ ಅವರ ಜೋಡಿ 1998 ರಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಇದೀಗ ಮತ್ತೆ ಶಿವಣ್ಣ ಅವರು 'ಲೀಡರ್' ಚಿತ್ರದ ಮೂಲಕ ಅದೇ ಟ್ರ್ಯಾಕ್ ಗೆ ಮರಳಿದ್ದಾರೆ. ಈ ಬಾರಿ ಮಾತ್ರ ಮುದ್ದಾದ ಪುಟ್ಟ ಹುಡುಗಿ ಪರಿಣಿತಾ ಶಿವಣ್ಣ ಅವರ ಮಗಳಾಗಿ ಮಿಂಚಿದ್ದಾಳೆ.

  ಅಷ್ಟಕ್ಕೂ ಈ ಪರಿಣಿತಾ ಯಾರು ಗೊತ್ತಾ?. ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ಮೊಮ್ಮಗಳು. ನಟ ಶ್ರೀನಗರ ಕಿಟ್ಟಿ ಮತ್ತು ಬಿಗ್ ಬಾಸ್ ಖ್ಯಾತಿಯ ಭಾವನಾ ಬೆಳಗೆರೆ ಅವರ ಆರೂವರೆ ವರ್ಷದ ಮುದ್ದಿನ ಮಗಳು.[ಬಂದ್ರು ಬಂದ್ರು ಬಿಗ್ ಬಾಸ್ ಭಾವನಾ ಬೆಳಗೆರೆ ಟಿವಿಗೆ ಬಂದ್ರು]

  ಇದೇ ಮೊದಲ ಬಾರಿಗೆ ಶಿವಣ್ಣ ಅವರ ಮಗಳ ಪಾತ್ರದಲ್ಲಿ ಪರಿಣಿತಾ ಮಿಂಚುವ ಮೂಲಕ ಬಾಲ ನಟಿಯಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾಳೆ. ಈಗಾಗಲೇ ಶಿವಣ್ಣ ಮತ್ತು ಪರಿಣಿತಾ ಒಟ್ಟಿಗೆ ಇರುವ ಪೋಸ್ಟರ್ ಗಳು ಬಿಡುಗಡೆ ಆಗಿದ್ದು, ಅಪ್ಪ-ಮಗಳ ಕ್ಯೂಟ್ ಕಾಂಬಿನೇಷನ್ ಭಾರಿ ಮೆಚ್ಚುಗೆ ಗಳಿಸುತ್ತಿದೆ.

  'ರೋಸ್' ಚಿತ್ರದ ಖ್ಯಾತಿಯ ನಿರ್ದೇಶಕ ಸಹನಾ ಮೂರ್ತಿ ಅವರು ಆಕ್ಷನ್-ಕಟ್ ಹೇಳುತ್ತಿರುವ 'ಲೀಡರ್' ಚಿತ್ರದಲ್ಲಿ ಶಿವಣ್ಣ ಅವರಿಗೆ ನಾಯಕಿಯಾಗಿ ಗ್ಲಾಮರ್ ಬೆಡಗಿ ಪ್ರಣೀತಾ ಅವರು ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ನಟ ವಿಜಯ ರಾಘವೇಂದ್ರ ಮತ್ತು ಗುರು ಜಗ್ಗೇಶ್ ಅವರು ಶಿವಣ್ಣ ಅವರಿಗೆ ಸಾಥ್ ನೀಡಲಿದ್ದಾರೆ.

  ನಿರ್ಮಾಪಕ ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ಅವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಆಗಸ್ಟ್ ತಿಂಗಳಿನಲ್ಲಿ ಚಿತ್ರದ ಶೂಟಿಂಗ್ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

  ಒಟ್ನಲ್ಲಿ ಶಿವಣ್ಣ ಅವರು ಮಾಸ್ 'ಲೀಡರ್' ಆಗಿ ಅಭಿಮಾನಿಗಳಿಗೆ ಪಂಚ್ ಕೊಡಲು ತಯಾರಾಗಿದ್ದು, ಅಭಿಮಾನಿಗಳು ಮತ್ತೆ 'ಅಂಡಮಾನ್' ನೆನಪಿಗೆ ಜಾರೋದು ಖಂಡಿತ ಅನ್ಸುತ್ತೆ.

  English summary
  Six-and-a-half year old Parinitha, daughter of Actor Kitty and Bhavana Belagere. She has bagged a role in the Actor Shiva Rajkumar and Actress Pranitha starrer Kannada Movie 'Leader'. Directed by Sahana Murthy and produced by Tarun Shivappa, she plays the daughter of Shivanna in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X