»   »  ತಮಿಳು ಚಿತ್ರರಂಗೆಕ್ಕೆ ಭಾವನಾ ರಾವ್ ವಲಸೆ!

ತಮಿಳು ಚಿತ್ರರಂಗೆಕ್ಕೆ ಭಾವನಾ ರಾವ್ ವಲಸೆ!

Subscribe to Filmibeat Kannada
Bhavana Rao moves to Tamil
ಯೋಗರಾಜ ಭಟ್ ನಿರ್ದೇಶನದ'ಗಾಳಿಪಟ' ಚಿತ್ರದಲ್ಲಿ ಉತ್ತಮ ಅಭಿನಯ ನೀಡಿದ್ದ ಭಾವನಾರಾವ್ ಗೆ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಆಕೆ ದಕ್ಷಿಣದ ಇತರೆ ಭಾಷೆಗಳ ಕಡೆಗೆ ಗಮನ ಹರಿಸುವುದು ಅನಿವಾರ್ಯವಾಯಿತು.

ಕನ್ನಡ ಚಿತ್ರರಂಗದಲ್ಲಿ ಭಾವನಾ ರಾವ್ ಅವರಿಗೆ ಅವಕಾಶಗಳು ಅಷ್ಟಾಗಿ ಹುಡುಕಿಕೊಂಡು ಬರಲಿಲ್ಲ. ಉತ್ತಮ ಅವಕಾಶಕ್ಕಾಗಿ ಚಾತಕ ಪಕ್ಷಿಯಂತೆ ಕಾದಿದ್ದೇ ಬಂತು. ವಿಧಿಯಿಲ್ಲದೆ ಕಡೆಗೆ ಆಕೆ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 'ಕೊಲ ಕೊಲಯ ಮುಂತಿರಿಕ್ಕ' ಚಿತ್ರದಲ್ಲಿ ಕಾರ್ತಿಕ್ ಗೆ ಜತೆಯಾಗಿ ನಟಿಸುತ್ತಿದ್ದಾರೆ. 'ಯಾರದಿ ನೀ ಮೋಹಿನಿ' ಎಂಬ ಚಿತ್ರದಲ್ಲಿ ಕಾರ್ತಿಕ್ ಎರಡನೇ ನಾಯಕ ನಟನಾಗಿ ಅಭಿನಯಿಸಿದ್ದ.

ತಮಿಳು ಚಿತ್ರದಲ್ಲಿ ನಟಿಸುತ್ತಿದ್ದರೂ ಭಾವನಾ ಅವರಿಗೆ ಕನ್ನಡದ ಬಗೆಗಿನ ಮೋಹ ಕಡಿಮೆಯಾಗಿಲ್ಲ. ನನ್ನ ಮೊದಲ ಆಯ್ಕೆ ಕನ್ನಡ ಚಿತ್ರರಂಗ ಎನ್ನುತ್ತಾರೆ.''ಕನ್ನಡದಲ್ಲಿ ಬಹಳಷ್ಟು ಅವಕಾಶಗಳು ಬಂದವು. ಆದರೆ ಯಾವೊಂದು ಚಿತ್ರವೂ ಅಷ್ಟಾಗಿ ನನಗೆ ಒಪ್ಪಿಗೆಯಾಗಲಿಲ್ಲ. ಹಾಗೆ ಬಂದ ಅವಕಾಶಗಳಲ್ಲಿ ಆಯ್ಕೆ ಮಾಡಿಕೊಂಡ ಚಿತ್ರಗಳೇ 'ಗಗನ ಚುಕ್ಕಿ' ಮತ್ತು 'ಹಾಲಿಡೇಸ್'. ಬಂದ ಎಲ್ಲ ಚಿತ್ರಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ನನಗೆ ಒಪ್ಪಿಗೆಯಾಗುವ ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತೇನೆ'' ಎನ್ನ್ನುತ್ತಾರೆ ಭಾವನಾ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಭಾವನಾ ರಾವ್ ನಿರುದ್ಯೋಗ ಪರ್ವ ಅಂತ್ಯ!
ನಧೀಂ ಧೀಂ ತನ ಹುಡುಗಿ ಭಾವನಾ ರಾವ್ ಎಲ್ಲಿ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada