»   » ಡ್ರಗ್ ಡೀಲರ್ ಆದ 'ಟಗರು' ಪುಟ್ಟಿ ಭಾವನಾ.!

ಡ್ರಗ್ ಡೀಲರ್ ಆದ 'ಟಗರು' ಪುಟ್ಟಿ ಭಾವನಾ.!

Posted By:
Subscribe to Filmibeat Kannada
ಡ್ರಗ್ ಡೀಲರ್ ಆದ ಭಾವನಾ.! | FIlmibeat Kannada

ಶೀರ್ಷಿಕೆ ಓದಿದ ಕೂಡಲೆ ಇದೇನಪ್ಪಾ ನಟಿ ಭಾವನಾ ಡ್ರಗ್ ಡೀಲರ್ ಆದ್ರಾ ಅಂತ ಗಾಬರಿ ಪಡಬೇಡಿ. ನಾವು ಹೇಳ್ತಿರೋದು ರೀಲ್ ಸುದ್ದಿ ಮಾತ್ರ.

ಇತ್ತೀಚೆಗೆಷ್ಟೇ 'ಟಗರು' ಸಿನಿಮಾದಲ್ಲಿ ಮಿಂಚಿದ್ದ ನಟಿ ಭಾವನಾ ಇದೀಗ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. 'ಇನ್ಸ್ ಪೆಕ್ಟರ್ ವಿಕ್ರಮ್' ಎಂಬ ಸಿನಿಮಾದಲ್ಲಿ ನಟಿಸಲು ನಟಿ ಭಾವನಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಭಾವನಾ ಪಾತ್ರ 'ಡ್ರಗ್ ಡೀಲರ್'!

''ನನ್ನ ಸಿನಿ ಜರ್ನಿಯಲ್ಲೇ ಇದೊಂದು ವಿಭಿನ್ನ ಪಾತ್ರ. ಇಂತಹ ಪಾತ್ರವನ್ನ ನಾನು ಎಂದಿಗೂ ನಿರ್ವಹಿಸಿಲ್ಲ. ತುಂಬಾ ಇಂಟ್ರೆಸ್ಟಿಂಗ್ ರೋಲ್ ಇದು'' ಅಂತಾರೆ ನಟಿ ಭಾವನಾ.

Bhavana to play a drug dealer in Inspector Vikram

ಅಂದ್ಹಾಗೆ, 'ಇನ್ಸ್ ಪೆಕ್ಟರ್ ವಿಕ್ರಮ್' ಚಿತ್ರದಲ್ಲಿ ನಟಿ ಭಾವನಾ ಜೊತೆಗೆ 'ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ವಿಖ್ಯಾತ್ ಪ್ರೊಡಕ್ಷನ್ ಸಂಸ್ಥೆಯಲ್ಲಿ 'ಇನ್ಸ್ ಪೆಕ್ಟರ್ ವಿಕ್ರಮ್' ಚಿತ್ರ ನಿರ್ಮಾಣ ಆಗಲಿದ್ದು, ನರಸಿಂಹ ನಿರ್ದೇಶನ ಮಾಡಲಿದ್ದಾರೆ.

ಬೆಂಗಳೂರಿನ ಸೊಸೆ ಭಾವನ ಬಾಯಿಂದ ಬಂದ ಮಾತುಗಳಿವು

ಈಗಾಗಲೇ 'ಇನ್ಸ್ ಪೆಕ್ಟರ್ ವಿಕ್ರಮ್' ಚಿತ್ರದ ಚಿತ್ರೀಕರಣ ಶುರು ಆಗಿದ್ದು, ಮುಂದಿನ ವಾರದಿಂದ ಚಿತ್ರೀಕರಣದಲ್ಲಿ ಭಾವನಾ ತೊಡಗಲಿದ್ದಾರೆ.

2010 ರಲ್ಲಿ ಬಿಡುಗಡೆ ಆದ 'ಜಾಕಿ' ಮೂಲಕ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ 'ಭಾವನಾ', 'ವಿಷ್ಣುವರ್ಧನ', 'ರೋಮಿಯೋ', 'ಟೋಪಿವಾಲಾ', 'ಬಚ್ಚನ್', 'ಮೈತ್ರಿ', 'ಮುಕುಂದ ಮುರಾರಿ' ಹಾಗೂ 'ಟಗರು' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

English summary
Actress Bhavana to play a drug dealer in Kannada Movie 'Inspector Vikram'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada