For Quick Alerts
  ALLOW NOTIFICATIONS  
  For Daily Alerts

  ಕುಮಾರಣ್ಣನ 'ಭೂಮಿಪುತ್ರ' ಚಿತ್ರಕ್ಕೆ ಅಡ್ಡಗಾಲು ಹಾಕಿದವರು ಯಾರು?

  By Naveen
  |

  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೀವನ ಚರಿತ್ರೆಯ ಸಿನಿಮಾ ಕೆಲ ತಿಂಗಳ ಹಿಂದೆಯಷ್ಟೇ ಸೆಟ್ಟೇರಿತ್ತು. 'ಭೂಮಿಪುತ್ರ' ಟೈಟಲ್ ನಲ್ಲಿ ಅದ್ದೂರಿಯಾಗಿ ಮುಹೂರ್ತ ಕೂಡ ಮಾಡಿಕೊಂಡಿತ್ತು. ಆದರೆ ಇದುವರೆಗೆ ಚಿತ್ರೀಕರಣ ಶುರುವಾಗಿಯೇ ಇಲ್ಲ.

  ಬೆಳ್ಳಿತೆರೆಯಲ್ಲಿ ಮೂಡಲಿದೆ ಜೆಡಿಎಸ್ 'ದಳಪತಿ'ಯ T20 ಆಡಳಿತ

  ಗಾಂಧಿನಗರದಲ್ಲಿ 'ಭೂಮಿಪುತ್ರ' ಚಿತ್ರದ ಬಗ್ಗೆ ಸಾಕಷ್ಟು ಗಾಸಿಪ್ ಗಳು ಹರಿದಾಡುತ್ತಿದೆ. ಕೆಲವರಂತು ಸಿನಿಮಾದ ಚಿತ್ರೀಕರಣ ಶುರುವಾಗುವುದು ಅನುಮಾನ ಅಂತ ಹೇಳುತ್ತಿದ್ದಾರೆ. ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತವನ್ನು 'ಭೂಮಿಪುತ್ರ' ಚಿತ್ರದಲ್ಲಿ ತೋರಿಸುವುದಕ್ಕೆ ನಿರ್ದೇಶಕ ಎಸ್.ನಾರಾಯಣ್ ಮುಂದಾಗಿದ್ದರು. ಆದ್ರೆ, ಚಿತ್ರದ ನಿರ್ಮಾಪಕರಿಂದಲೇ ವಿಘ್ನಗಳು ಎದುರಾಗಿದೆ. ಮುಂದೆ ಓದಿ...

  ನಿರ್ಮಾಪಕರ ಸಮಸ್ಯೆ

  ನಿರ್ಮಾಪಕರ ಸಮಸ್ಯೆ

  'ಭೂಮಿಪುತ್ರ' ಚಿತ್ರದ ನಿರ್ಮಾಪಕರು ಚಿತ್ರೀಕರಣವನ್ನು ಶುರು ಮಾಡುವುದಕ್ಕೆ ಹಿಂದೆಟು ಹಾಕುತ್ತಿದ್ದಾರಂತೆ. ಸಿನಿಮಾ ಸೆಟ್ಟೇರಿ ತಿಂಗಳುಗಳೇ ಕಳೆದರು ಶೂಟಿಂಗ್ ಬಗ್ಗೆ ನಿರ್ಮಾಪಕರು ಮಾತೆ ಆಡುತ್ತಿಲ್ಲವಂತೆ.

  ಹಣದ ಸಮಸ್ಯೆ

  ಹಣದ ಸಮಸ್ಯೆ

  ನಿರ್ಮಾಪಕರು ಯಾಕೆ ಇನ್ನು ಸಿನಿಮಾವನ್ನು ಶುರು ಮಾಡಿಲ್ಲ? ಎಂಬ ಬಗ್ಗೆ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಹಣದ ಸಮಸ್ಯೆಯಿಂದ ನಿರ್ಮಾಪಕರು ಈ ರೀತಿ ಮಾಡುತ್ತಿದ್ದಾರೆ ಅಂತ ಹೇಳಲಾಗುತ್ತಿದೆ.

  ನಿರ್ದೇಶಕರು ಏನಾಂತಾರೆ..?

  ನಿರ್ದೇಶಕರು ಏನಾಂತಾರೆ..?

  ''ಚಿತ್ರದ ಕಥೆ, ನಾಯಕ ಅರ್ಜುನ್ ಸರ್ಜಾ, ತಂತ್ರಜ್ಞರು ಸೇರಿದಂತೆ ಎಲ್ಲ ರೆಡಿ ಇದೆ. ಆದರೆ ನಿರ್ಮಾಪಕರಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಅವರು ಚಿತ್ರೀಕರಣ ಶುರು ಮಾಡಿವ ಬಗ್ಗೆ ಏನು ಮಾತನಾಡಿಲ್ಲ'' ಅಂತ ನಿರ್ದೇಶಕ ಎಸ್.ನಾರಾಯಣ್ ಹೇಳಿದ್ದಾರೆ.

  ಮುಂದೆ ಕಥೆ ಏನು..?

  ಮುಂದೆ ಕಥೆ ಏನು..?

  ನಿರ್ಮಾಪಕರಿಂದ 'ಭೂಮಿಪುತ್ರ' ಸಿನಿಮಾ ಸದ್ಯಕ್ಕೆ ತಟಸ್ಥವಾಗಿದೆ. ನಿರ್ಮಾಪಕರ ಸಮಸ್ಯೆ ಏನು, ಸಿನಿಮಾವನ್ನು ಯಾವಾಗ ಶುರು ಮಾಡುತ್ತಾರೆ ? ಎಂಬ ಪ್ರಶ್ನೆಗಳಿಗೆ ಸದ್ಯಕ್ಕಂತು ಉತ್ತರವಿಲ್ಲ.

  English summary
  'Bhumiputra' Kannada Movie Shooting has Not yet begun due to the producer's problem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X