For Quick Alerts
  ALLOW NOTIFICATIONS  
  For Daily Alerts

  'ಪ್ರಣಯ ರಾಜ'ನಾಗಿ ಎಂಟ್ರಿ ಕೊಟ್ಟ 'ಬಿಗ್ ಬಾಸ್' ಖ್ಯಾತಿಯ ಭುವನ್ ಪೊನ್ನಣ್ಣ

  |

  ಪ್ರಣಯರಾಜ ಎಂದಕ್ಷಣ ಮೊದಲು ನೆನಪಾಗುವುದು ಹಿರಿಯ ನಟ ಶ್ರೀನಾಥ್. 1970ರ ದಶಕಗಳಲ್ಲಿ ರೊಮ್ಯಾಂಟಿಕ್ ಸಿನಿಮಾಗಳ ಮೂಲಕವೇ ಹೆಚ್ಚು ಯಶಸ್ಸು ಗಳಿಸಿದ್ದ ಶ್ರೀನಾಥ್ ಬಳಿಕ ಪ್ರಣಯ ರಾಜ ಆಗಿಯೇ ಖ್ಯಾತಿ ಗಳಿಸಿದ್ದಾರೆ.

  ಇದೇ ಹೆಸರಿನಲ್ಲಿ ಈಗ ಹೊಸ ಸಿನಿಮಾ ಸೆಟ್ಟೇರಿದ್ದು, ಪ್ರಣಯ ರಾಜನಾಗಿ ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ಭುವನ್ ಪೊನ್ನಣ್ಣ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ವಿಶೇಷವಾಗಿ ಪ್ರಣಯ ರಾಜ ಸಿನಿಮಾದ ಫಸ್ಟ್ ಲುಕ್ ರಿವೀಲ್ ಮಾಡಲಾಗಿದೆ. ನಾಯಕಿಯರ ಮಧ್ಯೆ ಕುಳಿತಿರುವ ಭುವನ್ ಪೊನ್ನಣ್ಣ ಲುಕ್ ಗಮನ ಸೆಳೆಯುತ್ತಿದೆ.

  ಅಂದಹಾಗೆ ಪ್ರಣಯ ರಾಜ ಚಿತ್ರಕ್ಕೆ ಸುದರ್ಶನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರದ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವ ಸಿನಿಮಾತಂಡ ಮುಂದಿನ ವರ್ಷದಿಂದ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ. ಸದ್ಯ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ರಿಲೀಸ್ ಆಗಿದ್ದು, ಚಿತ್ರಪ್ರಿಯ ಗಮನ ಸಳೆಯುತ್ತಿದೆ.

  ಇನ್ನೂ ಈ ಸಿನಿಮಾದ ವಿಶೇಷ ಎಂದರೆ ಭವನ್ ಪೊನ್ನಣ್ಣ ಜೊತೆ 21 ನಾಯಕಿಯರು ಕಾಣಿಸಿಕೊಳ್ಳುತ್ತಿದ್ದಾರೆ. 21ನಾಯಕಿಯರಲ್ಲಿ ಬೇರೆ ಬೇರೆ ಭಾಷೆಯ ಕಲಾವಿದರು ಇರಲಿದ್ದಾರೆ ಎನ್ನಲಾಗುತ್ತಿದೆ. ಇವರಲ್ಲಿ 3 ಪ್ರಮುಖ ನಾಯಕಿಯರು ಎಂದು ಹೇಳಲಾಗುತ್ತಿದೆ. ಈಗಾಗಲೇ 18 ನಾಯಕಿಯರು ಫೈನಲ್ ಆಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

  ಬಾಯ್ ಫ್ರೆಂಡ್ ಜೊತೆ ರೋಮ್ಯಾಂಟಿಕ್ ಫೋಟೋ ಹಂಚಿಕೊಂಡ ಗೊಗ್ಲಿ ಬೆಡಗಿ | Filmibeat Kannada

  ನಟ ಭುವನ್ ಮೊದಲು ರಾಂಧವ ಸಿನಿಮಾ ಮೂಲಕ ಚಿತ್ರಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನಿಮಾ ನಿರೀಕ್ಷೆಯ ಮಟ್ಟಕ್ಕೆ ಯಶಸ್ಸು ಕಾಣಲಿಲ್ಲ. ಇದೀಗ ರೊಮ್ಯಾಂಟಿಕ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಪ್ರಯಣ ರಾಜ ಲೈಕ್ರಾ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ. ವಿಕಾಶ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

  English summary
  Kannada Actor Bhuvann Ponnannaa starrer Pranaya Raja Movie first look release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X