For Quick Alerts
  ALLOW NOTIFICATIONS  
  For Daily Alerts

  ತೆಲುಗು ಸೂಪರ್ ಸ್ಟಾರ್ ಚಿರಂಜೀವಿಗೆ ಷಷ್ಟ್ಯಬ್ದಿ ಸಂಭ್ರಮ

  By Suneetha
  |

  ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಅವರು ನಾಳೆ (ಆಗಸ್ಟ್ 22) 60ರ ಸಂವತ್ಸರಕ್ಕೆ ಕಾಲಿಡುತ್ತಿದ್ದು, ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಮೆಗಾಸ್ಟಾರ್ ಪುತ್ರ ರಾಮ್ ಚರಣ್ ನಿರ್ಧರಿಸಿದ್ದಾರೆ.

  ಅಂದಹಾಗೆ ಮೆಗಾಸ್ಟಾರ್ ಚಿರಂಜೀವಿ ಅವರು ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 35 ವರ್ಷಗಳು ತುಂಬಿದ್ದು, ಒಟ್ನಲ್ಲಿ ಮೆಗಾಸ್ಟಾರ್ ಫ್ಯಾಮಿಲಿಗೆ ಡಬಲ್ ಧಮಾಕಾ ಜೊತೆಗೆ ಹಬ್ಬದ ವಾತಾವರಣ.

  ಇದೀಗ ಮೆಗಾಸ್ಟಾರ್ ಹುಟ್ಟುಹಬ್ಬಕ್ಕೆ ಚಿರು ಪುತ್ರ ರಾಮ್ ಚರಣ್ ಅವರು ಸರ್ಪ್ರೈಜ್ ಆಗಿ ಹುಟ್ಟುಹಬ್ಬದ ಸಮಾರಂಭವನ್ನು ಹೈದಾರಾಬಾದ್ ನ ಪಂಚತಾರಾ ಹೋಟೆಲ್ ಒಂದರಲ್ಲಿ ಏರ್ಪಡಿಸಿದ್ದಾರೆ. [ಚಿರಂಜೀವಿ ಪುತ್ರನ ಹೊಸ ಸಾಹಸ, ಗಗನದಲ್ಲಿ ಹಾರಾಟ]

  ಈ ಸರ್ಪ್ರೈಜ್ ಬರ್ತ್ ಡೇ ಪಾರ್ಟಿಗೆ ಬಾಲಿವುಡ್ ನ ಖ್ಯಾತ ಸ್ಟಾರ್ ಗಳಿಗೂ ಆಹ್ವಾನ ಹೋಗಿದ್ದು, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಅಮೀರ್ ಖಾನ್ ಸಮಾರಂಭಕ್ಕೆ ಬರುವುದಾಗಿ ತಿಳಿಸಿದ್ದಾರೆ.

  ಮೆಗಾಸ್ಟಾರ್ ಚಿರು ಫ್ಯಾಮಿಲಿ ಬಿಗ್ ಬಿ ಫ್ಯಾಮಿಲಿಗೆ ತುಂಬಾ ಹತ್ತಿರದ ಗೆಳೆಯರಾಗಿದ್ದು, ಚಿರು ಪುತ್ರ ರಾಮ್ ಚರಣ್ ಅವರು ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ವಿಶೇಷ ಆಹ್ವಾನವಿತ್ತಿದ್ದಾರೆ. [ತೆರೆಯ ಮೇಲೆ ಚಿರಂಜೀವಿ ಮತ್ತೆ ತಿಲ್ಲಾನ ತಿಲ್ಲಾನ]

  ಇನ್ನೂ ಚಿರಂಜೀವಿ ಅವರಿಗೂ ಕನ್ನಡ ಚಿತ್ರರಂಗಕ್ಕೂ ಸ್ವಲ್ಪ ಮಟ್ಟಿನ ಸಂಬಂಧವಿದೆ ಅಂದರೂ ತಪ್ಪಾಗ್ಲಿಕ್ಕಿಲ್ಲ. ಯಾಕಂದ್ರೆ ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರ ಅವರ ಜೊತೆ 'ಸಿಪಾಯಿ' ಚಿತ್ರದಲ್ಲಿ ಗೆಳೆಯನ ಪಾತ್ರ ವಹಿಸಿ ಚಂದನವನಕ್ಕೂ ಕಾಲಿಟ್ಟಿದ್ದರು. [ಕಾಂಗ್ರೆಸ್ ಗೆದ್ದರೆ ಮಾತ್ರ ಕರ್ನಾಟಕಕ್ಕೆ ಮತ್ತೆ ಕಾಲಿಡುವೆ]

  ಈಗಾಗಲೇ ಚಿರು ಅಭಿಮಾನಿಗಳು ಹುಟ್ಟು ಹಬ್ಬವನ್ನು ಆಚರಿಸಲು ಶುರು ಹಚ್ಚಿಕೊಂಡಿದ್ದಾರೆ. ಇನ್ನೂ ಮೆಗಾಸ್ಟಾರ್ ಫ್ಯಾಮಿಲಿ ಹಾಗೂ ಹತ್ತಿರದ ಸಂಬಂಧಿಗಳು ಯಾವ ರೀತಿಯಲ್ಲಿ ಜನುಮದಿನದ ಸಮಾರಂಭವನ್ನು ಆಚರಿಸಲಿದ್ದಾರೆ ಅನ್ನೋದನ್ನ ನೋಡಬೇಕಿದೆ.

  ಹುಟ್ಟುಹಬ್ಬ ಸಮಾರಂಭದಲ್ಲಿ ಖ್ಯಾತ ತೆಲುಗು ತಾರೆಗಳಾದ ವಿಕ್ಟರಿ ವೆಂಕಟೇಶ್, ನಾಗಾರ್ಜುನ್, ಮತ್ತು ಜಗಪತಿಬಾಬು ಕೂಡ ಭಾಗವಹಿಸಲಿದ್ದಾರೆ. ಚಿರಂಜೀವಿ ತಮ್ಮ ಪವನ್ ಕಲ್ಯಾಣ್ ಅವರು 'ಸರ್ದಾರ್ ಗಬ್ಬರ್ ಸಿಂಗ್' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

  English summary
  Bollywood stars Amitabh Bachchan and Aamir Khan will most likely attend megastar Chiranjeevi's 60th birthday on August 22nd Saturday. Big B and Aamir are expected to attend a lavish party that Ram Charan will be hosting for his father in Hyderabad on Saturday in a plush hotel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X