For Quick Alerts
  ALLOW NOTIFICATIONS  
  For Daily Alerts

  ಮಂಡ್ಯ ರೈತನ ಕುಟುಂಬಕ್ಕೆ ನೆರವಾದ 'ಬಿಗ್ ಬಾಸ್ ವಿನ್ನರ್' ಪ್ರಥಮ್

  By Naveen
  |

  'ಬಿಗ್ ಬಾಸ್ ಕನ್ನಡ 4' ವಿನ್ನರ್ ಆದ ಪ್ರಥಮ್ ಬಹುಮಾನವಾಗಿ ಬಂದ ಹಣವನ್ನೆಲ್ಲ ಯೋಧರ ಮತ್ತು ರೈತರ ಕುಟುಂಬಕ್ಕೆ ನೀಡುವುದಾಗಿ ಮಾತು ಕೊಟ್ಟಿದ್ದರು. ಪ್ರಥಮ್ ಗೆ ತಂದೆ ಮಲ್ಲಣ್ಣ ಕೂಡ ಬಿಗ್ ಬಾಸ್ ವೇದಿಕೆಯಲ್ಲಿ ಸಾಥ್ ನೀಡಿದ್ದರು. ಆದ್ರೆ, ಬಿಗ್ ಬಾಸ್ ಮುಗಿದು ತಿಂಗಳುಗಳೇ ಕಳೆದರು ಪ್ರಥಮ್ ಹೇಳಿದಂತೆ ಮಾಡಿಲ್ಲ ಎಂಬ ಆರೋಪ ಕೇಳಿಬಂದಿತ್ತು.['ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!]

  ಆದ್ರೀಗ, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಗೆದ್ದ ಹಣ ಪ್ರಥಮ್ ಕೈಸೇರಿದ್ದು, ಪ್ರಥಮ್ ಮಾತು ಕೊಟ್ಟ ಹಾಗೆ, ರೈತರಿಗೆ ನೆರವಾಗಿದ್ದಾರೆ. ಸಾಲಬಾದೆಯಿಂದ ಆತ್ಯಹತ್ಯೆ ಮಾಡಿಕೊಂಡಿದ್ದ ಮಂಡ್ಯದ ರೈತ ಶಿವಣ್ಣ ಅವರ ಕುಟುಂಬವನ್ನ ಭೇಟಿ ಮಾಡಿದ ಪ್ರಥಮ್ ಸಾಂತ್ವನ ಹೇಳಿ ಬಂದಿದ್ದಾರೆ. ಮುಂದೆ ಓದಿ.....

  ಮಂಡ್ಯ ರೈತನ ಮನೆಗೆ ಪ್ರಥಮ್ ಭೇಟಿ

  ಮಂಡ್ಯ ರೈತನ ಮನೆಗೆ ಪ್ರಥಮ್ ಭೇಟಿ

  ಸಾಲಬಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಮಂಡ್ಯದ ರೈತ ಶಿವಣ್ಣ ಅವರ ಕುಟುಂಬಕ್ಕೆ ಪ್ರಥಮ್ ಆರ್ಥಿಕವಾಗಿ ನೆರವಾಗಿದ್ದಾರೆ. ಇತ್ತೀಚೆಗಷ್ಟೇ ಶಿವಣ್ಣ ಅವರ ಮನೆಗೆ ಭೇಟಿ ನೀಡಿದ್ದ ಪ್ರಥಮ್ ತಮ್ಮ ಕೈಲಾದ ಸಹಾಯ ಮಾಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.[ಹುತಾತ್ಮ ಯೋಧ ಸಂದೀಪ್ ಕುಟುಂಬಕ್ಕೆ ನೆರವಾದ 'ಬಿಗ್ ಬಾಸ್' ಪ್ರಥಮ್]

  ಶಿವಣ್ಣ ಕುಟುಂಬಕ್ಕೆ ಚೆಕ್ ನೀಡಿದ ಪ್ರಥಮ್

  ಶಿವಣ್ಣ ಕುಟುಂಬಕ್ಕೆ ಚೆಕ್ ನೀಡಿದ ಪ್ರಥಮ್

  'ಬಿಗ್ ಬಾಸ್' ವೇದಿಕೆಯಲ್ಲಿ ಕೊಟ್ಟ ಮಾತನಿಂತೆ ರೈತರೊಬ್ಬರ ಕುಟುಂಬಕ್ಕೆ ಸಹಾಯ ಮಾಡಿದ್ದು, ಚೆಕ್ ನೀಡಿದ್ದಾರೆ. ಪ್ರಥಮ್ ನೀಡಿದ ಹಣದಿಂದ ಶಿವಣ್ಣ ಅವರ ಮಕ್ಕಳ ವಿದ್ಯಾಬ್ಯಾಸಕ್ಕೆ ಬಳಸಿಕೊಳ್ಳಲು ತಿಳಿಸಿದ್ದಾರೆ. ಪ್ರಥಮ್ ಶಿವಣ್ಣ ಅವರ ಕುಟುಂಬಕ್ಕೆ ಎಷ್ಟು ಹಣ ಕೊಟ್ಟಿದ್ದಾರೆ ಎಂಬುದರ ಬಗ್ಗೆ ಸ್ವಷ್ಟ ಮಾಹಿತಿಯಿಲ್ಲ.[ಹುತಾತ್ಮ ಯೋಧ ಸಂದೀಪ್ ಕುಟುಂಬಕ್ಕೆ ನೆರವಾದ 'ಬಿಗ್ ಬಾಸ್' ಪ್ರಥಮ್]

  'ಬಿಗ್ ಬಾಸ್'ನಿಂದ 30 ಲಕ್ಷ ಬಂತು!

  'ಬಿಗ್ ಬಾಸ್'ನಿಂದ 30 ಲಕ್ಷ ಬಂತು!

  ಕಲರ್ಸ್ ಕನ್ನಡ ವಾಹಿನಿಯ 'ಬಿಗ್ ಬಾಸ್' ಕಾರ್ಯಕ್ರಮದಿಂದ 50 ಲಕ್ಷದ ಗೆದ್ದಿದ್ದ ಪ್ರಥಮ್ ಗೆ, ತೆರಿಗೆ ಎಲ್ಲ ಕಡಿತಗೊಂಡು 30 ಲಕ್ಷ ಬಂದಿದೆ ಎಂದು ಪ್ರಥಮ್ ಹೇಳಿದ್ದಾರೆ. ಈ ಹಣದಲ್ಲಿ ಎಲ್ಲರಿಗೂ ಸಹಾಯ ಮಾಡಲು ನಿರ್ಧರಿಸಿದ್ದಾರಂತೆ.['ಬಿಗ್ ಬಾಸ್' ಹಣದ ವಿಚಾರದಲ್ಲಿ ಸಿಡಿದೆದ್ದ 'ಒಳ್ಳೆ ಹುಡುಗ ಪ್ರಥಮ್']

  ಮಾನವೀಯತೆ ಮೆರೆದ ಪ್ರಥಮ್!

  ಮಾನವೀಯತೆ ಮೆರೆದ ಪ್ರಥಮ್!

  ''ನೀವೇ ಗೆಲ್ಲಿಸಿ ಕೊಟ್ಟ ನಿಮ್ಮ ದುಡ್ಡು ಇವತ್ತು ರೈತನ ಮನೆಗೆ ಕೊಟ್ಟಿದ್ದೀನಿ. ಉದ್ದೇಶ ಇಷ್ಟೇ... ನಮ್ಮಂತಹ ಕೆಲಸಕ್ಕೆ ಬಾರದವರು ಸತ್ತರೂ ಚಿಂತೆ ಇಲ್ಲ... ವಿಶ್ವಕ್ಕೆ ಅನ್ನದಾತ ಈತ. ಯಾವ ಕಾರಣಕ್ಕೂ ಸಾಯಬಾರದು'' ಎಂದು ರೈತರ ಬಗ್ಗೆ ಕಾಳಜಿ ಮೆರದಿದ್ದಾರೆ.

  English summary
  Big boss Kannada 4 winner Olle huduga Pratham Met Mandya Farmer Shivanna Family and Gave Cheque

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X