Just In
Don't Miss!
- Automobiles
ಕೈಗೆಟುಕುವ ದರದ ಕ್ವಿಡ್ ಕಾರಿನ ಟಿವಿಸಿ ಬಿಡುಗಡೆಗೊಳಿಸಿದ ರೆನಾಲ್ಟ್
- Education
IBPS PO/MT Mains Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- News
ಬೈಕ್ ಹತ್ತುವ ಮುನ್ನ ಈ ಭಯಾನಕ ಅಪಘಾತ ದೃಶ್ಯ ನೋಡಿ !
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ಗೆ ಜೆಮ್ಷೆಡ್ಪುರ ಎಫ್ಸಿ ಸವಾಲು: Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 27ರ ಚಿನ್ನ, ಬೆಳ್ಳಿ ದರ
- Lifestyle
ಲಸಿಕೆ ಸಿಕ್ಕಿದರೂ 2021ರಲ್ಲಿ ಕೊರೊನಾವೈರಸ್ ಸಂಪೂರ್ಣ ನಾಶವಾಗಲ್ಲ:WHO ಎಚ್ಚರಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿರ್ಮಾಪಕ-ಪ್ರದರ್ಶಕರ ಕಿತ್ತಾಟ: ಬಿಗ್‌ಬಜೆಟ್ ಸಿನಿಮಾಗಳು ಒಟಿಟಿಗೆ
ನಿರ್ಮಾಪಕ ಹಾಗೂ ಚಿತ್ರ ಪ್ರದರ್ಶಕರ ನಡುವಿನ ಕಿತ್ತಾಟ ಅಂತಿಮ ಹಂತಕ್ಕೆ ಬಂದಂತಿದೆ. ಚಿತ್ರ ಪ್ರದರ್ಶಕರು ಹೊಸ ಮಾದರಿ 'ಲಾಭ ಹಂಚಿಕೆ'ಗೆ ಒತ್ತಾಯ ಮಾಡಿದ ಕಾರಣ ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳನ್ನು ನೇರ ಒಟಿಟಿಗೆ ಬಿಡುಗಡೆ ಮಾಡಲು ನಿಶ್ಚಯಿಸಿದ್ದಾರೆ.
ಚಿತ್ರಮಂದಿರಗಳು 'ಮಲ್ಟಿಫ್ಲೆಕ್ಸ್ ಮಾದರಿ' ಲಾಭ ಹಂಚಿಕೆಗೆ ನಿರ್ಮಾಪಕರ ಮೇಲೆ ಒತ್ತಾಯ ಹೇರಿದ್ದು, ಇದನ್ನು ಸಿನಿಮಾ ನಿರ್ಮಾಪಕರು ಒಪ್ಪಿಲ್ಲವಾದ್ದರಿಂದ ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳನ್ನು ನೇರವಾಗಿ ಒಟಿಟಿಗೆ ಬಿಡುಗಡೆ ಮಾಡಲು ನಿಶ್ಚಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಿರ್ಮಾಪಕ, ವಿತರಕ ಕಾರ್ತಿಕ್ ಗೌಡ, 'ಚಿತ್ರಮಂದಿರ ಮಾಲೀಕರ ಹೊಸ ಒತ್ತಾಯವನ್ನು ಒಪ್ಪುವುದು ಸಾಧ್ಯವಿಲ್ಲ. ಹಾಗಾಗಿ ಮುಂದಿನ ವಾರ ದೊಡ್ಡ ಬಜೆಟ್‌ನ ದೊಡ್ಡ ಸ್ಟಾರ್ ಸಿನಿಮಾ ಒಟಿಟಿಯಲ್ಲಿ ನೇರವಾಗಿ ಬಿಡುಗಡೆ ಆಗಲಿದೆ. ಅದರ ಹಿಂದೆ ಇನ್ನೂ ಕೆಲವು ಹೊಸ ಬಿಗ್‌ಬಜೆಟ್, ಬಿಗ್ ಸ್ಟಾರ್ ಸಿನಿಮಾಗಳು ಒಟಿಟಿಗೆ ಬರಲಿವೆ' ಎಂದಿದ್ದಾರೆ.

ಯಾವ ಸಿನಿಮಾ ಮೊದಲಿಗೆ ಬರಲಿದೆ?
ಪ್ರಸ್ತುತ, ದರ್ಶನ್ ಅಭಿನಯದ ರಾಬರ್ಟ್, ಪುನೀತ್ ಅಭಿನಯದ ಯುವರತ್ನ, ಧೃವ ಸರ್ಜಾ ನಟನೆಯ ಪೊಗರು, ಶಿವಣ್ಣನ ಭಜರಂಗಿ 2, ದುನಿಯಾ ವಿಜಯ್ ರ ಸಲಗ, ಯಶ್ ಅಭಿನಯದ ಕೆಜಿಎಫ್ 2, ಸುದೀಪ್ ನಟನೆಯ ಕೋಟಿಗೊಬ್ಬ 2 ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಇವುಗಳಲ್ಲಿ ಯಾವ ಸಿನಿಮಾ ಮೊದಲಿಗೆ ಒಟಿಟಿಗೆ ಬರಲಿದೆ ಕಾದು ನೋಡಬೇಕಿದೆ.

ಹಲವು ಪ್ರಮುಖ ನಿರ್ಮಾಪಕರು ಭಾಗಿಯಾಗಿದ್ದರು
ಚಿತ್ರಮಂದಿರಗಳ ಹೊಸ ಬೇಡಿಕೆ ವಿಚಾರವಾಗಿ ಸಿನಿಮಾ ನಿರ್ಮಾಪಕರು ನಿನ್ನೆಯಷ್ಟೆ ಸಭೆ ಸೇರಿ ಚರ್ಚಿಸಿದ್ದಾರೆ. ಸಭೆಯಲ್ಲಿ ಮುಖ್ಯ ನಿರ್ಮಾಪಕರುಗಳಾದ ಕೆಜಿಎಫ್, ಯುವರತ್ನ ನಿರ್ಮಾಪಕ ವಿಜಯ್ ಕಿರಗಂದೂರ್, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಸಲಗ ನಿರ್ಮಾಪಕ ಕೆಪಿ ಶ್ರೀಕಾಂತ್, ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು, ರಾಬರ್ಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಫ್ಯಾಂಟಮ್ ನಿರ್ಮಾಪಕ ಜಾಕ್ ಮಂಜು, ನಿರ್ಮಾಪಕ ಜಯಣ್ಣ, ಪೊಗರು ನಿರ್ಮಾಪಕ ಪಾಲ್ಗೊಂಡಿದ್ದರು.

ಚಿತ್ರಮಂದಿರ ಮಾಲೀಕರಿಗೆ ಪಾಠ ಕಲಿಸಲು ನಿರ್ಮಾಪಕರ ನಿರ್ಧಾರ
ಲಾಭ ಹಂಚಿಕೆಯ ಪ್ರಸ್ತಾವನೆ ಇಟ್ಟಿರುವ ಕಾರಣದಿಂದ ಚಿತ್ರಮಂದಿರಗಳಿಗೆ ಪಾಠ ಕಲಿಸಲೆಂದೇ ಸಿನಿಮಾ ನಿರ್ಮಾಪಕರು ಒಟಿಟಿ ದಾರಿ ಹಿಡಿದಿದ್ದಾರೆ ಎಂಬುದು ಸ್ಪಷ್ಟ. ಆದರೆ ಸ್ಟಾರ್ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ನೋಡಲು ಕಾತರರಾಗಿದ್ದ ಅಭಿಮಾನಿಗಳಿಗೆ ಇದರಿಂದ ನಿರಾಸೆ ಆಗಲಿದೆ.

ಬೇರೆ ವಿಷಯಗಳ ಬಗ್ಗೆಯೂ ಚರ್ಚಿಸಲಾಗಿದೆ
ನಿರ್ಮಾಪಕರ ಸಭೆಯಲ್ಲಿ ಚಿತ್ರಪ್ರದರ್ಶಕರ ಸಮಸ್ಯೆ ಬಗ್ಗೆ ಚರ್ಚಿಸಿದ್ದು ಮಾತ್ರವಲ್ಲದೆ, ಚಿತ್ರಮಂದಿರಗಳಲ್ಲಿ 100% ಪ್ರೇಕ್ಷಕರಿಗೆ ಅವಕಾಶ ನೀಡಲು ಸರ್ಕಾರಕ್ಕೆ ಒತ್ತಾಯ. ಸ್ಟಾರ್ ನಟರ ಸಿನಿಮಾಗಳು ಪರಸ್ಪರ 'ಕ್ಲ್ಯಾಶ್' ಆಗದಂತೆ ದಿನಾಂಕ ನಿಗದಿ ಇನ್ನಿತರ ವಿಷಯಗಳ ಬಗ್ಗೆಯೂ ಚರ್ಚಿಸಲಾಗಿದೆ.