For Quick Alerts
  ALLOW NOTIFICATIONS  
  For Daily Alerts

  ತಾಯಿಯಾದ ಸಂಭ್ರಮದಲ್ಲಿ ನಟಿ ನಯನಾ ಪುಟ್ಟಸ್ವಾಮಿ

  |

  ಸ್ಯಾಂಡಲ್ ವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ನಯನಾ ಪುಟ್ಟಸ್ವಾಮಿ ತಾಯಿಯಾದ ಸಂಭ್ರಮದಲ್ಲಿದ್ದಾರೆ. ನಯನಾ ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಅಮೆರಿಕದಲ್ಲಿ ನೆಲೆಸಿರುವ ನಯನಾ ಅಲ್ಲೇ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ.

  ಸಂತಸದ ವಿಚಾರವನ್ನು ನಯನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುದ್ದು ಮಗುವಿನ ಹಸ್ತದ ಫೋಟೋ ಶೇರ್ ಮಾಡಿ, ಗಂಡು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಟೆಂಪಲ್ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ನಯನಾ ಪತಿ ಚರಣ್ ಜೊತೆ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ.

  ಮದುವೆ ಬಳಿಕ ಸಿನಿಮಾರಂಗದಿಂದ ದೂರ ಇರುವ ನಯನ ಬಳಿಕ ಪತಿ ಜೊತೆ ಅಮೆರಿಕಗೆ ತೆರಳಿದರು. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಯನಾ ಸದಾ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

  ಜನವರಿಯಲ್ಲಿ ತಾಯಿಯಾಗುತ್ತಿರುವ ಸಂತಸದ ವಿಚಾರವನ್ನು ನಯನಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಇತ್ತೀಚಿಗಷ್ಟೆ ಕೊರೊನಾ ವ್ಯಾಕ್ಸಿನ್ ಪಡೆದ ಫೋಟೋವನ್ನು ಅಪ್ ಡೇಟ್ ಮಾಡಿದ್ದರು. ಇದೀಗ ತಾಯಿಯಾದ ನಯನಾಗೆ ಅಭಿಮಾನಿಗಳು, ಸ್ನೇಹಿತರು ಹಿತೈಶಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.

  ನಟಿ ನಯನಾ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮಾತಾಗಿದ್ದರು. 'ಪ್ಯಾಟಿ ಹುಡುಗೀರ ಹಳ್ಳಿ ಲೈಫ್' ರಿಯಾಲಿಟಿ ಶೋ ಮೂಲಕ ಕನ್ನಡಿಗರಿಗೆ ಪರಿಚಿತರಾದ ನಯನಾ ಬಳಿಕ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಮಿಂಚಿದ್ದರು. ವಿನಯ್ ರಾಜ್ ಕುಮಾರ್ ನಟನೆಯ ಸಿದ್ಧಾರ್ಥ ಸಿನಿಮಾ ಸೇರಿದಂತೆ ಇನ್ನು ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಕೊನೆಗೂ ಕುಂಭಾಭಿಷೇಕ ನೋಡೋ ಸಮಯ ಬಂದೇ ಬಿಡ್ತು!! | Filmibeat Kannada

  2018ರಲ್ಲಿ ನಯನಾ, ಚರಣ ತೇಜ್ ಜೊತೆ ಹಸೆಮಣೆ ಏರಿದರು. ವಿವಾಹ ಬಳಿಕ ನಯನಾ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಬಳಿಕ ಬಿಗ್ ಬಾಸ್ ರಿಯಾಲಿಟಿ ಶೋ ಎಂಟ್ರಿ ಕೊಟ್ಟಿದ್ದರು. ಕನ್ನಡ ಬಿಗ್ ಬಾಸ್ ಸೀಸನ್ 6ರಲ್ಲಿ ನಯನಾ ಸ್ಪರ್ಧಿಯಾಗಿ ಭಾಗಿಯಾಗಿದ್ದರು.

  Read more about: nayana puttaswamy baby ಮಗು
  English summary
  Bigg Boss Fame Actress Nayana Puttaswamy Blessed with Baby Boy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X