Don't Miss!
- News
Bengaluru Airport: ಫೆ.15 ರಿಂದ ಟರ್ಮಿನಲ್2 ನಲ್ಲಿ ಏರ್ ಏಷ್ಯಾ ಸಂಸ್ಥೆಯಿಂದ ವಿಮಾನ ಕಾರ್ಯಾಚರಣೆ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Sports
ಜಿಂಬಾಬ್ವೆ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ 2ನೇ ದಿನ: Live score
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿತ್ರಗಳು: 'ಬಾಲಿ'ಯಲ್ಲಿ 'ಬಿಗ್ ಬಾಸ್' ಹುಡುಗಿಯರ ಮಸ್ತ್ ಮಜಾ.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸೆಲೆಬ್ರಿಟಿ ಸ್ಪರ್ಧಿಗಳಾಗಿ ನಟಿ ಕೃಷಿ ತಾಪಂಡ, ಶ್ರುತಿ ಪ್ರಕಾಶ್ ಹಾಗೂ ಅನುಪಮಾ ಗೌಡ ಪಾಲ್ಗೊಂಡಿದ್ದರು.
ಎರಡು ಜಡೆ ಸೇರಿದರೆ ಜಗಳ ಅಂತಾರೆ... ಆದ್ರೆ, ಆ ಗಾದೆ ಮಾತನ್ನ ಸುಳ್ಳು ಮಾಡಿದ ಗೆಳತಿಯರು ಈ ಮೂವರು.! 'ಬಿಗ್ ಬಾಸ್' ಮನೆಯಲ್ಲಿ ಲಾಕ್ ಆದ್ಮೇಲೆ ಕೃಷಿ ತಾಪಂಡ, ಶ್ರುತಿ ಪ್ರಕಾಶ್ ಹಾಗೂ ಅನುಪಮಾ ಗೌಡ ಸಿಕ್ಕಾಪಟ್ಟೆ ಕ್ಲೋಸ್ ಆದರು.
ಅದ್ರಲ್ಲೂ, ಕೃಷಿ ತಾಪಂಡ ಮತ್ತು ಅನುಪಮಾ ಗೌಡ ಅಂತೂ ಸದಾ ಕಾಲ ಅಡುಗೆ ಮನೆಯಲ್ಲೇ ಇರುತ್ತಾ ಎಲ್ಲರಿಗೂ ರುಚಿ ರುಚಿಯಾದ ಅಡುಗೆ ಉಣಬಡಿಸುತ್ತಿದ್ದರು. 'ಬಿಗ್ ಬಾಸ್' ಮನೆಯಲ್ಲಿ ಮಾತ್ರ ಅಲ್ಲ... 'ಬಿಗ್ ಬಾಸ್' ಕಾರ್ಯಕ್ರಮ ಮುಗಿದ ಮೇಲೂ ಈ ಮೂವರ ಸ್ನೇಹ ಮುಂದುವರೆದಿದೆ. ಎಷ್ಟರಮಟ್ಟಿಗೆ ಅಂದ್ರೆ, ಫಾರಿನ್ ಟ್ರಿಪ್ ಹೋಗುವವರೆಗೆ.!
ಹೌದು, ನಟಿ ಕೃಷಿ ತಾಪಂಡ, ಅನುಪಮಾ ಗೌಡ ಹಾಗೂ ಶ್ರುತಿ ಪ್ರಕಾಶ್ ಇಂಡೋನೇಷಿಯಾಗೆ ಹಾರಿದ್ದಾರೆ. ಅಲ್ಲಿನ, ಕಣ್ಮನ ಸೆಳೆಯುವ ಪ್ರದೇಶ 'ಬಾಲಿ'ಯಲ್ಲಿ ಈ ಮೂವರು ಹುಡುಗಿಯರು ಮಸ್ತ್ ಮಜಾ ಮಾಡುತ್ತಿದ್ದಾರೆ. ಮುಂದೆ ಓದಿರಿ...

'ಬಾಲಿ' ರೆಸಾರ್ಟ್ ನಲ್ಲಿ 'ಬಿಗ್ ಬಾಸ್' ಗರ್ಲ್ಸ್
'ಬಿಗ್ ಬಾಸ್' ಮುಗಿದ್ಮೇಲೆ, ಒಂದು ಟ್ರಿಪ್ ಗೆ ಹೋಗಬೇಕು ಅಂತ ಎಲ್ಲ ಸ್ಪರ್ಧಿಗಳು ಪ್ಲಾನ್ ಮಾಡುತ್ತಲೇ ಇದ್ದರು. ಆದ್ರೆ, ಒಂದಲ್ಲಾ ಒಂದು ಕಾರಣದಿಂದ ಅದು ಸಾಧ್ಯವಾಗಿರಲಿಲ್ಲ. ಈಗ ನೋಡಿದ್ರೆ, ಈ ಮೂವರು ಹುಡುಗಿಯರು ಗಂಟೆ-ಮೂಟೆ ಪ್ಯಾಕ್ ಮಾಡಿಕೊಂಡು 'ಬಾಲಿ'ಗೆ ಫ್ಲೈಟ್ ಹತ್ತು ಬಿಟ್ಟಿದ್ದಾರೆ. ಅಲ್ಲಿನ ರೆಸಾರ್ಟ್ ನಲ್ಲಿ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ.
'ಬಿಗ್
ಬಾಸ್'
ಮನೆಯಿಂದ
ಆಚೆ
ಬಂದ್ಮೇಲೆ
ಕೃಷಿ
ರಿಜೆಕ್ಟ್
ಮಾಡಿದ
ಚಿತ್ರಗಳೆಷ್ಟು?

'ಬಿಗ್ ಬಾಸ್' ಬಳಿಕ ನಾಯಕಿ ಆದ ಶ್ರುತಿ
'ಬಿಗ್ ಬಾಸ್' ಮುಗಿದ್ಮೇಲೆ ನಟಿ ಶ್ರುತಿ ಪ್ರಕಾಶ್ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದರು. 'ಲಂಡನ್ ನಲ್ಲಿ ಲಂಬೋದರ' ಚಿತ್ರದಲ್ಲಿ ನಾಯಕಿ ಆಗಿ ಶ್ರುತಿ ಪ್ರಕಾಶ್ ಅಭಿನಯಿಸಿದ್ದಾರೆ.
ಸ್ಟಾರ್
ನಿರ್ದೇಶಕನ
ಚಿತ್ರಕ್ಕೆ
'ಬಿಗ್
ಬಾಸ್'
ಶ್ರುತಿ
ಪ್ರಕಾಶ್
ನಾಯಕಿ.!

ಅನುಪಮಾ ಅದೃಷ್ಟ ಖುಲಾಯಿಸಿದೆ
'ಬಿಗ್ ಬಾಸ್' ಮನೆಯಲ್ಲಿ ಇರುವಾಗಲೇ, ಒಂದು ಸಿನಿಮಾ ಮಾಡಲು ದಯಾಳ್ ಪದ್ಮನಾಭನ್, ಜೆಕೆ ಹಾಗೂ ಅನುಪಮಾ ಗೌಡ ಕಮಿಟ್ ಆಗಿದ್ದರು. ಅದರಂತೆ 'ಆ ಕರಾಳ ರಾತ್ರಿ' ಈಗಾಗಲೇ ತೆರೆಗೆ ಬಂದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದರಿಂದ ಅನುಪಮಾ ಅದೃಷ್ಟ ಖುಲಾಯಿಸಿದೆ.
ಕಾಲಿವುಡ್
ಸ್ಟಾರ್
ನಟನ
ಸಿನಿಮಾದಲ್ಲಿ
ಅನುಪಮ
ಗೌಡ
!

ಮೊದಲ ಫಾರಿನ್ ಟ್ರಿಪ್
ಅನುಪಮಾ ಗೌಡ ರವರಿಗಿದು ಮೊದಲ ಇಂಟರ್ ನ್ಯಾಷನಲ್ ಟ್ರಿಪ್. ಹೀಗಾಗಿ, ಮೊಟ್ಟ ಮೊದಲ ಫಾರಿನ್ ಟೂರ್ ನಲ್ಲಿ ಅನುಪಮಾ ಗೌಡ ಸೂಪರ್ ಎಕ್ಸೈಟ್ ಆಗಿದ್ದಾರೆ.

ಜಾಲಿ ಮೂಡ್ನಲ್ಲಿ ಕೃಷಿ
'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ, ಕೃಷಿ ಅಭಿನಯದ 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಚಿತ್ರ ತೆರೆಗೆ ಬಂತು. ಉತ್ತಮ ಸ್ಕ್ರಿಪ್ಟ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಕೃಷಿ ತಾಪಂಡ ಈಗಂತೂ ಹಾಲಿಡೇ ಮೂಡ್ ನಲ್ಲಿದ್ದಾರೆ.