»   » ಆನಂದ್ ಗೆ ತುಂಟಾಟ, ರೆಹಮಾನ್ ಗೆ ಪ್ರಾಣಸಂಕಟ..!

ಆನಂದ್ ಗೆ ತುಂಟಾಟ, ರೆಹಮಾನ್ ಗೆ ಪ್ರಾಣಸಂಕಟ..!

Posted By:
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ ಮನೆಯ ಸದಸ್ಯರು ಇಷ್ಟು ದಿನ ಹುಚ್ಚಾರಾಗಿದ್ದು ಆಯ್ತು, ಅರಸರಾಗಿದ್ದು ಆಯ್ತು, ಆಳುಗಳಾಗಿದ್ದು ಆಯ್ತು, ಇದೀಗ ಪುಟ್ಟ ತುಂಟ ಮಕ್ಕಳಾಗಿ ತಮ್ಮ ತಮ್ಮ ಅಮ್ಮಂದಿರನ್ನು ಸಖತ್ತಾಗೆ ಗೋಳಾಡಿಸಿದ್ರು.

ಈ ನಡುವೆ ಅರಮನೆಯಲ್ಲಿ ಮಕ್ಕಳ ತುಂಟಾಟಕ್ಕೆ ಮಿತಿಯೇ ಇಲ್ಲದಂತಾಗಿದ್ದು, ಮಕ್ಕಳನ್ನು ಸಂಭಾಳಿಸಲು ತಾಯಂದಿರು ಮಾಡಿದ ಪರದಾಟ ನೋಡಿದರೆ ಮಾತ್ರ ದೇವರಿಗೆ ಪ್ರೀತಿಯಂತಿತ್ತು.

ಈ ನಡುವೆ ತುಂಟ ಮಾಸ್ಟರ್ ಆನಂದ್ ಅವರು ಸೈಲೆಂಟ್ ಪಾಪು ರೆಹಮಾನ್ ಅವರ ಡೈಪರ್ ಎಳೆದು ಹರಿದು ಹಾಕಿದ್ದು ಮಾತ್ರ ವೀಕ್ಷಕರಿಗೆ ಸಖತ್ ಎಂರ್ಟಟೈನಿಂಗ್ ಆಗಿತ್ತು.[ಬಿಗ್ ಹೌಸ್ ನಲ್ಲಿ ಪುಟ್ಟ ಮಕ್ಕಳ ಕಲರವ, ಅಮ್ಮಂದಿರು ಸುಸ್ತೋ ಸುಸ್ತು.!]

Bigg Boss Kannada 3 Day 33: Master Anand torn Rehaman diaper

ಅಂದಹಾಗೆ ಎಲ್ಲಾ ತಾಯಂದಿರು ಸ್ವಿಮ್ಮಿಂಗ್ ಫೂಲ್ ಬಳಿ ಅವರವರ ಮಕ್ಕಳೊಂದಿಗೆ ವಿಹಾರ ಮಾಡುತ್ತಿದ್ದ ಸಂದರ್ಭದಲ್ಲಿ ನೇಹಾ ಅವರು ತಮ್ಮ ಮುದ್ದು ಸೈಲೆಂಟ್ ಪಾಪು ರೆಹಮಾನ್ ಅನ್ನು ತೊಡೆ ಮೇಲೆ ಮಲಗಿಸಿಕೊಂಡಿರುವ ಸಂದರ್ಭದಲ್ಲಿ ತುಂಟ ಆನಂದ್ ರೆಹಮಾನ್ ನ ಡೈಪರ್ ಎಳೆದು ಹಾಕಿದ್ರು.

ಆನಂದ್ ಡೈಪರ್ ಎಳೆದಿದ್ದಕ್ಕೆ, ರೆಹಮಾನ್ ಜೋರಾಗಿ ಅತ್ತು ಗಲಾಟೆ ಮಾಡಿದರು. ಇದನ್ನು ನೋಡಿ ಮಾಸ್ಟರ್ ಆನಂದ್ ಜೋರಾಗಿ ಚಪ್ಪಾಳೆ ತಟ್ಟಿ ನಕ್ಕಿದ್ದು, ಮಾತ್ರವಲ್ಲದೇ ಮತ್ತೆ ಮತ್ತೆ ರೆಹಮಾನ್ ಗೆ ಕೀಟಲೆ ಮಾಡುತ್ತಿದ್ದರು. ಕೊನೆಗೆ ಡೈಪರ್ ಎಳೆದು ಎಳೆದು ಅದನ್ನು ಹರಿದು ಹಾಕಿದ ಮೇಲೆ ಆನಂದ್ ಗೆ ಸಮಾಧಾನ ಆಗಿದ್ದು.

ಒಟ್ನಲ್ಲಿ ಇಷ್ಟೆಲ್ಲಾ ಸೀನ್ ಆದ ಮೇಲೆ ಅಳುತ್ತಿದ್ದ ರೆಹಮಾನ್ ಪಾಪುವನ್ನು ಸಮಾಧಾನ ಮಾಡುವಷ್ಟರಲ್ಲಿ ಅಮ್ಮ ನೇಹಾಗೆ ಸುಸ್ತಾದರೆ, ತುಂಟ ಆನಂದ್ ನನ್ನು ಸಂಭಾಳಿಸುವಷ್ಟರಲ್ಲಿ ಭಾವನಾಗೆ ಸುಸ್ತೋ ಸುಸ್ತು.[ವೀಕ್ಷಕರು ಹೇಳಿದ್ದು.! 'ಬಿಗ್ ಬಾಸ್' ಮನೆಯಲ್ಲಿ ಮಾಸ್ಟರ್ ಮೈಂಡ್ ಇವರೇ.!]

Bigg Boss Kannada 3 Day 33: Master Anand torn Rehaman diaper

ಈ ನಡುವೆ ಹಸಿವು ಹಸಿವು ಅಂತ ಬೊಂಬಡಿ ಹೊಡಿತಿದ್ದ, ಎಲ್ಲಾ ಮಕ್ಕಳಿಗೆ ತಾಯಂದಿರು ಪ್ರೀತಿಯಿಂದ ಕೈ ತುತ್ತು ತಿನ್ನಿಸಿದರು. ಮಗು ಅಯ್ಯಪ್ಪಾಗೆ ಅಮ್ಮ ಪೂಜಾ ಗಾಂಧಿ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಪೋಯಂ ಹೇಳಿಕೊಟ್ಟರು. ಇನ್ನು ಅರಮನೆಯ ಮಕ್ಕಳು ಡ್ಯಾಡಿ ಬೇಕು ಅಂತ ಗಲಾಟೆ ಎಬ್ಬಿಸಿ ಎಲ್ಲಾ ಅಮ್ಮಂದಿರಿಗೂ ಸುಸ್ತಾಗುವಂತೆ ಮಾಡಿದರು.

ಅಂತೂ ಇಂತೂ ಯಶಸ್ವಿಯಾಗಿ ಟಾಸ್ಕ್ ಮುಗಿಸಿದ ಸ್ಪರ್ಧಿಗಳು ಬಿಗ್ ಬಾಸ್ ಕಡೆಯಿಂದ ಪ್ರಶಂಸೆ ಗಿಟ್ಟಿಸಿಕೊಂಡರು.

ಮನುಷ್ಯ ಎಷ್ಟೇ ದೊಡ್ಡವರಾದ್ರು, ಅವರಲ್ಲಿ ಒಂದು ಮಗುವಿನ ಮನಸ್ಸು ಇದ್ದೇ ಇರುತ್ತೆ. ಆದರೆ ನಿಜವಾಗ್ಲೂ ಅದೇ ತರ ಮನಸ್ಥಿತಿ ಇರುವವರು ಉಳಿತಾರೆ, ಮಗು ತರ ನಾಟಕ ಮಾಡಿದವರು ಹೊರಗಡೆ ಹೋಗ್ತಾರೆ ಇದು ಬಿಗ್ ಮನೆಯ ರಹಸ್ಯ ಆಗಿತ್ತು.

English summary
Bigg Boss Kannada 3 Day 33 higlights: 'Ayyo Paapu' Task, Master Anand torn Rehaman diaper

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada