»   » ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಥಮ್ ನಾಲ್ಕು ಗಂಟೆ ಬಳಿಕ ಆಸ್ಪತ್ರೆಗೆ ದಾಖಲು

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಥಮ್ ನಾಲ್ಕು ಗಂಟೆ ಬಳಿಕ ಆಸ್ಪತ್ರೆಗೆ ದಾಖಲು

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯಲ್ಲಿ ಘಟಾನುಘಟಿ ಸೆಲೆಬ್ರಿಟಿಗಳನ್ನೇ ಅಲುಗಾಡಿಸಿದ್ದ 'ಒಳ್ಳೆ ಹುಡುಗ' ಪ್ರಥಮ್ ಆತ್ಮಹತ್ಯೆ ಮಾಡಿಕೊಳ್ಳುವ ಮನಃಸ್ಥಿತಿಗೆ ತಲುಪುತ್ತಾರೆ ಅಂತ ಬಹುಶಃ ಯಾರೂ ಕೂಡ ಊಹಿಸಿರಲಿಲ್ಲ.

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ವಿಜೇತರಾದ್ಮೇಲೆ ಗೆದ್ದ ಹಣವನ್ನ ಹುತಾತ್ಮ ಯೋಧರ ಮಡದಿಯರಿಗೆ, ರೈತರಿಗೆ ನೀಡುವುದಾಗಿ ಪ್ರಥಮ್ ಘೋಷಿಸಿದ್ದರು. ಅದು ಘೋಷಣೆಗೆ ಮಾತ್ರ ಸೀಮಿತವೋ ಅಥವಾ ಪ್ರಥಮ್ ನಿಜವಾಗ್ಲೂ ಹಣವನ್ನ ಕೊಡುತ್ತಾರೋ... ಎಂಬ ಅನುಮಾನ ಅನೇಕರಿಗೆ ಕಾಡಿರಬಹುದು.[ನಿದ್ರೆ ಮಾತ್ರೆ ಸೇವಿಸಿದ್ಯಾಕೆ.? 'ಕೊನೆಯ' ಲೈವ್ ನಲ್ಲಿ ಪ್ರಥಮ್ ಬಾಯ್ಬಿಟ್ಟ ಸತ್ಯವೇನು.?]

ಈ ಅನುಮಾನದಿಂದ ಉಂಟಾದ ಕೆಲ ವಿವಾದಗಳೇ ಇಂದು ಪ್ರಥಮ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸುವಂತೆ ಮಾಡಿದೆ. ಇವತ್ತು ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ದಿಢೀರ್ ಅಂತ ಫೇಸ್ ಬುಕ್ ಲೈವ್ ಮಾಡಿದ ಪ್ರಥಮ್ ನಿದ್ರೆ ಮಾತ್ರೆ ಸೇವಿಸಿದರು.

ಬೆಳ್ಳಂಬೆಳಗ್ಗೆ ಅನೇಕರಿಗೆ ಗೊತ್ತಾಗಲಿಲ್ಲ.!

ಇಂದು ಬೆಳಗ್ಗೆ ನಾಲ್ಕು ಗಂಟೆಗೆ ಸುಮಾರಿಗೆ ಫೇಸ್ ಬುಕ್ ಲೈವ್ ಮಾಡಿ, ಪ್ರಥಮ್ ನಿದ್ರೆ ಮಾತ್ರೆ ಸೇವಿಸಿದರೂ ಅನೇಕರಿಗೆ ಗೊತ್ತಾಗಲಿಲ್ಲ. ಮನೆಯಲ್ಲೂ ಕೂಡ ಪ್ರಥಮ್ ಒಬ್ಬರೇ ಇದ್ದರು.[ಒಳ್ಳೆ ಹುಡುಗ ಪ್ರಥಮ್ ಆತ್ಮಹತ್ಯೆಗೆ ಯತ್ನ!]

ಸ್ನೇಹಿತರಿಗೆ ಬರುವ ಹೊತ್ತಿಗೆ 8.30 ಆಗಿತ್ತು

ಪ್ರಥಮ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಅಂತ ಅವರ ಸ್ನೇಹಿತರಿಗೆ ಗೊತ್ತಾಗಿ, ಅವರೆಲ್ಲ ಪ್ರಥಮ್ ಮನೆ ತಲುಪುವ ಹೊತ್ತಿಗೆ ಸಮಯ 8.30 ಆಗಿತ್ತು.[ಪ್ರಥಮ್ ಆತ್ಮಹತ್ಯೆ ಯತ್ನ ಬಳಿಕ ಲೋಕೇಶ್ ಬಿಚ್ಚಿಟ್ಟ ಸ್ಫೋಟಕ ಸುದ್ದಿ!]

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಥಮ್

ಸ್ನೇಹಿತರು ನಾಗರಬಾವಿಯಲ್ಲಿ ಇರುವ ಪ್ರಥಮ್ ನಿವಾಸಕ್ಕೆ ಧಾವಿಸಿದಾಗ, ಪ್ರಥಮ್ ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು. ತಕ್ಷಣ ಪ್ರಥಮ್ ರವರನ್ನ ಹತ್ತಿರದ ಆಸ್ಪತ್ರೆಗೆ ಸ್ನೇಹಿತರು ದಾಖಲಿಸಿದ್ದಾರೆ. (ಯಾವ ಆಸ್ಪತ್ರೆಯಲ್ಲಿ ಪ್ರಥಮ್ ರವರನ್ನ ದಾಖಲಿಸಲಾಗಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ)

ಅಕ್ಕ-ಪಕ್ಕದ ಮನೆಯವರಿಗೆ ವಿಷಯ ಗೊತ್ತಿಲ್ಲ

'ಬಿಗ್ ಬಾಸ್' ವಿನ್ನರ್ ಪ್ರಥಮ್ ಆತ್ಮಹತ್ಯೆಗೆ ಯತ್ನಿಸಿರುವ ಸಂಗತಿ ಅಕ್ಕ-ಪಕ್ಕದ ಮನೆಯವರಿಗೆ ಗೊತ್ತಾಗಿಲ್ಲ. ಬೆಳಗ್ಗೆ 8.30ಕ್ಕೆ ಸ್ನೇಹಿತರು ಬಂದಾಗಲೇ, ಪಕ್ಕದ ಮನೆಯವರ ಅರಿವಿಗೆ ಬಂದಿದೆ.

20 ದಿನಗಳ ಹಿಂದೆಯಷ್ಟೇ

ಕೇವಲ 20 ದಿನಗಳ ಹಿಂದೆಯಷ್ಟೇ ನಾಗರಬಾವಿಯಲ್ಲಿ ಇರುವ ಅಪಾರ್ಟ್ಮೆಂಟ್ ಗೆ ಪ್ರಥಮ್ ಶಿಫ್ಟ್ ಆಗಿದ್ದರು.

ಪ್ರಥಮ್ ಈಗ ಹೇಗಿದ್ದಾರೆ.?

ಪ್ರಥಮ್ ಸ್ನೇಹಿತರು ಹೇಳುವ ಪ್ರಕಾರ, ''ಪ್ರಥಮ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಪ್ರಥಮ್ ಸ್ಪಂದಿಸುತ್ತಿದ್ದಾರೆ. ಹುಷಾರಾಗುತ್ತಿದ್ದಾರೆ''

English summary
Bigg Boss Kannada 4 Winner Pratham admitted to Hospital after attempting to commit suicide.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada