»   » ನಿದ್ರೆ ಮಾತ್ರೆ ಸೇವಿಸಿದ್ಯಾಕೆ.? 'ಕೊನೆಯ' ಲೈವ್ ನಲ್ಲಿ ಪ್ರಥಮ್ ಬಾಯ್ಬಿಟ್ಟ ಸತ್ಯವೇನು.?

ನಿದ್ರೆ ಮಾತ್ರೆ ಸೇವಿಸಿದ್ಯಾಕೆ.? 'ಕೊನೆಯ' ಲೈವ್ ನಲ್ಲಿ ಪ್ರಥಮ್ ಬಾಯ್ಬಿಟ್ಟ ಸತ್ಯವೇನು.?

Posted By:
Subscribe to Filmibeat Kannada

ಇಂದು ಬೆಳ್ಳಂಬೆಳಗ್ಗೆಯೇ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ-4' ವಿಜೇತ ಪ್ರಥಮ್ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ದಿಢೀರ್ ಅಂತ ಫೇಸ್ ಬುಕ್ ಲೈವ್ ಮಾಡಿ.. ನಿದ್ರೆ ಮಾತ್ರೆ ಸೇವಿಸಿ.. ಆತ್ಮಹತ್ಯೆಗೆ ಯತ್ನಿಸಿದ್ದಾರೆ 'ಒಳ್ಳೆ ಹುಡುಗ' ಪ್ರಥಮ್.

ಯಾರಿಗೂ ಹೆದರದೆ.. ಅಂಜದೆ ಸದಾ ಬೋಲ್ಡ್ ಆಗಿ ಮಾತನಾಡುತ್ತಿದ್ದ ಪ್ರಥಮ್, ಇಂದು ಮನನೊಂದು, ಕಣ್ಣೀರು ಸುರಿಸುತ್ತಾ ಫೇಸ್ ಬುಕ್ ಲೈವ್ ಮಾಡಿದ್ದಾರೆ.

'ಇದು ನನ್ನ ಕೊನೆಯ ಲೈವ್' ಎಂದು ಹೇಳುತ್ತಾ... ತಮಗೆ ಆಗಿರುವ ಚಿತ್ರಹಿಂಸೆ ಬಗ್ಗೆ ವಿವರಿಸಿದ್ದಾರೆ. ಬೆಳಗ್ಗೆ ನಾಲ್ಕು ಗಂಟೆಗೆ ಫೇಸ್ ಬುಕ್ ನಲ್ಲಿ ಪ್ರಥಮ್ ಏನೆಲ್ಲ ಹೇಳಿದ್ದಾರೆ ಅಂತ ಅವರ ಮಾತುಗಳಲ್ಲೇ ಓದಿರಿ....

ಕೊನೆಯ ಲೈವ್ ಎನ್ನುತ್ತಲೇ ಮಾತು ಆರಂಭಿಸಿದ ಪ್ರಥಮ್

''ಎಲ್ಲರಿಗೂ ನಮಸ್ಕಾರ.... ಇದು ನನ್ನ ಲಾಸ್ಟ್ ಲೈವ್... ಯಾಕೋ ಈ ಬಟ್ಟೆ ಹಾಕಿಕೊಳ್ಳಬೇಕು ಎನಿಸಿತು. ಇದು ನಾನು ಬಿಗ್ ಬಾಸ್ ಗೆದ್ದಾಗ ಹಾಕ್ಕೊಂಡಿದ್ದ ಬಟ್ಟೆ. ಚೂರು ಮಾತನಾಡಬೇಕು ಎನಿಸಿತು. ಬೇಸರವಾಗಿದ್ರೆ ಕ್ಷಮಿಸಿ'' ಎಂದು ಹೇಳುತ್ತಾ ಮಾತು ಆರಂಭಿಸಿದರು 'ಬಿಗ್ ಬಾಸ್ ಕನ್ನಡ 4' ವಿನ್ನರ್ ಪ್ರಥಮ್.[ಒಳ್ಳೆ ಹುಡುಗ ಪ್ರಥಮ್ ಆತ್ಮಹತ್ಯೆಗೆ ಯತ್ನ!]

'ಬಿಗ್ ಬಾಸ್' ದುಡ್ಡು ಬಂದಿದೆ.!

''ನಾನು ಕಮ್ಮಿಟ್ ಆಗಿದ್ದೆ... 50 ಲಕ್ಷದಲ್ಲಿ ಒಂದು ರೂಪಾಯಿ ಕೂಡ ನನಗೆ ಬೇಡ... ದುಡ್ಡು ಬಂದಿದೆ...'' ಅಂತ ಬ್ಯಾಂಕ್ ಪಾಸ್ ಬುಕ್ ಮತ್ತು ಚೆಕ್ ನ ಫೇಸ್ ಬುಕ್ ಲೈವ್ ನಲ್ಲಿ ತೋರಿಸಿದರು ಪ್ರಥಮ್.[ಪ್ರಥಮ್ ಆತ್ಮಹತ್ಯೆ ಯತ್ನ ಬಳಿಕ ಲೋಕೇಶ್ ಬಿಚ್ಚಿಟ್ಟ ಸ್ಪೋಟಕ ಸುದ್ದಿ!]

ಮಾನಸಿಕವಾಗಿ ಹಿಂಸೆ ಆಗುತ್ತಿದೆ

''ನನಗೆ ಇತ್ತೀಚೆಗೆ ಮಾನಸಿಕವಾಗಿ ತುಂಬಾ ಡಿಸ್ಟರ್ಬ್ ಆಗುತ್ತಿದೆ. ತುಂಬಾ ಹರ್ಟ್ ಮಾಡುತ್ತಿದ್ದಾರೆ. ಮಾನಸಿಕ ಹಿಂಸೆಯಲ್ಲಿದ್ದೇನೆ. ನಾನು ಏನೇ ಮಾಡಿದರೂ, ಬೇರೆ ತರಹ ಪ್ರೊಜೆಕ್ಟ್ ಮಾಡೋರು ಡಿಸ್ಟರ್ಬ್ ಮಾಡುತ್ತಿದ್ದಾರೆ ನನಗೆ. ಬಹಳ ಕಷ್ಟವಾಗುತ್ತಿದೆ'' - ಪ್ರಥಮ್

ದುಡ್ಡು ನನಗೆ ಬೇಡ

''ನನಗೆ 'ಬಿಗ್ ಬಾಸ್' ಅಮೌಂಟ್ ಬಂದಿದೆ. ಅದನ್ನ ನಾನು ಮುಟ್ಟುತ್ತಿಲ್ಲ. ತುಂಬಾ ಹಿಂಸೆ ಕೊಡುತ್ತಿದ್ದಾರೆ ನನಗೆ'' ಅಂತ ಹೇಳಿ ಕಣ್ಣೀರು ಸುರಿಸಿದ್ದಾರೆ ಪ್ರಥಮ್.

ನಿದ್ರೆ ಮಾತ್ರೆ ಸೇವಿಸಿದ ಪ್ರಥಮ್

''ಇನ್ನು ಆಗಲ್ಲ ನನ್ನ ಕೈಯಲ್ಲಿ'' ಎಂದು ಹೇಳುತ್ತಾ ಫೇಸ್ ಬುಕ್ ಲೈವ್ ವೇಳೆಯಲ್ಲಿಯೇ ನಿದ್ರೆ ಮಾತ್ರೆ ಸೇವಿಸಿದ್ದಾರೆ ಪ್ರಥಮ್.

ಕ್ಷಮೆ ಕೇಳಿದ 'ಒಳ್ಳೆ ಹುಡುಗ' ಪ್ರಥಮ್

''ನನ್ನ ಕಡೆಯ ಲೈವ್ ಇದು. ಯಾರಿಗಾದರೂ ಬೇಸರವಾಗಿದ್ರೆ ಕ್ಷಮಿಸಿ. ಕೃತಜ್ಞತೆ ಹೇಳಬೇಕು ಎನಿಸಿತು ಇವತ್ತು ಕಡೆಯದಾಗಿ... ನನ್ನ ಗೆಲ್ಲಿಸಿದ ಕನ್ನಡಿಗರಿಗೆ... ಗುರುಗಳಾದ ಶ್ರೀಕಾಂತ್ ಸರ್ ಗೆ ಬಹಳ ಚಿರಋಣಿ ನಾನು. ಕಲರ್ಸ್ ನ ಪರಮೇಶ್ವರ್ ಸರ್ ಕೂಡ ಬಹಳ ಸಹಾಯ ಮಾಡಿದ್ದಾರೆ ನನಗೆ. ಯಾರಿಗಾದರೂ ನನ್ನ ನಡವಳಿಕೆಯಿಂದ ಬೇಜಾರಾಗಿದ್ರೆ, ಕ್ಷಮಿಸಿ. ಇನ್ನೂ ಯಾವತ್ತೂ ಯಾರಿಗೂ ಬೇಜಾರು ಮಾಡಲ್ಲ'' - ಪ್ರಥಮ್

ಹರ್ಟ್ ಮಾಡಿರುವುದು ಲೋಕಿ

''ಲೋಕಿ ನನಗೆ ತುಂಬಾ ಹರ್ಟ್ ಮಾಡುತ್ತಿದ್ದೀಯಾ... ತುಂಬಾ ನೋವು ಕೊಡುತ್ತಿದ್ದೀಯಾ... ತುಂಬಾ ಚಿತ್ರಹಿಂಸೆ ಕೊಡುತ್ತಿದ್ದೀಯಾ... ಇನ್ನು ನನ್ನ ಕೈಯಲ್ಲಿ ಬದುಕೋಕೆ ಆಗಲ್ಲ... ನನಗೆ ಏನೇ ಆದರೂ ನೀನೇ ಕಾರಣ'' - ಪ್ರಥಮ್

ದಯವಿಟ್ಟು ಹಿಂಸೆ ಕೊಡಬೇಡಿ

''ನಾನು ಕಮ್ಮಿಟ್ ಆಗಿರುವ ಬಿಗ್ ಬಾಸ್ ದುಡ್ಡು ಇಲ್ಲಿದೆ. ನಿಜವಾಗಲೂ ನಾನು ಅದನ್ನ ಮುಟ್ಟಿಲ್ಲ. ದಯವಿಟ್ಟು ಹಿಂಸೆ ಕೊಡಬೇಡಿ. ತುಂಬಾ ಕನಸು ಕಟ್ಟಿಕೊಂಡಿದ್ದೇನೆ. ಅದನ್ನ ತುಂಬಾ ಕೆಳಮಟ್ಟದಲ್ಲಿ ತೋರಿಸಬೇಡಿ. ಯಾರೂ ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ ನನ್ನನ್ನ. ಇನ್ಮೇಲೆ ನಾನು ಯಾರಿಗೂ ಬೇಸರ ಮಾಡಲ್ಲ. ನನ್ನಿಂದ ಯಾರಿಗಾದರೂ ಹರ್ಟ್ ಆಗಿದ್ರೆ ಕ್ಷಮಿಸಿ'' - ಪ್ರಥಮ್

ವೀಕ್ ಮಾಡಿಬಿಟ್ಟರು

''ತುಂಬಾ ಸ್ಟ್ರಾಂಗ್ ಆಗಿ ಇದ್ದೆ.. ತುಂಬಾ ವೀಕ್ ಮಾಡಿಬಿಟ್ಟರು. ಕ್ಷಮಿಸಿ... ಅಷ್ಟೇ ಹೇಳೋಕೆ ಸಾಧ್ಯ'' - ಪ್ರಥಮ್

ನನ್ನ ಪಾಡಿಗೆ ನನ್ನನ್ನ ಬಿಟ್ಟುಬಿಡಿ

''ನಾನು ಕಮ್ಮಿಟ್ ಆಗಿರುವ ಅಮೌಂಟ್ ಇಲ್ಲಿದೆ. ನನಗೆ ಯಾರೂ ಹಿಂಸಿಸಬೇಡಿ. ದುಡ್ಡು ಕೊಡು... ದುಡ್ಡು ಕೊಡು....ಅಂತ ಕೊಡುತ್ತಿರುವ ಹಿಂಸೆ ಸಾಕಾಗಿ ಹೋಗಿದೆ. ನನ್ನ ಪಾಡಿಗೆ ನನ್ನನ್ನ ಬಿಟ್ಟುಬಿಡಿ'' - ಪ್ರಥಮ್

ತುಂಬಾ ಹಿಂಸೆ ಆಗುತ್ತಿದೆ

''ಕೋಪದಲ್ಲಿ ಒಂದು ಮಾತು ಬೈದ್ರೆ, ಅದನ್ನೆಲ್ಲ ತಗೊಂಡ್ಬಂದು ಲೈವ್ ಹಾಕೋದು, ಚಾನೆಲ್ ಗೆ ಕೊಡೋದು... ತುಂಬಾ ಹಿಂಸಿಸುತ್ತಿದ್ದಾರೆ ನನಗೆ'' - ಪ್ರಥಮ್

ಅಸಭ್ಯ ಕಾಮೆಂಟ್

''ನನ್ನ ಹೊಸ ಮನೆಯಲ್ಲಿ ನಾನು ಇದ್ದ ಫಸ್ಟ್ ನೈಟ್ ಅಂತ ಹಾಕಿದರೆ, ತೀರಾ ಅಸಭ್ಯವಾಗಿ ಕಾಮೆಂಟ್ ಹಾಕುತ್ತಾರೆ ಅಂತೆಲ್ಲ ಚಾನೆಲ್ ಗೆ ತೋರಿಸಿ... ನನಗೆ ತುಂಬಾ ಡಿಸ್ಟರ್ಬ್ ಮಾಡುತ್ತಿದ್ದಾರೆ. ನನ್ನ ಮನೆಯವರೆಲ್ಲ ತುಂಬಾ ಗಾಬರಿ ಆಗಿದ್ದಾರೆ'' - ಪ್ರಥಮ್

ಟಾರ್ಚರ್ ಆಗುತ್ತಿದೆ

''ನಾನು ದುಡ್ಡು ಕೊಟ್ಟಿದ್ದೇನೆ. ಒಂದು ರೂಪಾಯಿ ಕೂಡ ತೆಗೆದುಕೊಂಡಿಲ್ಲ. ಬಿಗ್ ಬಾಸ್ ಅಮೌಂಟ್ ತೆಗೆದುಕೊಳ್ಳುವ ತನಕ ಕಾದಿದ್ದು, ನಾನೆಲ್ಲ ರೆಡಿ ಮಾಡಿ ಇಟ್ಟಿದ್ದೇನೆ. ಮತ್ತೆ ನನ್ನ ಹಿಂಸಿಸಬೇಡಿ. ಇವತ್ತು ಎಂಟ್ರಿ ಆಗಿರುವ ಪಾಸ್ ಬುಕ್ ಎಲ್ಲ ಇದೆ. ತುಂಬಾ ಟಾರ್ಚರ್ ಮಾಡುತ್ತಿದ್ದಾರೆ ಲೋಕಿ ಮತ್ತೆ ಕೆಲವು ಚಾನೆಲ್ ಬದುಕೋಕೆ ಬಿಡುತ್ತಿಲ್ಲ. ತುಂಬಾ ಹೊತ್ತು ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದೆ'' - ಪ್ರಥಮ್

ಮೀಡಿಯಾದವರಿಗೆ ಸಲಹೆ

''ಮೀಡಿಯಾದವರಿಗೆ ಒಂದು ಮಾತು ಹೇಳಲು ಇಷ್ಟಪಡುತ್ತೇನೆ. ಒಳ್ಳೆಯದನ್ನು ತೋರಿಸಿ. ಯಾವಾಗಲೂ ವ್ಯಕ್ತಿಗಳ ಬಗ್ಗೆ ನೆಗೆಟಿವ್ ಆಗಿ ತೋರಿಸಬೇಡಿ. ಅನಾಥ ಮಕ್ಕಳ ಚಾರಿಟಿಗೆ... ನಾನು ಒಂದಕ್ಕೂ ದುಡ್ಡೇ ತೆಗೆದುಕೊಳ್ಳುತ್ತಿಲ್ಲ. 60 ಸಾವಿರ ತೆಗೆದುಕೊಂಡೆ ಅಂತ ಸುಳ್ಳು ಸುಳ್ಳೆಲ್ಲ ಹೇಳಿ ನನ್ನ ಬಗ್ಗೆ ಕೆಟ್ಟದಾಗಿ ತೋರಿಸಬೇಡಿ. ಇವತ್ತು ನಾನು ಸತ್ತರೂ.., ಬೇರೆಯವರಿಗೆ ಹಾಗೆ ಮಾಡೋಕೆ ಮುಂಚೆ ಬುದ್ಧಿ ಕಲಿತುಕೊಳ್ಳಿ. ತುಂಬಾ ಕೆಟ್ಟದಾಗಿ ಒಬ್ಬ ವ್ಯಕ್ತಿ ಬಗ್ಗೆ ತೋರಿಸೋಕು ಮುಂಚೆ ಹತ್ತು ಸಲ ಯೋಚನೆ ಮಾಡಿ'' - ಪ್ರಥಮ್

ಚಾನೆಲ್ ನಿಂದ ನೆಮ್ಮದಿ ಹಾಳಾಗಿದೆ

''ಅನಾಥಾಶ್ರಮಕ್ಕೆ ಹೋಗೋಕೆ ನಾನು ಅರವತ್ತು ಸಾವಿರ ಕೇಳಿದೆ ಅಂತ ಟಿವಿಯವರು ಹಾಕಿದ್ದರು. ಸುಳ್ಳು ಸುದ್ದಿ ಹಾಕಬೇಡಿ. ಯಾವುದಕ್ಕೂ ನಾನು ದುಡ್ಡು ತೆಗೆದುಕೊಳ್ಳುತ್ತಿಲ್ಲ. ನನ್ನ ಕೈಯಿಂದ ನಾನು ಕೊಡುತ್ತಿದ್ದೇನೆ. ಯಾರೋ ಬೈದು ಕಾಮೆಂಟ್ ಹಾಕಿದರೆ, ಒಂದು ಚಾನೆಲ್ ಅದನ್ನ ಕಾರ್ಯಕ್ರಮ ಮಾಡಿ ನನ್ನ ನೆಮ್ಮದಿ ಹಾಳು ಮಾಡುತ್ತಾರೆ. ನೀವು ನನ್ನನ್ನ ನೆಮ್ಮದಿ ಆಗಿ ಇರಲು ಬಿಡುವುದಿಲ್ಲ. ಟಿವಿಯವರು ನನ್ನನ್ನ ಚಿತ್ರಹಿಂಸೆ ಮಾಡುತ್ತಿದ್ದೀರಾ. ಡೈಲಿ ಹಾಕಿದ್ದೇ ಹಾಕಿ... ನಾನು ಮಾಡದೇ ಇರುವುದೇ ಎಷ್ಟೊಂದು ಇದೆ'' - ಪ್ರಥಮ್

ಹಿಂಸೆ ಮಾಡುತ್ತಿರುವುದು ಲೋಕಿ

''ನಾನು ಎಲ್ಲರ ಹತ್ತಿರ ದುಡ್ಡು ಕೇಳುತ್ತಿದ್ದೇನೆ ಅಂತೀರಾ. ನಾನು ಯಾರ ಹತ್ತಿರವೂ ಕೇಳಿಲ್ಲ. ಕೊಟ್ಟಿದ್ದನ್ನ ತಗೊಂಡಿದ್ದೇನೆ. ತಮಾಷೆಗೆ ಫೇಸ್ ಬುಕ್ ನಲ್ಲಿ ಏನೇ ಸ್ಟೇಟಸ್ ಹಾಕಿದರೂ, ಸ್ಕ್ಯಾಂಡಲ್ ವುಡ್ ಅಂತ ಮಾಡ್ತೀರಾ. ಲೋಕಿ ಕೂಡ ತುಂಬಾ ಚಿತ್ರ ಹಿಂಸೆ ಕೊಡುತ್ತಿದ್ದಾನೆ'' - ಪ್ರಥಮ್

ಆಸೆ ಈಡೇರಲಿಲ್ಲ

''ಆಸೆ ಇತ್ತು ನರೇಂದ್ರ ಮೋದಿ, ಸನ್ನಿ ಲಿಯೋನ್ ನ ಒಮ್ಮೆ ನೋಡಬೇಕು ಅಂತ. ಹಾಳಾದವರು ನನ್ನ ನೆಮ್ಮದಿ ಆಗಿ ಇರಲು ಬಿಡುವುದಿಲ್ಲ. ನನಗೆ ಹಿಂಸೆ ಕೊಡುತ್ತಿದ್ದೀರಾ'' - ಪ್ರಥಮ್

ಸ್ಲೀಪ್ಪಿಂಗ್ ಟ್ಯಾಬ್ಲೆಟ್ ಸೇವಿಸಿದ ಪ್ರಥಮ್

''ಸಾಯೋದಕ್ಕೆ ಬೇಜಾರಿಲ್ಲ. ಜೀವನದಲ್ಲಿ ತುಂಬಾ ಕನಸು ಇಟ್ಟುಕೊಂಡಿದ್ದೆ. ಎಲ್ಲ ಸೇರಿಸಿ ಸಾಯಿಸಿಬಿಟ್ಟರು. ಕಡೆಯದಾಗಿ ವಿನ್ನರ್ ಆದಾಗ ಹಾಕೊಂಡಿದ್ದ ಬಟ್ಟೆ. ಸ್ಲೀಪ್ಪಿಂಗ್ ಟ್ಯಾಬ್ಲೆಟ್ ತಗೊಂಡಿದ್ದೇನೆ ನಾನು. ಕಲರ್ಸ್ ರವರು ನನಗೆ ತುಂಬಾ ಸಹಾಯ ಮಾಡಿದ್ದಾರೆ. ದಯವಿಟ್ಟು ಅನವಶ್ಯಕವಾಗಿ ಕಲರ್ಸ್ ಬಗ್ಗೆ, ಪರಮ್ ಸರ್ ಬಗ್ಗೆ ಕೆಳಮಟ್ಟದಲ್ಲಿ ಮಾತನಾಡಬೇಡಿ. ನನಗೆ ಒಂದು ಲೈಫ್ ಕೊಟ್ಟಿದ್ದಾರೆ'' - ಪ್ರಥಮ್

ಇವರಿಗೆಲ್ಲ ಚಿರಋಣಿ

''ಕಡೆಯದಾಗಿ ನಾನು ನೆನೆಸಿಕೊಳ್ಳುವುದು... ನನ್ನನ್ನ ಈ ಮಟ್ಟಕ್ಕೆ ತಗೊಂಡು ಬಂದ ಕಲರ್ಸ್ ಕನ್ನಡದ ಪರಮೇಶ್ವರ್ ಸರ್, ಶ್ರೀಕಾಂತ್ ಸರ್. ಮಂಜು ಸರ್. ಎಲ್ಲ ನನ್ನಗೆ ಬಹಳ ಸಹಾಯ ಮಾಡಿದ್ದೀರಾ. ನಿಮಗೆಲ್ಲ ನಾನು ಚಿರಋಣಿ'' - ಪ್ರಥಮ್

ನಿದ್ದೆಗೆ ಜಾರಿದ ಪ್ರಥಮ್

''ನಾನು ಕೊಡಬೇಕಾಗಿರುವುದನ್ನೆಲ್ಲ ರೆಡಿ ಮಾಡಿ ಇಟ್ಟಿದ್ದೇನೆ. ಬ್ಯಾಂಕ್ ಪಾಸ್ ಬುಕ್... ಚೆಕ್... ಎಲ್ಲವೂ ರೆಡಿ ಇದೆ. ನನ್ನ ಅಕೌಂಟ್ ನಲ್ಲಿ ನಾನು ಮೆಣಸಿನ ಕಾಯಿ ತಿಂದ ದುಡ್ಡು ಇದೆ. ಸತ್ತಮೇಲಾದರೂ ಬುದ್ದಿ ಕಲಿಯಿರಿ. ದಿಸ್ ಈಸ್ ಮೈ ಲಾಸ್ ಲೈವ್....'' ಅಂತ ಹೇಳುತ್ತಾ ನಿದ್ದೆಗೆ ಜಾರಿದರು ಪ್ರಥಮ್.

ಪ್ರಥಮ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತಿಳಿದುಕೊಳ್ಳಲು ಮುಂದೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ....[ಪ್ರಥಮ್ ಆತ್ಮಹತ್ಯೆ ಯತ್ನ ಬಳಿಕ ಲೋಕೇಶ್ ಬಿಚ್ಚಿಟ್ಟ ಸ್ಪೋಟಕ ಸುದ್ದಿ!]

English summary
Bigg Boss Kannada 4 Winner Pratham has taken his Facebook Account to reveal the reason for attempting to commit suicide.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada