Just In
Don't Miss!
- News
"ಸೋಂಕಿನ ವಿರುದ್ಧ ಲಸಿಕೆಗಳು ಸಂಜೀವಿನಿಯಂತೆ ಕಾರ್ಯ ನಿರ್ವಹಿಸಲಿವೆ"
- Finance
ಅಮೆಜಾನ್ ಪ್ರೈಮ್ ವೀಡಿಯೋ: 89 ರೂಪಾಯಿಗೂ ಲಭ್ಯವಿದೆ!
- Lifestyle
ನೀವು ಅಸಡ್ಡೆ ಮಾಡುವ ಆಲೂಗಡ್ಡೆಯಲ್ಲಿದೆ ಸೌಂದರ್ಯವರ್ಧಕ ಗುಣಗಳು
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಬೇಡಿಕೆ ಹೆಚ್ಚಿದಂತೆ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಕಾಯುವಿಕೆ ಅವಧಿಯಲ್ಲಿ ಮತ್ತಷ್ಟು ಹೆಚ್ಚಳ
- Sports
ಐಪಿಎಲ್ ಹರಾಜಿಗೆ ಅರ್ಜುನ್ ತೆಂಡೂಲ್ಕರ್ ಅರ್ಹ, ಎಂಐ ಆರಿಸುತ್ತಾ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಷ್ಣುದಾದಾ ಬಗ್ಗೆ ನಿಂದನೆ: 'ನಾಚಿಕೆ ಆಗ್ಬೇಕು ನಿಮ್ ಜನ್ಮಕ್ಕೆ' ಚಾಟಿ ಬೀಸಿದ ಪ್ರಥಮ್
ಕನ್ನಡದ ಲೆಜೆಂಡ್ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ತೆಲುಗು ಹಿರಿಯ ನಟ ವಿಜಯ ರಂಗರಾಜು ವಿರುದ್ಧ ಕನ್ನಡಿಗರು ಆಕ್ರೋಶಗೊಂಡಿದ್ದಾರೆ.
ಕನ್ನಡ ಕಲಾಭಿಮಾನಿಗಳ ಪಾಲಿನ ಹೃದಯವಂತನ ಗೌರವಕ್ಕೆ ಧಕ್ಕೆ ಬರುವಂತೆ ಹೇಳಿಕೆ ನೀಡಿರುವ ನಟನ ವಿರುದ್ಧ ಕ್ರಮ ಜರುಗಿಸಬೇಕೆಂದು ವಾಣಿಜ್ಯ ಮಂಡಳಿಯಲ್ಲಿ ವಿಷ್ಣು ಅಭಿಮಾನಿಗಳು ದೂರು ಸಹ ದಾಖಲಿಸಿದ್ದಾರೆ.
ವಿಷ್ಣುದಾದಾ ಬಗ್ಗೆ ಅವಹೇಳನ ಮಾಡಿದ ನಟ: ಆಕ್ರೋಶಗೊಂಡ ಅಭಿಮಾನಿಗಳು
ಸ್ಯಾಂಡಲ್‌ವುಡ್ ಯಜಮಾನನ ಕುರಿತು ಸಂದರ್ಶನವೊಂದರಲ್ಲಿ ಅಗೌರವವಾಗಿ ಮಾತನಾಡಿರುವ ನಟನನ್ನು ಬಿಗ್ ಬಾಸ್ ಸ್ಪರ್ಧಿ, ನಟ ಪ್ರಥಮ್ ಖಂಡಿಸಿದ್ದು, 'ಆ ನಟನ ಜನ್ಮಕ್ಕೆ ನಾಚಿಕೆ ಆಗ್ಬೇಕು' ಎಂದು ಗುಡುಗಿದ್ದಾರೆ.
''ಅಮರವಾಗಿರೋ ಮರೆಯದ ಮಾಣಿಕ್ಯ ವಿಷ್ಣು ಸರ್ ಬಗ್ಗೆ ಕೆಟ್ಟದಾಗಿ ಮಾತಾಡೋದು ಬದುಕಿರೋ ನಿಮ್ಮಪ್ಪ-ಅಮ್ಮ, ಹೆಂಡತಿ ಬಗ್ಗೆ ಅಸಹ್ಯವಾಗಿ ಮಾತನಾಡಿದಂತೆ. ದಾದರಿಗೆ ಹೆಣ್ಣಿನ ವೀಕ್ನೆಸ್ ಇದ್ದಿದ್ರೆ3, 4 ಮದುವೆ ಆಗಿರ್ತಿದ್ರು. ಮೇರುನಟರ ಬಗ್ಗೆ ಅಸಭ್ಯವಾಗಿ ಮಾತಾಡೋ ಮೂಲಕ ನಿಮ್ಮೊಬ್ಬರಿಗೆ ಅಲ್ಲ, ತಮಿಳುನಾಡಿಗೆ ಸೂತಕ ಮಾಡಿದ್ರಿ. ನಾಚಿಕೆ ಆಗ್ಬೇಕು ನಿಮ್ ಜನ್ಮಕ್ಕೆ'' ಎಂದು ನಟ, ನಿರ್ದೇಶಕ ಪ್ರಥಮ್ ಕಿಡಿಕಾರಿದ್ದಾರೆ.
''ಸಂಸ್ಕಾರದ ಕೊರತೆಯಿಂದ ಬಳಲುತ್ತಿರೋ ಅನಾಗರೀಕ ತಮಿಳು ನಟನಿಂದ ಇನ್ನೇನು ನಿರೀಕ್ಷೆ ಮಾಡೋಕೆ ಸಾಧ್ಯ ಹೇಳಿ?'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೆಲುಗು ನಟನಿಂದ ವಿಷ್ಣುವರ್ಧನ್ ತೇಜೋವಧೆ: ಜಗ್ಗೇಶ್ ಕೆಂಡಾಮಂಡಲ
''2009 ರಲ್ಲಿ ಮೈಸೂರು ರಸ್ತೆ ಬಳಿ ವಿಷ್ಣು ಸರ್ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳುವಾಗ ನನ್ನ ಕೆನ್ನೆ ಸವರಿದ್ರು. ಪುಣ್ಯಾತ್ಮರು ಕೆನ್ನೆ ಸವರಿದ್ರು ಅನ್ನೋ ಒಂದೇ ಕಾರಣಕ್ಕೆ ಎರಡು ದಿನ ಮುಖ ತೊಳೆದಿರಲಿಲ್ಲ ನಾನು. ಅವ್ರ ಸ್ಪರ್ಶ ನನ್ನ ಕೆನ್ನೆಯ ಮೇಲಿತ್ತು ಅಂತ. ಅಂತವರ ಬಗ್ಗೆ ಮಾತಾಡಿದ್ರೆ ನಿಜಕ್ಕೂ ನೋವಾಗುತ್ತದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುಂಚೆ ಹಿರಿಯ ನಟ ಜಗ್ಗೇಶ್ ಸಹ ಈ ಬಗ್ಗೆ ಪ್ರತಿಕ್ರಿಯಿಸಿ, ''ಇವನ್ಯಾರೊ ಕಲಾವಿದನಂತೆ, ಈ ದರಿದ್ರ ಮುಖ ಯಾವ ಚಿತ್ರದಲ್ಲು ನೋಡಿದ ನೆನಪಿಲ್ಲಾ. ಕನ್ನಡದ ಹೃದಯಗಳೇ ಇವನ ಅನಿಷ್ಟ ಸೊಲ್ಲು ಅಡುಗುವಂತೆ ಕನ್ನಡಿಗರ ದೂಷಣೆಗೆ ಹಿಂಜರಿಯುವಂತೆ ಉತ್ತರಿಸಿ' ಎಂದು ಕರೆ ನೀಡಿದ್ದಾರೆ ಜಗ್ಗೇಶ್.