For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್ ಸೀಸನ್ 6' ಸ್ಪರ್ಧಿ ಧನರಾಜ್ ಈಗ ಏನ್ ಮಾಡ್ತಿದ್ದಾರೆ?

  |

  ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 6''ನ ಸ್ಪರ್ಧಿ ಧನರಾಜ್ ಈಗ ಏನು ಮಾಡ್ತಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇರಬಹುದು.

  ಸೌಮ್ಯ ಸ್ವಭಾವದ ಧನರಾಜ್ ಒಳ್ಳೆ ಹುಡುಗನಾಗಿ ಪ್ರೇಕ್ಷಕರನ್ನು ಮಾತ್ರವಲ್ಲದೆ ಸಹ ಸ್ಪರ್ಧಿಗಳಿಗೂ ಇಷ್ಟವಾಗಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದು ವೀಕ್ಷಕರನ್ನು ರಂಜಿಸಿದ್ದ ಧನು ಈಗ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

  ವೀಕ್ಷಕರ ಕೃಪೆಯಿಂದ 'ಜೆಂಟಲ್ ಮ್ಯಾನ್' ಧನರಾಜ್ ಗೆ ಸಿಕ್ಕಿದ್ದು ಮೂರು ಲಕ್ಷ ರೂಪಾಯಿ.!

  ಅಂದ್ಹಾಗೆ, ಧನರಾಜ್ ಚಿನ್ನಾಗಿ ಮುತ್ತ ವಿಜಯ್ ರಾಘವೇಂದ್ರ ಅಭಿನಯದ 'ಮಾಲ್ಗುಡಿ ಡೇಸ್' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ಧನರಾಜ್ ಗೆಳೆಯ ಶಶಿ ಕುಮಾರ್ 'ಕೌಸಲ್ಯಾ ಕಲ್ಯಾಣ' ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡದಿದ್ರು. ಇದರ ಬೆನ್ನಲೆ ಈಗ ಧನರಾಜ್ ಕೂಡ ಸಿನಿಮಾ ಮಾಡುತ್ತಿದ್ದಾರೆ.

  ಒಳ್ಳೆಯವರನ್ನು ಹೊರಗೆ ತಳ್ಳುವ 'ಡಬ್ಬಾ' ಬಿಗ್ ಬಾಸ್ ಗೆ ಮಹಾ ಮಂಗಳಾರತಿ ಎತ್ತಿದ ವೀಕ್ಷಕರು.!

  ಚಿತ್ರದ ಪ್ರಮುಖ ಪಾತ್ರದಲ್ಲಿ ಧನರಾಜ್ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಡಬ್ಬಿಂಗ್ ಮತ್ತು ನಟನೆಯಲ್ಲಿ ಅನುಭವವಿರುವ ಧನರಾಜ್ 'ಮಾಲ್ಗುಡಿ ಡೇಸ್' ಮೂಲಕ ಮತ್ತೊಮ್ಮೆ ಚಿತ್ರಪ್ರಿಯರನ್ನು ರಂಜಿಸಲಿದ್ದಾರೆ. 'ಮಾಲ್ಗುಡಿ ಡೇಸ್' ಕಿಶೋರ್ ಮೂಡಬಿದ್ರೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ. ಹಳ್ಳಿ ಬ್ಯಾಕ್ ಡ್ರಾಪ್ ಇರುವ ಮಾಲ್ಗುಡಿ ಡೇಸ್ ಸದ್ಯ ತೀರ್ಥಹಳ್ಳಿಯ ಸುತ್ತ ಮುತ್ತ ಚಿತ್ರೀಕರಣ ಮಾಡುತ್ತಿದೆ.

  Read more about: dhanraj ಧನರಾಜ್
  English summary
  Bigg Boss season 6 contestant Dhanaraj playing important role in 'Malgudi Days'. kannada actor vijaya raghavendra is lead role in malgudi days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X