»   » ಹುತಾತ್ಮ ಯೋಧ ಸಂದೀಪ್ ಕುಟುಂಬಕ್ಕೆ ನೆರವಾದ 'ಬಿಗ್ ಬಾಸ್' ಪ್ರಥಮ್

ಹುತಾತ್ಮ ಯೋಧ ಸಂದೀಪ್ ಕುಟುಂಬಕ್ಕೆ ನೆರವಾದ 'ಬಿಗ್ ಬಾಸ್' ಪ್ರಥಮ್

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ 4' ನಲ್ಲಿ 50 ಲಕ್ಷ ಗೆದ್ದ ಪ್ರಥಮ್ ಅಂದು, ವೇದಿಕೆಯಲ್ಲೇ ಈ ದುಡ್ಡು ಯೋಧರಿಗೆ, ರೈತರಿಗೆ, ಬಡ ಜನರಿಗೆ ಮೀಸಲು ಎಂದು ಮಾತು ಕೊಟ್ಟಿದ್ದರು.

ಈಗ 'ಬಿಗ್ ಬಾಸ್' ಫಿನಾಲೆ ವೇದಿಕೆಯಲ್ಲಿ ಕೊಟ್ಟ ಮಾತನ್ನ ಒಳ್ಳೆ ಹುಡುಗ ಪ್ರಥಮ್ ಉಳಿಸಿಕೊಂಡಿದ್ದಾರೆ. ಹೌದು, ಜಮ್ಮು ಕಾಶ್ಮೀರದ ಸೋನ್ ಬರ್ಗ್'ನಲ್ಲಿ ಹಿಮಪಾತ ದುರಂತದಲ್ಲಿ ವೀರ ಮರಣ ಹೊಂದಿದ್ದ ಹಾಸನದ ಯೋಧ ಸಂದೀಪ್ ಕುಮಾರ್ ಕುಟುಂಬಕ್ಕೆ ಪ್ರಥಮ್ ನೆರವಾಗಿದ್ದಾರೆ.['ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!]

ಹುತಾತ್ಮ ಯೋಧನ ಮನೆಗೆ ಪ್ರಥಮ್ ಭೇಟಿ

ಜಮ್ಮು ಕಾಶ್ಮೀರದ ಹಿಮಕುಸಿತಕ್ಕೆ ಸಿಲುಕಿ ವೀರಮರಣವನ್ನಪ್ಪಿದ ಯೋಧ ಸಂದೀಪ್ ಕುಮಾರ್ ಶೆಟ್ಟಿ ಅವರ ಮನೆಗೆ ನಿನ್ನೆ (ಫೆಬ್ರವರಿ 9) 'ಬಿಗ್ ಬಾಸ್' ವಿನ್ನರ್ ಪ್ರಥಮ್ ಭೇಟಿ ನೀಡಿದ್ದಾರೆ.['ಬಿಗ್ ಬಾಸ್' ಫಿನಾಲೆಯಲ್ಲಿ ಕನ್ನಡಿಗರ ಮನಗೆದ್ದ ತಂದೆ-ಮಗ!]

ಯೋಧನ ಕುಟುಂಬಕ್ಕೆ 50 ಸಾವಿರ ನೆರವು

ಯೋಧ ಸಂದೀಪ್ ಅವರ ಮನೆಗೆ ಭೇಟಿ ನೀಡಿದ್ದ ಪ್ರಥಮ್, ಸಂದೀಪ್ ಪೋಷಕರಾದ ಪುಟ್ಟರಾಜು ಹಾಗೂ ಗಂಗಮ್ಮನವರಿಗೆ 50 ಸಾವಿರ ರೂಪಾಯಿ ನೀಡುವುದರ ಮೂಲಕ ಸಹಾಯವಾಗಿದ್ದಾರೆ.

ಸಂದೀಪ್ ಅವರ ಸಮಾಧಿಗೆ ನಮನ

ಸಂದೀಪ್ ಕುಮಾರ್ ಶೆಟ್ಟಿ ಅವರ ಸ್ವಗ್ರಾಮ ದೇವಿಹಳ್ಳಿಗೆ ತೆರೆಳಿದ್ದ ಪ್ರಥಮ್, ಸಂದೀಪ್ ಸಮಾಧಿಗೆ ನಮಸ್ಕರಿಸಿ ಯೋಧನಿಗೆ ಗೌರವ ಸಲ್ಲಿಸಿದರು.

ಪ್ರಥಮ್ ಮೊದಲ ಹೆಜ್ಜೆ!

ನಾನು ಚಿಕ್ಕವನಿದ್ದಾಗ ಯೋಧನಾಗಬೇಕು ಅಂತಾ ಆಸೆ ಪಟ್ಟಿದ್ದೆ ಎಂದು ಹಲವು ಬಾರಿ ಹೇಳಿದ್ದ ಪ್ರಥಮ್, ಸಂದೀಪ್ ಕುಟುಂಬಕ್ಕೆ ನೆರವಾಗುವುದರ ಮೂಲಕ ಈ ತಮ್ಮ ಮೊದಲ ಹೆಜ್ಜೆ ಇಟ್ಟಿದ್ದಾರೆ.

English summary
Bigg Boss Winner Pratham Helps to Soldier Sandeep Kumar Shetty Family. Who died in an Avalanche in jammu and Kashmir Recently. Pratham Gives 50 thousands Rupees to Sandeep's Family.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada