»   » 'ಬಿಗ್ ಬಾಸ್' ಹಣದ ವಿಚಾರದಲ್ಲಿ ಸಿಡಿದೆದ್ದ 'ಒಳ್ಳೆ ಹುಡುಗ ಪ್ರಥಮ್'

'ಬಿಗ್ ಬಾಸ್' ಹಣದ ವಿಚಾರದಲ್ಲಿ ಸಿಡಿದೆದ್ದ 'ಒಳ್ಳೆ ಹುಡುಗ ಪ್ರಥಮ್'

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4', ವಿಜೇತ ಒಳ್ಳೆ ಹುಡುಗ ಪ್ರಥಮ್ ಈಗ ಎಲ್ಲೇ ಹೋದ್ರು ಅಲ್ಲಿ ಕೇಳಿ ಬರುವುದು ಒಂದೇ ಪ್ರಶ್ನೆ. ''ಪ್ರಥಮ್ 'ಬಿಗ್ ಬಾಸ್' ರಿಯಾಲಿಟಿ ಶೋ ನಲ್ಲಿ ಗೆದ್ದ 50 ಲಕ್ಷ ಹಣವನ್ನ ರೈತರಿಗೆ, ಯೋಧರಿಗೆ ಕೊಟ್ಟಿದ್ದೀರಾ? ಎಂದು''.

ಯಾಕಂದ್ರೆ, 'ಬಿಗ್ ಬಾಸ್' ಗೆದ್ದ ಬಳಿಕ ವೇದಿಕೆ ಮೇಲೆಯೇ ಪ್ರಥಮ್ ಮತ್ತು ಪ್ರಥಮ್ ಅವರ ತಂದೆ ಮಲ್ಲಣ್ಣ ಇಬ್ಬರು ರಿಯಾಲಿಟಿ ಶೋ ನಲ್ಲಿ ಗೆದ್ದ ಹಣವನ್ನ ರೈತರಿಗೆ, ಯೋಧರ ಕುಟುಂಬಗಳಿಗೆ ನೀಡುವುದಾಗಿ ಘೋಷಿಸಿದ್ದರು. ಆಮೇಲೆ, ಹಣ ಪ್ರಥಮ್ ಕೈಗೆ ಬಂತಾ? ಬಂದ್ರು ಆ ಹಣವನ್ನ ಹೇಳಿದಾಗೆ ರೈತರಿಗೆ, ಯೋಧರಿಗೆ ಕೊಟ್ರಾ ಎಂಬುದು ಎಲ್ಲೆಡೆ ಚರ್ಚೆಯಾಗುತ್ತಿತ್ತು.

ಈ ಮಧ್ಯೆ ಪ್ರಥಮ್ ಗೆ 'ಬಿಗ್ ಬಾಸ್' ನಿಂದ ಇನ್ನು ಹಣನೇ ಬಂದಿಲ್ಲ ಎಂಬ ಸುದ್ದಿಯೂ ಕೇಳಿ ಬಂತು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೂ ಪ್ರಥಮ್ ದುಡ್ಡು ಕೊಟ್ರಾ ಎಂಬ ಪ್ರಶ್ನೆ ಅಂತೂ ಸಾಮಾನ್ಯವಾಗಿ ಬಿಟ್ಟಿತ್ತು. ಈಗ ಪ್ರಥಮ್ ಸಿಡಿದೆದ್ದಿದ್ದಾರೆ. ತಮ್ಮ ಮೇಲೆ ಬಂದಿರುವ ಆರೋಪಗಳಿಗೆ ಉತ್ತರಿಸಿದ್ದಾರೆ. ಮುಂದೆ. ಓದಿ......

ಪ್ರಥಮ್ ಕೆಂಡಾಮಂಡಲ!

ಪ್ರಥಮ್ ಗೆ 'ಬಿಗ್ ಬಾಸ್'ನಿಂದ 50 ಲಕ್ಷ ಹಣ ಬಂದಿದೆ. ರೈತರಿಗೆ, ಯೋಧರಿಗೆ ಕೊಟ್ಟಿಲ್ಲ ಎಂಬ ಕಾಮೆಂಟ್ ಗಳು ಎಲ್ಲಾ ಕಡೆ ಹರಿದಾಡುತ್ತಿದ್ದವು. ಇಂತಹ ಕಾಮೆಂಟ್ ಮಾಡಿದವರು ವಿರುದ್ಧ ಪ್ರಥಮ್ ಕೆಂಡಾಮಂಡಲರಾಗಿದ್ದಾರೆ. 'ಬಿಗ್[ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!]

ಬೊಗಳೊ ನಾಯಿಗಳಿಗೆ ಬಿಸ್ಕತ್ ಹಾಕಲ್ಲ

''ಬೊಗಳೊ ನಾಯಿಗಳಿಗೆ ನಾನು ಬಿಸ್ಕತ್ ಹಾಕಲ್ಲ. ನಿಮ್ಮ ಕಟುವಾದ ಕಾಮೆಂಟ್ ಗಳು ನನಗೆ ಡಿಸ್ಟರ್ಬ್ ಮಾಡಲ್ಲ ಮತ್ತು ಅದನ್ನ ನಾನು ಕೇರ್ ಮಾಡಲ್ಲ. ದುಡ್ಡು ಬಂದಿಲ್ಲ ಅಂದ್ರೂ, ಬಂದಿದೆ, ಬಂದಿದೆ ಅಂತ ಹೇಳುವವರನ್ನ ನಾನು ನಾಯಿಗಳು ಅಂತಾನೇ ಹೇಳುವುದು.'' ಎಂದು ಪ್ರಥಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನಗೆ ಸಂಭಾವನೆ ಕೂಡ ಬಂದಿಲ್ಲ

''ಬಿಗ್ ಬಾಸ್'ನಲ್ಲಿ ಭಾಗವಹಿಸಿದ್ದಕ್ಕೆ ಸಂಭಾವನೆ ರೀತಿಯಲ್ಲಿ ಹಣವನ್ನ ನೀಡುತ್ತಾರೆ. ಆ ಹಣವೂ ಕೂಡ ನನಗೆ ಇನ್ನು ಬಂದಿಲ್ಲ. ಬೇರೆಯವರ ಬಳಿ ಎಲ್ಲ ದಾಖಲೆಗಳು ಇತ್ತು, ತೆಗೆದುಕೊಂಡಿದ್ದಾರೆ. ಆದ್ರೆ, ನನ್ನ ಬಳಿ ಇರಲಿಲ್ಲ. ಫೆಬ್ರವರಿಯಲ್ಲಿ ದಾಖಲೆಗಳನ್ನ ಒದಗಿಸಿದ್ದಿನಿ. ಅದು ಕಾರ್ಯರೂಪದಲ್ಲಿದೆ''['ಬಿಗ್ ಬಾಸ್' ಫಿನಾಲೆಯಲ್ಲಿ ಕನ್ನಡಿಗರ ಮನಗೆದ್ದ ತಂದೆ-ಮಗ!]

ನಿಮ್ಮ ಕೆಲಸಗಳನ್ನ ನೀವು ಮಾಡಿ

''ಪ್ರಪಂಚದಲ್ಲಿ ಎಷ್ಟೊಂದು ಕೆಲಸಗಳಿವೆ. ಅದನ್ನೆಲ್ಲ ಬಿಟ್ಟು, ಪ್ರಥಮ್ ಏನ್ಮಾಡ್ತಿದ್ದಾನೆ, ಪ್ರಥಮ್ ಎಲ್ಲಿದ್ದಾನೆ ಅನ್ನೋದು ಕೆಲವರ ಯೋಚನೆ ಆಗ್ಬಿಟ್ಟಿದೆ. ದಯವಿಟ್ಟು ನಿಮ್ಮ ಕೆಲಸಗಳನ್ನ ನೀವು ಮಾಡಿ. ನನ್ನ ಕೆಲಸ ಏನು ಎಂಬುದು ನನಗೆ ಗೊತ್ತಿದೆ.['ಬಿಗ್ ಬಾಸ್'ಗೆ ಪ್ರಥಮ್ ಆಯ್ಕೆ ಆಗಿದ್ದೇಗೆ? ಪರಮೇಶ್ವರ ಗುಂಡ್ಕಲ್ ಹೇಳಿದ ಸತ್ಯ ಕಥೆ]

ಕಲರ್ಸ್ ಅವರ ಹತ್ರ ಹೋಗಿ ಕೇಳ್ಕೊಳಿ!

''ನಾನು ದಾಖಲೆಗಳನ್ನ ಕೊಟ್ಮೇಲೂ ಇನ್ನು ಬಂದಿಲ್ಲ ಅಂದ್ರೆ, ಹೋಗಿ ಕಲರ್ಸ್ ಅವರ ಬಳಿ ಕೇಳ್ಬೇಕು. ನಿಮಗೆ ಅನುಮಾನವಿದ್ದರೇ ಕಲರ್ಸ್ ಅವರ ಬಳಿ ಕ್ಲಿಯರ್ ಮಾಡ್ಕೊಳ್ಳಿ''.[ಪುನೀತ್ ಹುಟ್ಟುಹಬ್ಬಕ್ಕೆ 'ಬಿಗ್ ಬಾಸ್ ಪ್ರಥಮ್' ಕೊಟ್ಟ ದುಬಾರಿ ಗಿಫ್ಟ್?]

ನಾನು ಕೊಡುತ್ತಿರುವುದು ನಿಮ್ಮ ಹಣ!

''ಕೊಡುವುದು ಬಿಡುವುದು ನನ್ನ ವಿವೇಚನೆಗೆ ಬಿಟ್ಟಿದ್ದು. ನೀವು ಗೆಲ್ಲಿಸಿದ ದುಡ್ಡು ಅದು. ನಿಮ್ಮ ದುಡ್ಡು ನಿಮಗೆ ಕೊಡ್ತಿದ್ದಿನಿ ಅಷ್ಟೇ. ನಾನೇನೂ ನಮ್ಮಪ್ಪನ ಮನೆಯಿಂದ ಕೊಡ್ತಿಲ್ಲ. ನನಗೆ ಗೊತ್ತಿದೆ. ಹೇಗೆ ಕೊಡುವುದು ಅಂತ. ಅದಕ್ಕೆ ಈಗಾಗಲೇ ಎಲ್ಲ ಪ್ಲಾನ್ ಆಗಿದೆ.''[ಹುತಾತ್ಮ ಯೋಧ ಸಂದೀಪ್ ಕುಟುಂಬಕ್ಕೆ ನೆರವಾದ 'ಬಿಗ್ ಬಾಸ್' ಪ್ರಥಮ್]

English summary
Biggboss Winner Pratham Gives Clarification About Biggboss Winning Amount in Facebook Live.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada