»   » ಪುನೀತ್ ಹುಟ್ಟುಹಬ್ಬಕ್ಕೆ 'ಬಿಗ್ ಬಾಸ್ ಪ್ರಥಮ್' ಕೊಟ್ಟ ದುಬಾರಿ ಗಿಫ್ಟ್?

ಪುನೀತ್ ಹುಟ್ಟುಹಬ್ಬಕ್ಕೆ 'ಬಿಗ್ ಬಾಸ್ ಪ್ರಥಮ್' ಕೊಟ್ಟ ದುಬಾರಿ ಗಿಫ್ಟ್?

Posted By:
Subscribe to Filmibeat Kannada

ನಿನ್ನೆ (ಮಾರ್ಚ್ 17) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 42ನೇ ಬರ್ತ್ ಡೇ ಸಂಭ್ರಮ. ರಾಜ್ಯದ ಮೂಲೆ ಮೂಲೆಯಿಂದಲೂ ಅಭಿಮಾನಿಗಳು ಪುನೀತ್ ನಿವಾಸಕ್ಕೆ ಬಂದು ತುಂಬು ಹೃದಯದಿಂದ ಶುಭ ಕೋರಿದ್ರು. ಈ ಸಾವಿರಾರು ಅಭಿಮಾನಿಗಳಲ್ಲಿ 'ಬಿಗ್ ಬಾಸ್ ಕನ್ನಡ 4' ವಿಜೇತ ಪ್ರಥಮ್ ಕೂಡ ಒಬ್ಬರು ಎನ್ನುವುದು ವಿಶೇಷ.[ಚಿತ್ರಗಳು: ಪುನೀತ್ ರಾಜ್ ಕುಮಾರ್ 42ನೇ ಹುಟ್ಟುಹಬ್ಬ ಬಲು ಜೋರು]

ಹೌದು, ಒಳ್ಳೆ ಹುಡುಗ ಪ್ರಥಮ್ 'ರಾಜವಂಶ'ದ ಅಪ್ಪಟ ಅಭಿಮಾನಿ. ಹಾಗಾಗಿಯೇ ಪುನೀತ್ ಅವರ ಹುಟ್ಟುಹಬ್ಬಕ್ಕೆ ತಮ್ಮ ಕಡೆಯಿಂದ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಏನದು ಬರ್ತ್ ಡೇ ಗಿಫ್ಟ್ ಅಂತ ಮುಂದೆ ಓದಿ...

ಪುನೀತ್ ಹುಟ್ಟುಹಬ್ಬಕ್ಕೆ ದುಬಾರಿ ಗಿಫ್ಟ್!

ಪವರ್ ಸ್ಟಾರ್ ಬರ್ತ್ ಡೇ ಗೆ ಹಲವು ಗಿಫ್ಟ್ ಗಳು ಬಂದಿವೆ. ಆದ್ರೆ, 'ಬಿಗ್ ಬಾಸ್ ಪ್ರಥಮ್' ಕೊಟ್ಟ ಗಿಫ್ಟ್ ವಿಶೇಷವಾಗಿ ಗಮನ ಸೆಳೆಯಿತು. ತಮ್ಮ ನೆಚ್ಚಿನ ನಟನಿಗೆ ಪ್ರೀತಿಯಿಂದ ಪ್ರಥಮ್ ಅವರು ದುಬಾರಿ ಗಿಫ್ಟ್ ವೊಂದನ್ನ ಪ್ರೆಸೆಂಟ್ ಮಾಡಿದರು.[ಪುನೀತ್ 'ರಾಜಕುಮಾರ' ಹುಟ್ಟುಹಬ್ಬಕ್ಕೆ ಟಪ್ಪಾಂಗುಚ್ಚಿ ಗಿಫ್ಟ್: ಕುಣಿದು ಕುಪ್ಪಳಿಸಿ..]

ಪ್ರಥಮ್ ಕೊಟ್ಟರು ಚಿನ್ನದ ಉಂಗುರ!

ಕನ್ನಡದ ರಾಜರತ್ನ ಪುನೀತ್ ಹುಟ್ಟುಹಬ್ಬದ ವಿಶೇಷವಾಗಿ, ಪ್ರಥಮ್ ಚಿನ್ನದ ಉಂಗುರವನ್ನ ಉಡುಗೊರೆಯಾಗಿ ನೀಡಿದರು. ತಾವೇ ತಮ್ಮ ಕೈಯಿಂದ ಅಪ್ಪು ಬೆರಳಿಗೆ ತೊಡಿಸಿ ಖುಷಿ ಪಟ್ಟರು.[ಪವರ್ ಸ್ಟಾರ್ ಬಗ್ಗೆ ನೀವರಿಯದ ಗುಣವಿಶೇಷಣಗಳು]

ಬಿಗ್ ಬಾಸ್ ಸಂಜನಾ ಭಾಗಿ!

ಪುನೀತ್ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ಬಿಗ್ ಬಾಸ್ ಖ್ಯಾತಿಯ ಸಂಜನಾ ಕೂಡ ಭಾಗಿಯಾಗಿದ್ದರು. ಪ್ರಥಮ್ ಮತ್ತು ಸಂಜನಾ ಇಬ್ಬರು ಪುನೀತ್ ಅವರಿಗೆ ಒಟ್ಟಿಗೆ ಬರ್ತ್ ಡೇ ವಿಶ್ ಮಾಡಿದರು.

ಪ್ರಥಮ್ ಉಡುಗೊರೆಗೆ ಪುನೀತ್ ಹ್ಯಾಪಿ

ಪ್ರಥಮ್ ಕೊಟ್ಟ ಬರ್ತ್ ಡೇ ಗಿಫ್ಟ್, ಕೈಗೆ ತೊಡಿಸಿಕೊಂಡ ಪುನೀತ್ ರಾಜ್ ಕುಮಾರ್ ಫುಲ್ ಖುಷಿಯಾದರು. ಪ್ರಥಮ್ ಮತ್ತು ಸಂಜನಾ ಜೊತೆ ಭರ್ಜರಿ ಪೋಸ್ ಕೊಟ್ಟು ಫೋಟೋ ಕೂಡ ತೆಗೆಸಿಕೊಂಡರು.

ಪ್ರಥಮ್ ರಾಜವಂಶದ ಅಭಿಮಾನಿ

ಅಂದ್ಹಾಗೆ, ಒಳ್ಳೆ ಹುಡುಗ ಪ್ರಥಮ್ ಡಾ.ರಾಜ್ ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹೀಗೆ ಅಣ್ಣಾವ್ರ ಕುಟುಂಬದ ಅಪ್ಪಟ ಅಭಿಮಾನಿ ಎನ್ನುವುದು ಮತ್ತೊಂದು ವಿಶೇಷ.['ಸಿಂಹದ ಮರಿ' ಶಿವರಾಜ್ ಕುಮಾರ್ ಮನೆಯಲ್ಲಿ 'ಮರಿ ಹುಲಿ' ಪ್ರಥಮ್.!]

English summary
Biggboss Kannada 4 Winner Pratham Gives Gold Ring To Puneeth Rajkumar For His 42nd Birthday on yesterday (March 17)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada