For Quick Alerts
  ALLOW NOTIFICATIONS  
  For Daily Alerts

  ಕನ್ನಡದ 'ಮಾಮು ಟೀ ಅಂಗಡಿ'ಯಲ್ಲಿ ಬಿಪಾಶಾ ಬಸು

  By Rajendra
  |

  ಇದೇ ಮೊದಲ ಬಾರಿಗೆ ಕೃಷ್ಣ ಸುಂದರಿ ಬಿಪಾಶಾ ಬಸು ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾಮು ಟೀ ಅಂಗಡಿಯಲ್ಲಿ ಪಾತ್ರವೊಂದನ್ನು ಬಿಪಾಶಾ ಪೋಷಿಸಲಿದ್ದಾರೆ ಎನ್ನುತ್ತವೆ ಮೂಲಗಳು. ಮಾಮು ಟೀ ಅಂಗಡಿ ಚಿತ್ರ ಹಲವು ವಿಶೇಷಗಳಿಂದ ಕೂಡಿದ ಚಿತ್ರ.

  ಹಲವು ವಿಶೇಷಗಳನ್ನು ಒಳಗೊಂಡಿರುವ 'ಮಾಮು ಟೀ ಅಂಗಡಿ' ಚಿತ್ರದ ಪ್ರಾರಂಭಕ್ಕೆ ಚಾಲನೆ ಸಿಕ್ಕಿದೆ. ಈ ಚಿತ್ರದಲ್ಲಿ ಒಂದು ಹಾಡಿಗೆ ಕನ್ನಡ ಸಿನೆಮಾದ ಜನಪ್ರಿಯ ನಾಯಕರುಗಳಾದ ಶ್ರೀನಗರ ಕಿಟ್ಟಿ, ಅಜಯ್ ರಾವ್, ನೆನಪಿರಲಿ ಪ್ರೇಮ್ ಹಾಗೂ ಯೋಗೀಶ್ ಅವರು ಧ್ವನಿಗೂಡಿಸಲಿದ್ದಾರೆ.

  ಅಷ್ಟೇ ಅಲ್ಲದೆ ಶ್ರೀನಗರ ಕಿಟ್ಟಿ, ಅಜಯ್ ರಾವ್, ನೆನಪಿರಲಿ ಪ್ರೇಮ್ ಹಾಗೂ ಪ್ರಜ್ವಲ್ ದೇವರಾಜ್ 'ಮಾಮು ಟೀ ಅಂಗಡಿ' ಚಿತ್ರದಲ್ಲಿ ಗೌರವ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಇದಿಷ್ಟೇ ಅಲ್ಲದೆ ಜೀ ಟಿವಿಯಲ್ಲಿ ಬರುತ್ತಿರುವ ಡಾನ್ಸ್ ಇಂಡಿಯ ಡಾನ್ಸ್, ಕಲರ್ಸ್ ಟಿವಿಯಲ್ಲಿ ಬರುತ್ತಿರುವ 'ಜಲಕ್ ದಿಖಲಾ ಜ' ಮತ್ತು ಚೈನಾ ದೇಶದ ಡಾನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ವರುಣ್ ಸಿಂಗಮ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಹಿಂದಿ ಚಿತ್ರರಂಗದಿಂದ ಕಾಜಲ್ ಅಥವಾ ಬಿಪಾಶಾ ಬಸು ಕನ್ನಡಕ್ಕೆ ಆಗಮಿಸುವ ಸಾಧ್ಯತೆಗಳಿವೆ. ಡಾನ್ಸ್ ಇಂಡಿಯ ಡಾನ್ಸ್ ಕಾಯಕ್ರಮದ ಟೆರೆನ್ಸ್ ಮಾಸ್ಟರ್ ಈ 'ಮಾಮು ಟೀ ಅಂಗಡಿ' ಚಿತ್ರಕ್ಕೆ ಆಗಮಿಸಲಿದ್ದಾರೆ ಎಂದು ನಿರ್ಮಾಪಕರದ ಶ್ರೀರಾಮ್ ಸನ್ನುರ್ಕರ್ ಹೇಳುತ್ತಾರೆ. ಮೂಲತಃ ರೈತರಾಗಿರುವ ಇವರು ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

  'ಮಾಮು ಟಿ ಅಂಗಡಿ' ಚಿತ್ರದ ನಿರ್ದೇಶಕ ಪರಮೇಶ್ ಈಗಾಗಲೇ ಹಲವು ವರ್ಷಗಳ ಕಾಲ ದೃಶ್ಯ ಮಾಧ್ಯಮದಲ್ಲಿ ಇರುವವರು. ಎನ್ಎಸ್ ದಿ, ಆರ್ಆರ್ ಸಿ ರಂಗ ತಂಡ ಅಲ್ಲದೆ ಜಾಹೀರಾತುಗಳ ನಿರ್ದೇಶಕರೂ ಜೀ ಟಿವಿ ಕನ್ನಡಕ್ಕಾಗಿ 'ಕಿವಿ ಮೇಲ್ ಫ್ಲವರ್' ಎಂಬ ಕಾರ್ಯಕ್ರಮದ ರೂವಾರಿ.

  ಇವರು ಕನ್ನಡದ ಹೆಸರಾಂತ ನಿರ್ದೇಶಕರುಗಳಾದ ಶಶಾಂಕ್, ಗಿರಿರಾಜ, ಉಮೇಶ್, ವಿಶಾಲ್ ರಾಜ್, ಭಗವಾನ್ ಅವರ ಬಳಿ ಸಹಾಯಕರದವರು. ಯೂಟ್ಯೂಬ್ ಗಾಗಿ ಅನೇಕ ನಟರುಗಳ ಲೈಫ್ ಸ್ಟೈಲ್ ವೀಡಿಯೋ ಅನ್ನು ನಿರ್ದೇಶನ ಮಾಡಿದ ಅನುಭವ ಹೊಂದಿದ್ದಾರೆ.

  'ಮಾಮು ಟೀ ಅಂಗಡಿ' ನಾಲ್ಕು ನಾಯಕರು ಹಾಗೂ ಮೂರು ನಾಯಕಿಯರ ಸುತ್ತುವ ಕಥೆ. ಟೀ ಅಂಗಡಿ ಬಳಿ ಗೆಳೆಯರು ಸೇರುವುದು, ಮಾಮು ಜೊತೆ ಹರಟೆ, ಜಗಳ, ತಮಾಷೆ ಅಲ್ಲದೆ ಮನಮಿಡಿಯುವ ದೃಶ್ಯಗಳಿವೆ. ನಾಲ್ಕು ಸ್ನೇಹಿತರು ಪ್ರೀತಿಯಲ್ಲಿ ಆಸಕ್ತಿ ತೋರುವುದು, ಅನಂತರ ಭಿನ್ನಭಿಪ್ರಾಯ... ಹೀಗೆ ಆಗಿ ಎಲ್ಲರೂ ಒಬ್ಬಂಟಿ ತನಕ್ಕೆ ಜರಗುವ ಕ್ಷಣ ಒದಗಿ ಬರುವುದು. ಆಮೇಲೆ ಏನು ಎಂಬುದು ಚಿತ್ರದ ಇನ್ನಷ್ಟು ಮುಖ್ಯ ವಿಚಾರ 'ಮಾಮು ಟೀ ಅಂಗಡಿ' ಚಿತ್ರದಲ್ಲಿ ಹರಿದು ಬರಲಿದೆ.

  ಶ್ರೀರಾಮ್ ಸನ್ನುರ್ಕರ್ ಟೂರಿಂಗ್ ಟಾಕೀಸ್ ಸಂಸ್ಥೆಯ ಈ ಚಿತ್ರದಲ್ಲಿ ನಾಯಕರುಗಲಾಗಿ ವರುಣ್ ಸಿಂಗಮ್, ಅಭಿಶೇಕ್, ರಿತೇಶ್, ಮಹೇಶ್ ಜೊತೆ ನಾಯಕಿಯರಾಗಿ ಸಂಗೀತ ಭಟ್, ರಾಶಿ ಸಿಂಗ್, ಅರ್ಚನಾ ಸಿಂಗ್ ಇದ್ದಾರೆ.

  ಪೋಷಕ ಕಲಾವಿದರಾದ ಹೊನ್ನವಳ್ಳಿ ಕೃಷ್ಣ, ಬ್ಯಾಂಕ್ ಜನಾರ್ಧನ್, ಬಿರಾದಾರ್, ಮೋಹನ್ ಜುನೇಜಾ, ಲಯೇಂದ್ರ, ರಮಾನಂದ್, ರೇಖಾ ದಾಸ್ ಇದ್ದಾರೆ. ರಾಜೇಶ್ ರಾಮನಾಥ್ ಅವರ ಸಂಗೀತ, ಎಂ ಯು ನಂದಕುಮಾರ ಛಾಯಾಗ್ರಹಣ ಈ ಚಿತ್ರಕ್ಕೆ ಒದಗಿಸಲಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Sources says that Bollywood dusky beauty Bipasha Basu to act in Kannada film Maamu Tea Angadi. The movie is directing by Paramesh A, who is making his debut with this movie. Maamu Tea Angadi, which revolves around the theme of friendship, has a cast comprising a host of newcomers Varun, Rithesh and Sangeetha Bhat in the lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X