»   » ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಟಾಪ್ ಚಿತ್ರಗಳು

ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಟಾಪ್ ಚಿತ್ರಗಳು

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಟಾಪ್ 10 ಚಿತ್ರಗಳನ್ನು ಪಟ್ಟಿ ಮಾಡುವುದು ತುಂಬಾ ಕಷ್ಟ. ಇದುವರೆಗೂ 40ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿರುವ ಅವರು ಮಾಸ್ ಚಿತ್ರಗಳಿಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.

ಜನಪ್ರಿಯತೆ ದೃಷ್ಟಿಯಿಂದ ನೋಡುವುದಾದರೆ ದರ್ಶನ್ ಅಭಿನಯದ ಟಾಪ್ 10 ಚಿತ್ರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಇವು ಟಾಪ್ 10 ಚಿತ್ರಗಳೆಂದು ನಿರ್ಧರಿಸಲು ಯಾವುದೇ ಮಾನದಂಡ ಬಳಸದೆ ಇದ್ದರೂ ಜನಪ್ರಿಯತೆ ದೃಷ್ಟಿಯಲ್ಲಿ ನಿರ್ಧರಿಸಿದ್ದೇವೆ.

ಒಂದು ವೇಳೆ ಈ ಪಟ್ಟಿಯಲ್ಲಿರುವ ಚಿತ್ರಗಳಿಗಿಂತಲೂ ನಿಮಗೆ ಇಷ್ಟವಾದ ಚಿತ್ರಗಳಿದ್ದರೆ ಕಾಮೆಂಟ್ ರೂಪದಲ್ಲಿ ತಿಳಿಸಿ. ಆ ಚಿತ್ರ ಯಾಕೆ ಇಷ್ಟವಾಯಿತು ಎಂಬುದನ್ನು ತಿಳಿಸಲು ಮರೆಯಬೇಡಿ. ಇಳಿಯೆಣಿಕೆ (10 ರಿಂದ 1) ಪ್ರಕಾರ ಸ್ಲೈಡ್ ಗಳ ರೂಪದಲ್ಲಿ ನೋಡೋಣ ಬನ್ನಿ.

ಅದಕ್ಕೂ ಮುನ್ನ ದರ್ಶನ್ ಅವರಿಗೆ ಹುಟ್ಟುಹಬ್ಪದ ಶುಭಾಶಯಗಳು. ಅವರು ಶನಿವಾರ (ಫೆ.16) 37ನೇ ವರ್ಷಕ್ಕೆ ಅಡಿಯಿಟ್ಟಿದ್ದಾರೆ. ರಾಜರಾಜೇಶ್ವರಿ ನಗರದ ಅವರ ನಿವಾಸದ ಬಳಿ ಅಭಿಮಾನಿಗಳ ಸಾಗರವೇ ಹರಿದುಬರುತ್ತಿದೆ.

ದರ್ಶನ್ ಟಾಪ್ 10 ಚಿತ್ರ ಶಾಸ್ತ್ರಿ

ಜುಲೈ 20, 2005ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದವರು ಪಿಎನ್ ಸತ್ಯ. ಅಣಜಿ ನಾಗರಾಜ್ ನಿರ್ದೇಶನದ ಈ ಚಿತ್ರಕ್ಕೆ ಸಾಧು ಕೋಕಿಲ ಸಂಗೀತ ನಿರ್ದೇಶನ ಮಾಡಿದ್ದಾರೆ. ಮಾನ್ಯ ಹೀರೋಯಿನ್ ಆಗಿದ್ದ ಈ ಚಿತ್ರ ಬಾಕ್ಸ್ ಆಫೀಸಲ್ಲಿ ಭರ್ಜರಿ ಯಶಸ್ಸು ದಾಖಲಿಸಿದೆ.

ಅಯ್ಯ ಚಿತ್ರಕ್ಕೆ 9ನೇ ಸ್ಥಾನ ಕೊಡಬಹುದು

ಪಕ್ಕಾ ಮಾಸ್ ಮಸಾಲಾ ನಿರ್ದೇಶಕ ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳಿರುವ ಚಿತ್ರ. ಕ್ರೇಜಿಸ್ಟಾರ್ ವಿ ರವಿಚಂದ್ರನ್ ಈ ಚಿತ್ರಕ್ಕೆ ಸಂಗೀತ ನೀಡಿರುವುದು ವಿಶೇಷ. ಕಾಲೇಜು ವಿದ್ಯಾರ್ಥಿನಿಯಾಗಿ ರಕ್ಷಿತಾ ಚಿತ್ರದಲ್ಲಿ ಅಭಿನಯಿಸಿದ್ದು, ಹುಬ್ಬಳ್ಳಿಯ ಸಹಾಯಕ ಪೊಲೀಸ್ ಕಮೀಷನರ್ ಆಗಿ ಅಭಿನಯಿಸಿರುವ ದರ್ಶನ್ ಲವ್ವಲ್ಲಿ ಬೀಳುತ್ತಾರೆ. ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿದ ಚಿತ್ರಗಳಲ್ಲಿ ಇದೂ ಒಂದು.

ಬಾಕ್ಸ್ ಆಫೀಸ್ 'ಪ್ರಿನ್ಸ್' ಚಿತ್ರಕ್ಕೆ 8ನೇ ಸ್ಥಾನ

ಸಂದೇಶ್ ನಾಗರಾಜ್ ನಿರ್ದೇಶನದ ಈ ಚಿತ್ರಕ್ಕೆ ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳಿದ್ದಾರೆ. ನಿಖಿತಾ ಹಾಗೂ ಜೆನ್ನಿಫರ್ ಚಿತ್ರದ ಇಬ್ಬರು ನಾಯಕಿಯರು. ವಿ ಹರಿಕೃಷ್ಣ ಸಂಗೀತ ನಿರ್ದೇಶನ ಹಾಗೂ ಎಂ.ಎಸ್.ರಮೇಶ್ ಅವರ ಚಿತ್ರಕಥೆ ಸಂಭಾಷಣೆ ಚಿತ್ರಕ್ಕಿದೆ. ಬಾಕ್ಸ್ ಆಫೀಸಲ್ಲಿ ಹಿಟ್ ಆದ ಮತ್ತೊಂದು ಚಿತ್ರ.

ಏಳನೆ ರೋಚಕ ಚಿತ್ರ ನವಗ್ರಹ

ದರ್ಶನ್ ಅವರ ಸ್ವಂತ ಬ್ಯಾನರ್ ನಲ್ಲಿ ಬಂದಂತಹ ಚಿತ್ರ. ಈ ಚಿತ್ರಕ್ಕೆ ದಿನಕರ್ ತೂಗುದೀಪ ಆಕ್ಷನ್ ಕಟ್ ಹೇಳಿದ್ದಾರೆ. ಮೈಸೂರು ಮಹಾರಾಜರ ಚಿನ್ನದ ಸಿಂಹಾಸವನ್ನು ಅಪಹರಿಸುವುದೇ ಚಿತ್ರದ ಕಥಾವಸ್ತು. ಅತ್ಯಂತ ರೋಚಕವಾಗಿ ಸಾಗುವ ಈ ಚಿತ್ರದಲ್ಲಿ ದರ್ಶನ್ ಅಷ್ಟೇ ಅಲ್ಲ ವಿನೋದ್ ಪ್ರಭಾಕರ್, ಸೃಜನ್ ಲೋಕೇಶ್, ನಾಗೇಂದ್ರ ಅರಸ್, ತರುಣ್ ಸುಧೀರ್, ಗಿರಿ ದಿನೇಶ್, ಧರ್ಮ ಕೀರ್ತಿರಾಜ್, ವರ್ಷಾ, ಶರ್ಮಿಳಾ ಮಾಂಡ್ರೆ ಹಾಗೂ ಸೌರವ್ ಅಭಿನಯಿಸಿದ್ದಾರೆ.

ವಿಭಿನ್ನ ಪಾತ್ರದ ನಮ್ಮ ಪ್ರೀತಿಯ ರಾಮು

ಸಂಜಯ್ ಹಾಗೂ ವಿಜಯ್ ನಿರ್ದೇಶನದ ಈ ಚಿತ್ರ ದರ್ಶನ್ ಗೆ ಮಾಸ್ ನಿಂದ ಕ್ಲಾಸ್ ಇಮೇಜ್ ತಂದುಕೊಟ್ಟಂತಹ ಚಿತ್ರ. ರಾಮೇಗೌಡ ನಿರ್ಮಾಣದ ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದ್ದಾರೆ. ಕುರುಡನಾಗಿ ದರ್ಶನ್ ಅದ್ಭುತ ಅಭಿನಯ ನೀಡಿದ್ದಾರೆ. ಈ ಚಿತ್ರದ ಹಾಡುಗಳು ಜನಪ್ರಿಯವಾಗಿವೆ. 2003ರಲ್ಲಿ ಭರ್ಜರಿ ಹಿಟ್ ದಾಖಲಿಸಿದ ಚಿತ್ರ.

ದರ್ಶನ್, ರಮ್ಯಾ ಜೋಡಿಯ ದತ್ತ

ಈ ಚಿತ್ರವೂ ಸೂಪರ್ ಹಿಟ್ ದಾಖಲಿಸಿದ ಚಿತ್ರ. ಚಿ.ಗುರುದತ್ ನಿರ್ಮಿಸಿ, ನಿರ್ದೇಶಿಸಿರುವ ಚಿತ್ರ. ಆರ್ ಪಿ ಪಟ್ನಾಯಕ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ವಿ ನಾಗೇಂದ್ರ ಪ್ರಸಾದ್ ಹಾಗೂ ಕೆ ಕಲ್ಯಾಣ್ ಸಾಹಿತ್ಯ ರಚಿಸಿದ್ದಾರೆ.

175 ದಿನ ಪೂರೈಸಿದ ದರ್ಶನ್ ಚಿತ್ರ ಗಜ

ಈ ಚಿತ್ರ ಬಿಡುಗಡೆಗೊಂಡಿದ್ದು ಜನವರಿ 11, 2008ರಲ್ಲಿ. ಚಿತ್ರದಲ್ಲಿ ದರ್ಶನ್ ಗೆ ನವ್ಯಾ ನಾಯರ್ ಸಾಥ್ ನೀಡಿದ್ದಾರೆ. ಶ್ರೀನಿವಾಸ ಮೂರ್ತಿ ಹಾಗೂ ಸುರೇಶ್ ಗೌಡ ನಿರ್ಮಾಣದ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. 175ದಿನ ಪ್ರದರ್ಶನ ಕಂಡ ಚಿತ್ರ ದರ್ಶನ್ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲು.

ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿದಕಲಾಸಿಪಾಳ್ಯ

ರಾಮು ನಿರ್ಮಾಣದ ಈ ಚಿತ್ರಕ್ಕೆ ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳಿದ್ದಾರೆ. ವೆಂಕಟ್ ನಾರಾಯಣ್ ಹಾಗೂ ಸಾಧು ಕೋಕಿಲ ಸಂಗೀತ ನಿರ್ದೇಶನದ ಚಿತ್ರ. ರಕ್ಷಿತಾ ಚಿತ್ರದ ನಾಯಕಿ. ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿದ ಚಿತ್ರಗಳಲ್ಲಿ ಇದೂ ಒಂದು.

ದರ್ಶನ್ ಅವರ ಅತ್ಯಂತ ಜನಪ್ರಿಯ ಚಿತ್ರ 'ಕರಿಯ'

ಬೆಂಗಳೂರು ಭೂಗತ ಜಗತ್ತಿನ ಕರಾಳಮುಖವನ್ನು ತೋರಿಸಿದಂತಹ ಚಿತ್ರ. ಪ್ರೇಮ್ ನಿರ್ದೇಶನದ ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ. 2003ರಲ್ಲಿ ತೆರೆಕಂಡ ಈ ಚಿತ್ರ ಬಾಕ್ಸ್ ಆಫೀಸಲ್ಲಿ ಭರ್ಜರಿ ಗಳಿಕೆ ಮಾಡಿತು. ಅಭಿಮಾನಿಗಳ ಒತ್ತಾಯದ ಮೇರೆಗೆ ಈ ಚಿತ್ರ ಆಗಾಗ ಬಿಡುಗಡೆಯಾಗುತ್ತಲೇ ಇದೆ.

ನಂಬರ್ ಒನ್ ಚಿತ್ರ ಸಾರಥಿ, ಸಂಗೊಳ್ಳಿ ರಾಯಣ್ಣ?

ಇದುವೆರೆಗೂ ಅಭಿನಯಿಸಿದ ಚಿತ್ರಗಳಲ್ಲಿ ದರ್ಶನ್ ಅವರ ನಂಬರ್ ಒನ್ ಚಿತ್ರ ಯಾವುದು ಎಂದು ತೀರ್ಮಾನಿಸುವುದು ನಿಜಕ್ಕೂ ಕಷ್ಟದ ಕೆಲಸ. ಸಾರಥಿ ಚಿತ್ರಕ್ಕೆ ಮಾರ್ಕ್ಸ್ ನೀಡಿದರೂ 60ಕ್ಕಿಂತ ಕಡಿಮೆ ನೀಡಲು ಸಾಧ್ಯವಿಲ್ಲ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರವೂ ಅಷ್ಟೇ. ನಂಬರ್ ಒನ್ ಚಿತ್ರ ಯಾವುದು ಎಂಬ ತೀರ್ಮಾನ ಅವರ ಅಭಿಮಾನಿಗಳಿಗೇ ಬಿಟ್ಟಿದ್ದು. ಇಷ್ಟಕ್ಕೂ ದರ್ಶನ್ ವೃತ್ತಿಜೀವನದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಚಿತ್ರ ಯಾವುದು? ಅಭಿಮಾನಿಗಳೇ ನಿರ್ಧರಿಸಲಿ.

English summary
Kannada box office Sultan Challenging Star Darshan celebrating 37th birthday on 16th February, 2013. He has already acted 40 films. His first movie as a hero was 'Majestic'. Darshan's top 10 Kannada hit movies list.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada