»   » ಬರ್ತ್‌ಡೇ ಬಾಯ್ ಉಪ್ಪಿ ಹೊಸ ಚಿತ್ರದ ಡಿಟೇಲ್ಸ್

ಬರ್ತ್‌ಡೇ ಬಾಯ್ ಉಪ್ಪಿ ಹೊಸ ಚಿತ್ರದ ಡಿಟೇಲ್ಸ್

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರು ಮಂಗಳವಾರ (ಸೆ.18) 44ನೇ ವಸಂತಕ್ಕೆ ಅಡಿಯಿಟ್ಟಿದ್ದಾರೆ. ಅವರ ಅಭಿಮಾನಿಗಳಿಗಂತೂ ಸಂಭ್ರಮವೋ ಸಂಭ್ರಮ. ಉಪ್ಪಿಯ 'ಸುಮ್ಮನೆ' ಮಂದೆ ಅವರು ಬಿಮ್ಮನೆ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಉಪ್ಪಿ ತಮ್ಮ ಅಭಿಮಾನಿಗಳಿಗೆ ಉಡುಗೊರೆಯನ್ನೂ ನೀಡಿದ್ದಾರೆ.

ಗಂಡುಗಲಿ ಕೆ ಮಂಜು ಚಿತ್ರವೊಂದನ್ನು ಪ್ರಕಟಿಸಿದ್ದಾರೆ. ಚಿತ್ರದ ಹೆಸರು 'ಸೂಪರ್ ಕಿಕ್'. ಇದು ಸೂಪರ್ ಚಿತ್ರದ ಮುಂದುವರಿದ ಭಾಗವೇ? ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಈ ಚಿತ್ರದಲ್ಲಿ ರಮೇಶ್ ಅರವಿಂದ್ ಸಹ ಅಭಿನಯಿಸುತ್ತಿರುವುದು ವಿಶೇಷ.

ಅಲ್ಲಿಗೆ ಇದೊಂದು ಬಹುತಾರಾಗಣದ ಚಿತ್ರ ಎಂದಾಯಿತು. ಈ ಬಗ್ಗೆ ರಮೇಶ್ ಅವರು ಮಾತನಾಡುತ್ತಾ, "ಈ ಚಿತ್ರದ ಮೂಲಕ ನಾವಿಬ್ಬರೂ ಕೈಜೋಡಿಸುತ್ತಿದ್ದೇವೆ. ಸದ್ಯಕ್ಕೆ ಉಪ್ಪಿ ಬರ್ತ್‌ಡೇ ಮೂಡ್ ನಲ್ಲಿದ್ದಾರೆ. ಅವರು ಸ್ವಲ್ಪ ಫ್ರೀಯಾದ ಬಳಿಕ ಚಿತ್ರದ ಉಳಿದ ಅಂಶಗಳ ಬಗ್ಗೆ ಚರ್ಚಿಸುತ್ತೇವೆ. ಖಂಡಿತ ಈ ಚಿತ್ರ ಉತ್ತಮ ಮನರಂಜನಾತ್ಮಕ ಚಿತ್ರವಾಗಿ ಬರಲಿದೆ" ಎಂದಿದ್ದಾರೆ.

ಇದರ ಜೊತೆಗೆ ಉಪ್ಪಿ ನಿರ್ಮಾಣ ಸಂಸ್ಥೆ 'ಉಪೇಂದ್ರ ಪ್ರೊಡಕ್ಷನ್ಸ್' ಹುಟ್ಟುಹಬ್ಬದ ದಿನ ಆರಂಭವಾಗಿದೆ. ಉಪ್ಪಿ ಸಹಧರ್ಮಿಣಿ ಪ್ರಿಯಾಂಕಾ ಉಪೇಂದ್ರ ನಿರ್ಮಿಸಲಿರುವ ಚಿತ್ರಕ್ಕೆ ಉಪ್ಪಿ ಆಕ್ಷನ್ ಕಟ್ ಹೇಳಲಿದ್ದಾರೆ.

ಈಗಾಗಲೆ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಅದರಲ್ಲಿ ಹಲವಾರು ಚಿಹ್ನೆಗಳ ಮೂಲಕ ಉಪೇಂದ್ರ ಗಮನಸೆಳೆದಿದ್ದಾರೆ. ಅವರ ಅಭಿಮಾನಿಗಳು ಇದನ್ನು 'ಉಪೇಂದ್ರ 2' ಇರಬಹುದು ಎಂಬು ಭಾವಿಸಿದ್ದಾರೆ. (ಏಜೆನ್ಸೀಸ್)

English summary
Birthday boy Real Star Upendra's new Kannada film titled as Super Kick announced by producer K Manju. Kannada films popular actor Ramesh Aravind also act in this film.
Please Wait while comments are loading...