»   » ಬರ್ಥ್ ಡೇ ಗರ್ಲ್ ನಯನಿ ಈಗ ನಂ.1

ಬರ್ಥ್ ಡೇ ಗರ್ಲ್ ನಯನಿ ಈಗ ನಂ.1

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಡಾನ್ಸ್ ಮಾಸ್ಟರ್ ಪ್ರಭುದೇವ ಹಾಗೂ ನಟ ಸಿಲಂಬರಸನ್ (ಸಿಂಬು) ಇಬ್ಬರಿಗೂ ಕೈಕೊಟ್ಟ ಮಲ್ಲು ಹುಡುಗಿ ನಯನತಾರಾ ಪ್ರೀತಿ ಪ್ರೇಮದ ಕನಸು ಕಾಣುವುದು ಬಿಟ್ಟು ತುಂಬಾ ದಿನವಾಗಿದೆ. ಯಶಸ್ಸಿನ ಕುದುರೆ ಏರಿರುವ ನಯನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇತ್ತೀಚೆಗೆ ಹಳೆ ಲವರ್ ಎದುರಾದಾಗ ಸವಿ ಸವಿ ನೆನಪು ಸಾವಿರ ನೆನಪು ಕಾಡಿದರೂ ವೃತ್ತಿಪರತೆ ಮೆರೆದ ನಯನಿ ಮತ್ತೊಮ್ಮೆ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸತೊಡಗಿದ್ದಾಳೆ.

ಕ್ಲಾಸ್ ಹಾಗೂ ಮಾಸ್ ಪ್ರೇಕ್ಷಕರಿಬ್ಬರಿಗೂ ಸಲ್ಲುವ ನಟನೆ, ಮಾದಕತೆ ಹೊಂದಿರುವ ನಯನ್ ತಾರಾ ತನನ್ ವೃತ್ತಿ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾಳೆ. ಆರಂಭಂ ಚಿತ್ರದ ಮೂಲಕ ಮರು ಜೀವ ಪಡೆದುಕೊಂಡು ಮತ್ತೊಮ್ಮೆ ಕಾಲಿವುಡ್, ಟಾಲಿವುಡ್ ನ ಕ್ವೀನ್ ಆಗಲು ನಯನಿ ಹೆಜ್ಜೆ ಹಾಕಿದ್ದಾಳೆ.

ನಟ ಸಿಂಬು ಅಲಿಯಾಸ್ ಸಿಲ್ಬರಸನ್ ಜತೆ ಬ್ರೇಕ್ ಅಪ್ ನಂತರ ಡ್ಯಾನ್ಸ್ ಮಾಸ್ಟರ್ ಪ್ರಭುದೇವ ಜತೆ ಬ್ರೇಕ್ ಡ್ಯಾನ್ಸ್ ಮಾಡತೊಡಗಿದ್ದ ನಯನಿ ಕಂಡು ಸಂಸಾರಸ್ಥ ಪ್ರಭುದೇವನ ಕಣ್ಣು ಕುಕ್ಕಿತ್ತು. ಸಂಸಾರ ತಾಪತ್ರಯಗಳನ್ನು ಮೀರಿ ನಯನಿಯನ್ನು ಒಪ್ಪಿಕೊಂಡಿದ್ದ. ನಯನಿ ಕೂಡಾ ಕ್ರೈಸ್ತಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಪ್ರಭು ಜತೆ ಇನ್ನೇನು ಸಪ್ತಪದಿ ಇಡುತ್ತಾಳೆ ಎನ್ನುವಷ್ಟರಲ್ಲಿ ಮತ್ತೆ ಎಡವಿದಳು.

ಇದೆಲ್ಲದರ ನಡುವೆ ನಯನಿ ಚಿತ್ರರಂಗ ಬಿಡುವ ಮಾತೇ ಇಲ್ಲ ಎನ್ನುತ್ತಾ ಕೃಷ್ಣಂ ಜಗದ್ಗುರಂ ಚಿತ್ರದ ಮೂಲಕ ರೀ ಎಂಟ್ರಿ ಪಡೆದಳು, ಚಿತ್ರ ಸಾಧಾರಣ ಎನಿಸಿದರೂ ನಿರ್ಮಾಪಕರು ನಯನಿ ಮನೆ ಮುಂದೆ ಸಾಲುಗಟ್ಟಿ ನಿಲ್ಲಲು ಶುರು ಮಾಡಿದರು. ಹಲವು ಚಿತ್ರಗಳಿಗೆ ಸಹಿ ಹಾಕಿದ ನಯನಿಗೆ ಅಭಿಮಾನಿಗಳ ಶ್ರೀರಕ್ಷೆ ಸಿಕ್ಕಿದ್ದು ಹೊಸ ಹುರುಪು ನೀಡಿತು. ಇದೆ ಆಕೆಯನ್ನು ಈಗ ನಂ.1 ಪಟ್ಟದತ್ತ ಕರೆದೊಯ್ದಿದೆ. ನಯನಿ ಸಿನಿ ಜರ್ನಿ ಝಲಕ್ ಇಲ್ಲಿದೆ ನೋಡಿ...

ನಯನಿ ಎಡವಿದಾಗ

ನಯನಿ ಎಡವಳು ನಾನು ಕಾರಣಳಲ್ಲ ಎಂದು ಕುಂಬಳಿಕಾಯಿ ಕಳ್ಳಿಯಂತೆ ಹಂಸಿಕಾ ಮೋತ್ವಾನಿ ಹೇಳಿಕೆ ನೀಡಿದಳು. ಅಂದ ಹಾಗೆ, ಭಗ್ನ ಪ್ರೇಮಿ ಸಿಂಬುವಿನ ಹೊಸ ಗರ್ಲ್ ಫ್ರೆಂಡ್ ಭಾವಿ ಪತ್ನಿಯಾಗೋ ಯೋಗ ಈಗ ಹಂಸಿಕಾಗೆ ಸಿಕ್ಕಿದೆಯಂತೆ. ಈ ನಡುವೆ ಪ್ರಭುದೇವ ಕೂಡಾ ನಿರ್ದೇಶನದ ಜತೆಗೆ ಆಸೀನ್ ಜತೆ ಸುತ್ತಾಡುತ್ತಿದ್ದ ಎಂಬ ಸುದ್ದಿಯೂ ಹಬ್ಬಿತು.

ಫ್ಯಾನ್ಸ್ ಶ್ರೀರಕ್ಷೆ

ಸಿಂಬು-ನಯನಿ ಯಾಕೆ ದೂರವಾದರು ಎಂಬ ಬಗ್ಗೆ ಇದುವರೆಗೂ ಸೂಕ್ತ ಕಾರಣ ಸಿಕ್ಕಿಲ್ಲ. ಅದೇ ರೀತಿ ಪ್ರಭುದೇವಗೆ ನಯನಿ ಕೈ ಕೊಟ್ಟಿದ್ದು ಏಕೆ ಇನ್ನೂ ತಿಳಿದಿಲ್ಲ. ಆದರೆ, ಅಭಿಮಾನಿಗಳು ಮಾತ್ರ ಆಕೆ ಜೀವನ ಹಾಗೂ ಚಿತ್ರರಂಗದ ಏಳುಬೀಳಿನಲ್ಲಿ ಸಾಥ್ ನೀಡಿದ್ದಾರೆ. ಹೀಗಾಗಿ ನಯನ್ ತಾರಾ ಮತ್ತೆ ಚಿತ್ರರಂಗದತ್ತ ಮುಖ ಮಾಡಿದಳು

ರೀ ಎಂಟ್ರಿ ಸುಲಭವಾಗಿರಲಿಲ್ಲ

ಅನುಷಾ ಶೆಟ್ಟಿ, ಕಾಜಲ್ ಅಗರವಾಲ್, ತಮನ್ನಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವಾಗ ನಯನ್ ತಾರಾ ಸಿನಿ ಕಥೆ ಮುಗಿಯಿತು ಎನ್ನಲಾಗಿತ್ತ್ತು.

ಕೃಷ್ಣವಂದೇ ಜಗದ್ಗುರಂ ನಂತರ, ನಾಗಾರ್ಜುನ ಜತೆ ಗ್ರೀಕು ವೀರುಡು ಚಿತ್ರ ಮಾಡಿದಳು. ಎರಡು ಚಿತ್ರ ಸೂಪರ್ ಹಿಟ್ ಆಗದಿದ್ದರೂ ಆಕೆಗೆ ಹೆಸರು ತಂದುಕೊಟ್ಟಿತು. ಜತೆಗೆ ಆಕೆಯಲ್ಲಿ ಆತ್ಮವಿಶ್ವಾಸ ಮರುಕಳಿಸುವಂತೆ ಮಾಡಿತು.

ಕಾಲಿವುಡ್ ನಿಂದ ದೂರ

2010ರಲ್ಲಿ ಬಾಸ್ ಎಂಗಿರ ಬಾಸ್ಕರನ್(ಕನ್ನಡದಲ್ಲಿ ಪಾರಿಜಾತ) ಚಿತ್ರದಲ್ಲಿ ನಟಿಸಿದ್ದ ನಯನ್ ತಾರಾ ಮತ್ತೆ ತಮಿಳಿಗಾಗಿ ಬಣ್ಣ ಹಚ್ಚಿರಲಿಲ್ಲ. ನಿರಾಶೆ ಮೂಡ್ ನಲ್ಲಿದ್ದ ತಮಿಳು ಅಭಿಮಾನಿಗಳು ತೆಲುಗು ಚಿತ್ರರಂಗಕ್ಕೆ ನಯನಿ ಸೀಮಿತ ಎಂದು ಹೇಳುವಷ್ಟರಲ್ಲೇ ನಯನಿ ಎರಡು ದೊಡ್ಡ ಪ್ರಾಜೆಕ್ಟ್ ಗಳಿಗೆ ಸಹಿ ಹಾಕಿದ್ದಳು

ರಾಜ ರಾಣಿ ಖುಷ್

ರಾಜ ರಾಣಿ ಚಿತ್ರ ಸಹಿ ಹಾಕಿದ ನಯನಿ ಗೆದ್ದಳು. ಕಥೆ ಗಮನಿಸಿದರೆ ದಂಪತಿಗಳು ಭಗ್ನ ಪ್ರೇಮಿಗಳಾಗಿರುತ್ತಾರೆ. ತಮ್ಮಮ್ಮ ಕಥೆ ಹೇಳಿಕೊಂಡು ಮತ್ತೆ ಒಂದಾಗುತ್ತಾರೆ. ಇದೇ ಚಿತ್ರದ ಯಶಸ್ವಿಕೂಟಕ್ಕೆ ಹಳೆ ಪ್ರೇಮಿಗಳು ಮತ್ತೆ ಗೆಳೆಯರಾಗಿದ್ದು ಕಾಕತಾಳೀಯ ಎನ್ನಬಹುದು.

ಆರ್ಯ, ಜೀವ ಸೇರಿದಂತೆ ಉಳಿದ ಚಿತ್ರತಂಡದ ಜತೆ ಸಿಂಬು ಸಂತೋಷದಿಂದ ಕಲೆತು ಬೆರೆತು ನಲಿದಾಡಿದ್ದರು. ಆರ್ಯ ಜತೆ ಮತ್ತೆ ನಟಿಸಿದ್ದು ನಯನಿಗೆ ಲಕ್ ತಿರುಗಿಸಿತು.

ಅಜಿತ್ ಜತೆ ನಟನೆ

ಅಜಿತ್ ಜತೆ ನಟಿಸುವಂತೆ ನಿರ್ದೇಶಕ ವಿಷ್ಣುವರ್ಧನ್ ಆಹ್ವಾನ ಇತ್ತಾಗ ನಯನಿ ಭಾಗ್ಯದ ಬಾಗಿಲು ತೆರೆಯಿತು. ಆರಂಭಂ ಚಿತ್ರದ ಮೂಲಕ ನಯನಿ ಮತ್ತೆ ಸರಿಯಾದ ಟ್ರ್ಯಾಕ್ ಗೆ ಬಂದಳು.

ತ್ರೀ ಸ್ಟಾರ್ ಸಂಗಮ

ಬಿಲ್ಲಾ ಚಿತ್ರದ ನಂತರ ನಯನ್ ತಾರಾ, ವಿಷ್ಣುವರ್ಧನ್ ಹಾಗೂ ಅಜಿತ್ ಕುಮಾರ್ ಕಾಂಬಿನೇಷನ್ ಮತ್ತೊಮ್ಮೆ ಸೂಪರ್ ಡೂಪರ್ ಹಿಟ್ ಚಿತ್ರ ನೀಡಿತು. ಆರಂಭಂ ನೂರು ಕೋಟಿ ರು ಗಳಿಕೆಯತ್ತ ಸಾಗಿದ್ದು, ನಯನ್ ತಾರಾಗೆ ಫುಲ್ ಖುಷ್ ಆಗಿದ್ದಾರೆ

ಐಟಂ ಡ್ಯಾನ್ಸ್

ಕಾಲಿವುಡ್ ಗೆ ರೀ ಎಂಟ್ರಿ ಆಗುವ ಮೊದಲು ಧನುಷ್ ಪ್ರೊಡೆಕ್ಷನ್ ಚಿತ್ರ ಎದಿರ್ ನೀಚಲ್ ನಲ್ಲಿ ನಯನ್ ತಾರಾ ಐಟಂ ಡ್ಯಾನ್ಸ್ ಮಾಡಿದ್ದಳು.

ರೀ ಎಂಟ್ರಿಗೆ ಜೈ

ಎದಿರ್ ನೀಚಲ್ ಡ್ಯಾನ್ಸ್ ನೋಡಿ ಹುಚ್ಚೆದ್ದಿದ್ದ ಪಡ್ಡೆಗಳು, ರಾಜ ರಾಣಿ ಹಾಗೂ ಆರಂಭಂ ಹಿಟ್ ಚಿತ್ರಗಳಲ್ಲಿ ನಯನಿ ಕಂಡು ಬೆರಗಾದರು. ಮತ್ತೊಮ್ಮೆ ನಯನಿ ಆರಾಧನೆಗೆ ಅಭಿಮಾನಿಗಳು ತೊಡಗಿದರು

ಮುಂದೇನು

ಮುಂದೆ ದ್ವಿಭಾಷಾ ಚಿತ್ರ ಅನಾಮಿಕ ಕಾದಿದೆ. ವಿದ್ಯಾ ಬಾಲನ್ ಗೆ ಹೆಸರು ತಂದುಕೊಟ್ಟ ಕಹಾನಿ ಕಥೆ ತಮಿಳು ತೆಲುಗಿನಲಿ ಬರುತ್ತಿದೆ.

ಇನ್ಯಾವ ಚಿತ್ರವಿದೆ

ಉದಯನಿಧಿ ಸ್ಟಾಲಿನ್ ಜತೆ 'ಇದು ಕಾಥಿರ್ ವೆಲನ್ ಕಾದಲ್' ಚಿತ್ರ ಹಾಗೂ ಗೋಪಿಚಂದ್ ಜತೆ ತೆಲುಗಿನಲ್ಲಿ ಒಂದು ಚಿತ್ರಕ್ಕೆ ನಯನಿ ಸಹಿ ಹಾಕಿದ್ದಾಳೆ.

ನಯನಿ ಫುಲ್ ಬ್ಯುಸಿ

ಗಾಸಿಪ್ ಅಂಕಣದಿಂದ ಹೊರಬಿದ್ದಿರುವ ನಯನಿ ಈಗ ಫುಲ್ ಬ್ಯುಸಿಯಾಗಿದ್ದಾಳೆ. ಹಿಟ್ ಚಿತ್ರಗಳ ಸರಣಿ ನೀಡಿರುವ ನಯನಿ ಈಗ ನಂ.1 ಪಟ್ಟಕ್ಕೇರುತ್ತಿದ್ದಾಳೆ ಎಂದು ಸಿನಿಪಂಡಿತರ ಅಭಿಪ್ರಾಯ. ಅನುಷಾ ಬಿಟ್ಟರೆ ನಯನಿಗೆ ಸದ್ಯಕ್ಕೆ ಟಾಲಿವುಡ್, ಕಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಿದೆಯಂತೆ. ಆಲ್ ದಿ ಬೆಸ್ಟ್ ನಯನ್ ತಾರಾ

English summary
Good days seems are back for birthday girl Nayantara again. The actress, from the gloom and doom days post her break-up with Prabhu Deva, has returned to her bestowed place (i.e., number one position) by delivering hits on a trot in South. The sexy and sensible girl is turning a year older today (November 18) and we would like to remember her second innings journey on the special occasion.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada