»   » ಕಿಚ್ಚ ಸುದೀಪ್ ಕುರಿತ ಕೆಲವು ಆಸಕ್ತಿಕರ ಸಂಗತಿಗಳು

ಕಿಚ್ಚ ಸುದೀಪ್ ಕುರಿತ ಕೆಲವು ಆಸಕ್ತಿಕರ ಸಂಗತಿಗಳು

Posted By: ಉದಯರವಿ
Subscribe to Filmibeat Kannada

  ಕನ್ನಡದ ಮೋಸ್ಟ್ ಸೇಲಬಲ್ ಸ್ಟಾರ್ ಸುದೀಪ್ ಅವರಿಗೆ ಇಂದು (ಸೆ.2) ಹುಟ್ಟುಹಬ್ಬದ ಸಂಭ್ರಮ. ತಮ್ಮ ಮೈಕಟ್ಟನ್ನು ತುಂಬ ಜತನದಿಂದ ಕಾಪಾಡಿಕೊಂಡು ಬಂದಿರುವ ಸುದೀಪ್ ಅವರಿಗೆ 41 ಎಂದರೆ ಯಾರೂ ನಂಬಲ್ಲ. ಅವರ ಜೀವನೋತ್ಸಾಹ, ನೇರ ಮಾತುಗಳು ಎಂತಹವರನ್ನು ಬೆರಗಾಗಿಸುತ್ತವೆ.

  ನಟ, ನಿರ್ದೇಶಕ, ರಿಯಾಲಿಟಿ ಶೋಗಳ ನಿರೂಪಕರಾಗಿ, ಗಾಯಕರಾಗಿ ಸುದೀಪ್ ಅವರು ತಮ್ಮದೇ ಆದಂತಹ ಛಾಪನ್ನು ಮೂಡಿಸಿದವರು. ನಂಬರ್ 359, 17ನೇ ಎ ಕ್ರಾಸ್, 26ನೇ ಮುಖ್ಯರಸ್ತೆ, ಜೆಪಿ ನಗರ, ಬೆಂಗಳೂರು-78 ವಿಳಾಸದಲ್ಲಿ ಇಂದು ಕಿಚ್ಚೋತ್ಸವ. ಅಭಿಮಾನಿಗಳು ಸಾಲುಗಟ್ಟಿ ತಮ್ಮ ನೆಚ್ಚಿನ ಕಿಚ್ಚನಿಗೆ ಪ್ರೀತಿಯ ಶುಭ ಹಾರೈಕೆಗಳನ್ನು ತಿಳಿಸುತ್ತಿದ್ದಾರೆ. [ಸುದೀಪ್ ಕನ್ನಡದ ಗಾಡ್ ಫಾದರ್ ಆದ ವರ್ಷವಿದು]

  'ಅಖಿಲ ಕರ್ನಾಟಕ ಸುದೀಪ್ ಅಭಿಮಾನಿಗಳ ಸಂಘ' ಕಿಚ್ಚೋತ್ಸವ ಹಮ್ಮಿಕೊಂಡಿದ್ದು ಜೆಪಿ ನಗದಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದೆ. ಸಮಾಜಕ್ಕೆ ಒಳಿತಾಗುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಬೆಳಗ್ಗೆ 9.30ರಿಂದ ಸಂಜೆ 4.00 ಗಂಟೆಯವರೆಗೆ 'ಕಿಚ್ಚೋತ್ಸವ' ನಡೆಯಲಿದೆ.

  ಕನ್ನಡದ ರನ್ನ (ತೆಲುಗಿನ ಅತ್ತಾರಿಂಟಿಕಿ ದಾರೇದಿ ರೀಮೇಕ್), ಹೆಬ್ಬುಲಿ, ತಮಿಳಿನ ಚಿಂಬುದೇವನ್ ಚಿತ್ರ, ಸೂರಪ್ಪ ಬಾಬು ಹಾಗೂ ರಘುನಾಥ್ ಅವರ ಚಿತ್ರಗಳು ಸದ್ಯಕ್ಕೆ ಸುದೀಪ್ ಅವರ ಕೈಯಲ್ಲಿರುವ ಚಿತ್ರಗಳು. ಇದೇ ಸಂದರ್ಭದಲ್ಲಿ ಕಿಚ್ಚನ ಕುರಿತ ಕೆಲವು ಆಸಕ್ತಿಕರ ಸಂಗತಿಗಳನ್ನು ನೋಡೋಣ ಬನ್ನಿ.

  ಸುದೀಪ್ ಹವ್ಯಾಸಗಳಲ್ಲಿ ಹಾಡುಗಾರಿಕೆ

  "ಸೊಂಟದ ವಿಷ್ಯ ಬ್ಯಾಡವೋ ಶಿಷ್ಯ" ಎಂದು 'ಚಂದು' (2002) ಚಿತ್ರದಲ್ಲಿ ಹಾಡಿ ಎಲ್ಲರನ್ನೂ ಚಕಿತಗೊಳಿಸಿದ್ದರು. ಅವರಲ್ಲೂ ಒಂದು ಹಾಡುಹಕ್ಕಿ ಅಡಗಿದೆ ಎಂಬುದು ಗೊತ್ತಾಗಿದ್ದೇ ಆಗ. ಸುದೀಪ್ ಅವರ ಹವ್ಯಾಸಗಳಲ್ಲಿ ಹಾಡುಗಾರಿಕೆಯೂ ಒಂದು. ಜೊತೆಗೆ ಪುಸ್ತಕ ಓದುವ ಗೀಳು, ಕಥೆ ಹೆಣೆಯುವ ಹುಮ್ಮಸ್ಸು ಇದೆ.

  ಮಗಳೊಂದಿಗೆ ಸಮಯ ಕಳೆಯುವುದು ಇಷ್ಟ

  ಮಕ್ಕಳೆಂದರೆ ಯಾರಿಗೆ ತಾನೆ ಇಷ್ಟವಿರಲ್ಲ. ಸುದೀಪ್ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ತಮ್ಮ ಮಗಳನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ತಮ್ಮ ಮಗಳು ಸಾನಿಯೊಂದಿಗೆ ಹೆಚ್ಚಿನ ಸಮಯ ಕಳೆಯುವುದೆಂದರೆ ಸುದೀಪ್ ಗೆ ಇಷ್ಟ.

  ತಿರುಪತಿ ತಿಮ್ಮಪ್ಪನ ಆರಾಧಕ ಕಿಚ್ಚ ಸುದೀಪ್

  ಸುದೀಪ್ ಅವರು ದೈವ, ಧರ್ಮಗಳಲ್ಲಿ ನಂಬಿಕೆ ಇರುವವರು. ಅವರು ಅಪಾರವಾಗಿ ಆರಾಧಿಸುವ ದೈವ ತಿರುಪತಿ ತಿಮ್ಮಪ್ಪ ಎಂಬುದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ತಿಮ್ಮಪ್ಪ ಪರೋಕ್ಷ ದೇವರಾದರೆ ಅವರ ತಂದೆತಾಯಿ ಪ್ರತ್ಯಕ್ಷ ದೇವರು.

  ವೆಜ್ ಬಿರಿಯಾನಿ ರಾಗಿ ರೊಟ್ಟಿ ಎಂದರೆ ನಾಲಿಗೆ ಚಪ್ಪರಿಸುತ್ತಾರೆ

  ಸುದೀಪ್ ಅವರ ಪರ್ಸನಾಲಿಟಿ ನೋಡಿದರೆ ಆಹಾರದಲ್ಲಿ ತುಂಬಾ ಹಿತಮಿತ ಅನ್ನಿಸುತ್ತದೆ. ಸುದೀಪ್ ಅವರು ತಿನ್ನುವುದು ಹಿತಮಿತವಾದರೂ ವೆಜ್ ಬಿರಿಯಾನಿ, ರಾಗಿ ರೊಟ್ಟಿ ಎಂದರೆ ಅವರಿಗೆ ತುಂಬಾ ಇಷ್ಟ.

  ಸುದೀಪ್ ಅವರ ನೆಚ್ಚಿನ ಕಾರು ಯಾವುದು ಗೊತ್ತೆ?

  ಸಾಮಾನ್ಯವಾಗಿ ಎಲ್ಲಾ ಸೆಲೆಬ್ರಿಟಿಗಳಿಗೂ ಕಾರುಗಳೆಂದರೆ ಸಿಕ್ಕಾಪಟ್ಟೆ ಇಷ್ಟ ಇದ್ದೇ ಇರುತ್ತದೆ. ಇದಕ್ಕೆ ಸುದೀಪ್ ಅವರು ಹೊರತಲ್ಲ. ಅವರ ಬಳಿ ಹಲವಾರು ಐಶಾರಾಮಿ ಕಾರುಗಳಿದ್ದರೂ ಅವರ ಮೆಚ್ಚಿನ ಬ್ರಾಂಡ್ ಮಾತ್ರ ಮರ್ಸಿಡೆಸ್ ಬೆಂಜ್.

  ಸುದೀಪ್ ಅವರ ನೆಚ್ಚಿನ ಹೀರೋ ಹೀರೋಯಿನ್

  ಸ್ಯಾಂಡಲ್ ವುಡ್ ನಲ್ಲಿ ಸುದೀಪ್ ಎಂದರೆ ಎಲ್ಲರಿಗೂ ಇಷ್ಟ. ಸುದೀಪ್ ಅವರಿಗೆ ಉಪೇಂದ್ರ, ರಜನಿಕಾಂತ್ ಹಾಗೂ ಬ್ರಾಡ್ ಪಿಟ್ ಎಂದರೆ ಅಭಿಮಾನ. ಇನ್ನು ನಾಯಕಿಯರಲ್ಲಿ ಐಶ್ವರ್ಯಾ ರೈ, ಭಾರತಿ ವಿಷ್ಣುವರ್ಧನ್ ಎಂದರೆ ಇಷ್ಟ.

  ಸುದೀಪ್ ಅವರ ನೆಚ್ಚಿನ ಚಿತ್ರಗಳಲ್ಲಿ ಆಕಸ್ಮಿಕ

  ಸುದೀಪ್ ಅವರ ಮೆಚ್ಚಿನ ಚಿತ್ರಗಳು ಆಕಸ್ಮಿಕ, ಅವತಾರ್ ಹಾಗೂ ತಮ್ಮದೇ ಆದ ಈಗ ಚಿತ್ರ ಎಂದರೆ ಅವರಿಗೆ ತುಂಬಾ ಅಚ್ಚುಮೆಚ್ಚು. ನಿರ್ದೇಶಕರಲ್ಲಿ ಯೋಗರಾಜ್ ಭಟ್ ಹಾಗೂ ರಾಮ್ ಗೋಪಾಲ್ ವರ್ಮಾ ಅವರ ಮೆಚ್ಚಿನವರು. ಜೀನ್ಸ್ ಪ್ಯಾಂಟ್ ಟಿ ಶರ್ಟ್ ಅವರ ಮೆಚ್ಚಿನ ಉಡುಗೆ.

  English summary
  Kichcha Sudeep is turning 41 years today (Sept 2nd) and we wish him a great birthday this year. Here is some unknown facts about Abhinaya Chakravarthi.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more