For Quick Alerts
  ALLOW NOTIFICATIONS  
  For Daily Alerts

  ಒಂದು ವಿಷಾದ ಗೀತೆ, ಪ್ರೇಮಿಗಳ ದಿನಕ್ಕೆ ಮುಡಿಪು

  |
  ಇವತ್ತು ರಾಯರವಾರ, ಗುರುವಾರ. ಕನ್ನಡ ಪ್ರಪಂಚ ಹೆಚ್ಚೂ ಕಡಿಮೆ ಪ್ರೇಮಿಗಳ ದಿವಸದ ಗುಂಗಿನಲ್ಲಿದೆ ಎಂದರೆ ತಪ್ಪಾಗುತ್ತದೆ. ಪ್ರೀತಿ ಪ್ರೇಮ ಬಿಟ್ಟು ಮಾಡಲಿಕ್ಕೆ ಬೇರೇನೂ ಕೆಲ್ಸ ಇಲ್ಲವಾ? ಇಷ್ಟಕ್ಕೂ ಪ್ರೇಮಿಗಳು ಎಂದರೆ ಯಾರು ಎಂಬ ಕೊಶ್ಚನ್ ಎದ್ದೇಳುತ್ತದೆ.

  ಪ್ರೇಮಿ ಎಂದರೆ ಲವ್ ಹುಳದಿಂದ ಕಚ್ಚಿಸಿಕೊಂಡವರಾ? ಅಥವಾ ಅಪಾಯದಿಂದ ಪಾರಾದವರಾ? ಯುವಕರಾ, ಯುವತಿಯರಾ, ಮದುವೆಯಾದವರಾ, ಬ್ರಹ್ಮಚಾರಿಗಳಾ, ಮದುವೆಯಾಗಿದ್ದೂ ಸಿಂಗಲ್ ಆಗಿ ಉಳಿದವರಾ, ಒಂಟಿಗಳಾ ಅಥವಾ ಒಬ್ಬಂಟಿಗಳಾ?

  ಪ್ರೀತಿಯ ಸೆಳೆತಕ್ಕೆ ಸಿಲುಕದವರು ಕಡಿಮೆ, ಹೌದಪ್ಪಾ ಹೌದು. ಆ ಚಕ್ರತೀರ್ಥದಲ್ಲಿ ಸಿಲುಕಿ ಪಾರಾದವರೂ ವಿರಳ. ಹೋಗ್ಲಿ ಬಿಡಿ. ಈಗ ವಿಷ್ಯಕ್ಕೆ ಬರೋಣ.

  ವಿಷ್ಣುವರ್ಧನ್ ಮತ್ತು ಸುಹಾಸಿನಿ ಅಭಿನಯದ 'ಬಂಧನ' ನೋಡಿದ್ದೀರಾ? ಚಿತ್ರ ಕಥೆಯ ಒಂದು ಎಳೆ, ಒಂದು ಹಾಡು ಇಂಥ ದಿವಸ ಕಿವಿಯಲ್ಲಿ ಗುಂಯ್ಯ್ ಗುಡುವುದು ಆಲ್ ಮೋಸ್ಟ್ ಖಂಡಿತ. ಹಾಗಾಗಿ, ವಿಷಾದವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುವ ನಮ್ಮ ಒಲುಮೆಯ ಗೆಳೆಯ ಗೆಳತಿಯರ ಕಣ್ಣಿಗೆ ಈ ಗೀತೆ "ಅರ್ಪಣೆ", "ಸಮರ್ಪಣೆ".

  ಅಂತ, ನಾಗರಹೊಳೆ, ಮುತ್ತಿನಹಾರ ಮುಂತಾದ ಅದ್ಭುತ ಚಿತ್ರಗಳನ್ನು ನೀಡಿರುವ ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶಿಸಿದ್ದ ಈ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರೀಯ ಪ್ರಶಸ್ತಿ ಪ್ರಾಪ್ತವಾಗಿತ್ತು. ವಿರಹ ಪ್ರೇಮಿಯಾಗಿ ಅತ್ಯದ್ಭುತ ಅಭಿನಯ ನೀಡಿದ್ದ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೂ ಅತ್ಯುತ್ತಮ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.

  ಪ್ರೇಮದಾ ಕಾದಂಬರಿ, ಬರೆದನು ಕಣ್ಣೀರಲಿ,
  ಕಥೆಯು ಮುಗಿದೇ ಹೋದರು, ಮುಗಿಯದಿರಲಿ ಬಂಧನಾ
  ಪ್ರೇಮದಾ ಕಾದಂಬರಿ, ಬರೆದನು ಕಣ್ಣೀರಲಿ,
  ಕಥೆಯು ಮುಗಿದೇ ಹೋದರು,ಮುಗಿಯದಿರಲಿ ಬಂಧನಾ

  ಮೊದಲ ಪುಟಕು ಕೊನೆಯ ಪುಟಕು , ನಡುವೆ ಎನಿತು ಅಂತರ
  ಮೊದಲ ಪುಟಕು ಕೊನೆಯ ಪುಟಕು , ನಡುವೆ ಎನಿತು ಅಂತರ
  ಬಂದು ಹೋಗುವ ಸ್ನೇಹ ಸಾವಿರ , ನಿಮ್ಮ ಬಂಧ ನಿರಂತರ

  ಪ್ರೇಮದಾ ಕಾದಂಬರಿ,ಬರೆದನು ಕಣ್ಣೀರಲಿ,
  ಕಥೆಯು ಮುಗಿದೇ ಹೋದರು, ಮುಗಿಯದಿರಲಿ ಬಂಧನಾ

  ನನ್ನ ಕಥೆಗೆ ಅಂತ್ಯ ಬರೆದು, ಕವಿಯು ಹರಸಿದ ನನ್ನನು,
  ನನ್ನ ಕಥೆಗೆ ಅಂತ್ಯ ಬರೆದು, ಕವಿಯು ಹರಸಿದ ನನ್ನನು,
  ಕೊನೆಯ ಉಸಿರಲಿ ಒಂದೇ ಆಸೆ, ದೈವ ಹರಸಲಿ ನಿನ್ನನು

  ಪ್ರೇಮದಾ ಕಾದಂಬರಿ,ಬರೆದನು ಕಣ್ಣೀರಲಿ,
  ಕಥೆಯು ಮುಗಿದೇ ಹೋದರು, ಮುಗಿಯದಿರಲಿ ಬಂಧನಾ.....ಮುಗಿಯದಿರಲಿ........

  ಚಿತ್ರ : ಬಂಧನ
  ಸಂಗೀತ : ಎಂ.ರಂಗರಾವ್
  ಸಾಹಿತ್ಯ : ಆರ್.ಏನ್.ಜಯಗೋಪಾಲ್
  ನಿರ್ದೇಶನ : ರಾಜೇಂದ್ರಸಿಂಗ್ ಬಾಬು
  ಗಾಯಕರು : ಎಸ್ ಪಿ ಬಾಲಸುಬ್ರಮಣ್ಯಂ

  btw, ಹ್ಯಾಪಿ ವ್ಯಾಲಂಟೈನ್ಸ್ ಡೇ.

  English summary
  I took one look at the girl and was bitten by the love bug. Anyway no problem, I have installed AVG software.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X