For Quick Alerts
  ALLOW NOTIFICATIONS  
  For Daily Alerts

  'ವಿಕ್ರಾಂತ್ ರೋಣ' ಹಾಡಿಗೆ ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಶಾಸಕ

  |

  ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾದ 'ರಾ ರಾ ರಕ್ಕಮ್ಮ... ಎಕ್ಕಾ ಸಕ್ಕಾ ಎಕ್ಕಾಸಕ್ಕಾ' ಭಾರೀ ಜನಪ್ರಿಯತೆ ಗಳಿಸಿದೆ. ಈ ಹಾಡಿಗೆ ಹಲವಾರು ಸಿನಿಮಾ ಸೆಲೆಬ್ರಿಟಿಗಳು, ಸುದೀಪ್ ಅಭಿಮಾನಿಗಳು ಹೆಜ್ಜೆ ಹಾಕಿದ್ದಾರೆ.

  ಕೇವಲ ಸಿನಿಮಾ ಸೆಲೆಬ್ರಿಟಿಗಳನ್ನು ಮಾತ್ರವಲ್ಲ ರಾಜಕಾರಣಿಗಳೂ ಈ ಹಾಡಿದ ರಿದಮ್‌ಗೆ ಮಾರು ಹೋಗಿದ್ದಾರೆ. ಇದೀಗ ಈ ಹಾಡಿಗೆ ಬಿಜೆಪಿ ಶಾಸಕ ರೇಣುಕಾಚಾರ್ಯ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ.

  ಪೊಲೀಸರ ವಿರುದ್ಧ ಸುದೀಪ್ ಹಾಗೂ ಗೆಳೆಯರ ಕ್ರಿಕೆಟ್: ಗೆದ್ದವರು ಯಾರು?ಪೊಲೀಸರ ವಿರುದ್ಧ ಸುದೀಪ್ ಹಾಗೂ ಗೆಳೆಯರ ಕ್ರಿಕೆಟ್: ಗೆದ್ದವರು ಯಾರು?

  ನ್ಯಾಮತಿ ಗೋವಿನಕೋವಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಕಡೆ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ 'ಎಕ್ಕ ಸಕ್ಕ' ಹಾಡಿಗೆ ಜಬರ್ದಸ್ತ್ ಆಗಿ ಸ್ಟೆಪ್ ಹಾಕಿದ್ದಾರೆ.

  ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು 'ಎಕ್ಕ ಸಕ್ಕ' ಹಾಡಿಗೆ ನೃತ್ಯ ಮಾಡುವಾಗ ಮಧ್ಯಪ್ರವೇಶಿಸಿದ ರೇಣುಕಾಚಾರ್ಯ ಹಂಗಲ್ಲಾ, ಹಿಂಗೆ ಡ್ಯಾನ್ಸ್ ಮಾಡಬೇಕು ಎಂದು ಹೇಳಿ ಕುಣಿಯಲು ಆರಂಭಿಸಿದರು. ಶಾಸಕರೇ ಕುಣಿಯುತ್ತಿದ್ದಂತೆಯೇ ಮಕ್ಕಳು ಇನ್ನಷ್ಟು ಉತ್ಸಾಹ ಭರಿತರಾಗಿ ಡ್ಯಾನ್ಸ್ ಮಾಡಲು ಪ್ರಾರಂಭಿಸಿದರು.

  'ಎಕ್ಕ ಸಕ್ಕ' ಹಾಡಿಗೆ ಮಾತ್ರವೇ ಅಲ್ಲದೆ 'ಪಟಾಕಿ ಪೋರಿ' ಹಾಡಿಗೂ ರೇಣುಕಾಚಾರ್ಯ ಸಖತ್ ಸ್ಟೆಪ್ ಹಾಕಿ ನೆರೆದಿದ್ದವರನ್ನು ರಂಜಿಸಿದರು. ಶಾಸಕರ ಡ್ಯಾನ್ಸ್ ನೋಡಿ ಗ್ರಾಮಸ್ಥರೆಲ್ಲ ಖುಷಿಯಿಂದ ಚಪ್ಪಾಳೆ ತಟ್ಟಿದರು.

  ಈ ಹಿಂದೆಯೂ ಸ್ಟೆಪ್ ಹಾಕಿದ್ದಾರೆ ರೇಣುಕಾಚಾರ್ಯ

  ಈ ಹಿಂದೆಯೂ ಸ್ಟೆಪ್ ಹಾಕಿದ್ದಾರೆ ರೇಣುಕಾಚಾರ್ಯ

  ರೇಣುಕಾಚಾರ್ಯ ಹೀಗೆ ಸ್ಟೆಪ್ ಹಾಕುತ್ತಿರುವುದು ಮೊದಲೇನೂ ಅಲ್ಲ. ಅವಕಾಶ ಸಿಕ್ಕಾಗೆಲ್ಲ ರೇಣುಕಾಚಾರ್ಯ ಡ್ಯಾನ್ಸ್ ಮಾಡುತ್ತಿರುತ್ತಾರೆ. ಈ ಹಿಂದೆ ಕೋವಿಡ್ ಸಮಯದಲ್ಲಿ ಕೋವಿಡ್ ರೋಗಿಗಳ ಮುಂದೆ ಡ್ಯಾನ್ಸ್ ಮಾಡಿ ಅವರಿಗೆ ಮನೊರಂಜನೆ ನೀಡಿದ್ದರು ರೇಣುಕಾಚಾರ್ಯ. ಸಿನಿಮಾ ಬಗ್ಗೆ ಅಪಾರ ಪ್ರೀತಿಯುಳ್ಳ ರೇಣುಕಾಚಾರ್ಯ, ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ತಮ್ಮ ಕ್ಷೇತ್ರದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿದ್ದರು. ಪುನೀತ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು.

  'ರಕ್ಕಮ್ಮ' ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ ಹಲವು ಸೆಲೆಬ್ರಿಟಿಗಳು

  'ರಕ್ಕಮ್ಮ' ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ ಹಲವು ಸೆಲೆಬ್ರಿಟಿಗಳು

  'ವಿಕ್ರಾಂತ್ ರೋಣ' ಸಿನಿಮಾದ 'ರಕ್ಕಮ್ಮ' ಹಾಡಿಗೆ ಕನ್ನಡದ ಹಲವು ಸಿನಿಮಾ ಸೆಲೆಬ್ರಿಟಿಗಳು, ಧಾರಾವಾಹಿ ಸೆಲೆಬ್ರಿಟಿಗಳು ಹೆಜ್ಜೆ ಹಾಕಿದ್ದಾರೆ. ಚಂದನ್ ಗೌಡ, ನಿವೇದಿತಾ, ನಟಿ ಆಶಿಕಾ ರಂಗನಾಥ್, ಸುದೀಪ್‌ರ ಆಪ್ತ ಗೆಳೆಯ ಅರುಣ್ ಸಾಗರ್, ಹಾಡುಗಾರ ನವೀನ್ ಸಜ್ಜು ಹಾಗೂ ಬಿಗ್‌ಬಾಸ್ ವಿನ್ನರ್ ಮಂಜು ಪಾವಗಡ, ಸೃಜನ್ ಲೋಕೇಶ್ ಇನ್ನೂ ಹಲವು ನಟರು ಈ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಹಾಡಿಗೆ ಡ್ಯಾನ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ರಕ್ಕಮ್ಮ ಹಾಡಿಗೆ ಕುಣಿದಿರುವ ಜಾಕ್ವೆಲಿನ್

  ರಕ್ಕಮ್ಮ ಹಾಡಿಗೆ ಕುಣಿದಿರುವ ಜಾಕ್ವೆಲಿನ್

  'ವಿಕ್ರಾಂತ್ ರೋಣ' ಸಿನಿಮಾದಲ್ಲಿ 'ರಕ್ಕಮ್ಮ' ಹಾಡಿಗೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ. ಜಾನಿ ಕೋರಿಯೋಗ್ರಾಫ್ ಮಾಡಿರುವ ಈ ಹಾಡಿಗೆ ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್. ಹಾಡು ಬರೆದಿರುವುದು ಅನುಪ್ ಭಂಡಾರಿ. ಈ ಹಾಡಿನ ಲಿರಿಕಲ್ ವಿಡಿಯೋ ಈಗಾಗಲೇ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದು ಭಾರಿ ವೈರಲ್ ಆಗಿದೆ. ಸುದೀಪ್ ಸಹ ಈ ಹಾಡಿಗೆ ರೀಲ್ಸ್ ಮಾಡುವುದಾಗಿ ಜಾಕ್ವೆಲಿನ್ ಮುಂದೆ ಒಪ್ಪಿಕೊಂಡಿದ್ದಾರೆ ಆದರೆ ಇನ್ನೂ ರೀಲ್ಸ್ ಮಾಡಿ ಅಪ್‌ಲೋಡ್ ಮಾಡಿಲ್ಲ.

  ಜುಲೈ 28ಕ್ಕೆ ಸಿನಿಮಾ ಬಿಡುಗಡೆ

  ಜುಲೈ 28ಕ್ಕೆ ಸಿನಿಮಾ ಬಿಡುಗಡೆ

  'ವಿಕ್ರಾಂತ್ ರೋಣ' ಸಿನಿಮಾವು ಮುಂದಿನ ತಿಂಗಳು 28ನೇ ತಾರೀಖು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿಯೂ ಈ ಸಿನಿಮಾ ಬಿಡುಗಡೆ ಆಗುತ್ತಿರುವುದು ವಿಶೇಷ. ಸಿನಿಮಾವನ್ನು ಅನುಪ್ ಭಂಡಾರಿ ನಿರ್ದೇಶನ ಮಾಡಿದ್ದು, ಸುದೀಪ್ ಜೊತೆಗೆ ನಿರೂಪ್ ಭಂಡಾರಿ ಸಹ ಸಿನಿಮಾದಲ್ಲಿದ್ದಾರೆ. ನೀತಾ ಅಶೋಕ್, ರವಿಶಂಕರ್ ಗೌಡ, ವಾಸುಕಿ ವೈಭವ್ ಇನ್ನೂ ಹಲವರು ಸಿನಿಮಾದಲ್ಲಿದ್ದಾರೆ. ಸಿನಿಮಾದ ಟ್ರೇಲರ್ 23ರಂದು ಬಿಡುಗಡೆ ಆಗಲಿದೆ.

  English summary
  BJP MLA Renukacharya danced to Vikranth Rona movie song. He danced with children in an event organized in his constituency.
  Tuesday, June 21, 2022, 14:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X