twitter
    For Quick Alerts
    ALLOW NOTIFICATIONS  
    For Daily Alerts

    ನಿಖಿಲ್ ಹೇಳಿದ ಒಂದು ಮಾತಿನಿಂದ ರಾಜಕೀಯದಲ್ಲಿ ಭಾರಿ ಚರ್ಚೆ

    |

    Recommended Video

    ಗುಪ್ತಚರ ಇಲಾಖೆ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ. | FILMIBEAT KANNADA

    ರೈತ ಮಹಿಳೆಯ ಕುರಿತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆಗೆ ಸಂಬಂಧಪಟ್ಟಂತೆ ಸಿಎಂ ಮಗ ನಿಖಿಲ್ ಕುಮಾರ್ ಮಾತನಾಡಿದ್ದರು. 'ಅಪ್ಪನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗುತ್ತಿದೆ' ಎಂದು ಸಮರ್ಥಿಸಿಕೊಂಡಿದ್ದ ನಿಖಿಲ್, ಗುಪ್ತಚರ ಇಲಾಖೆ ಬಗ್ಗೆ ಪ್ರಸ್ತಾಪಿಸಿದ್ದರು.

    ಈ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಬಿಜೆಪಿ ನಾಯಕರು ನಿಖಿಲ್ ಗುಪ್ತಚರ ಕುರಿತ ಹೇಳಿಕೆಗೆ ಕಿಡಿಕಾರುತ್ತಿದ್ದರು. ಮಗನ ಹೇಳಿಕೆಗೆ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಅವರು ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ರೈತ ಮಹಿಳೆಗೆ ಬೈಗುಳ, ವಿವಾದಕ್ಕೆ ಸ್ಪಷ್ಟನೆ ಕೊಟ್ಟರು ಕುಮಾರಸ್ವಾಮಿ

    ಈ ಸಂಬಂಧ ಬಿಜೆಪಿ ಶಾಸಕ ಸುರೇಶ್ ಕುಮಾರ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದು, ನಿಖಿಲ್ ಗೆ ಟಾಂಗ್ ನೀಡಿದ್ದಾರೆ. ಅಷ್ಟಕ್ಕೂ, ನಟ ನಿಖಿಲ್ ಕುಮಾರ್ ಹೇಳಿದ್ದೇನು.? ಅದಕ್ಕೆ ಸುರೇಶ್ ಕುಮಾರ್ ತಿರುಗೇಟು ನೀಡಿದ್ದೇನು.? ಮುಂದೆ ಓದಿ....

    ನಿಖಿಲ್ ಹೇಳಿದ್ದೇನು.?

    ನಿಖಿಲ್ ಹೇಳಿದ್ದೇನು.?

    ರೈತ ಮಹಿಳೆಯ ಬಗ್ಗೆ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಸಂಬಂಧಪಟ್ಟಂತೆ ನಿಖಿಲ್ ಕುಮಾರ್ ಮಾತನಾಡಿದ್ದು, 'ನಮಗೆ ಬಂದ ಇಂಟಲಿಜೆನ್ಸ್ ವರದಿ ಪ್ರಕಾರ, ನಾವು ಸರ್ಕಾರ ನಡೆಸುತ್ತಿದ್ದೇವೆ. ವಿಧಾನಸೌಧ ಮೆಟ್ಟಿಲು ಹತ್ತೋಕೆ ಗೇಟ್ ಹೊಡಿತೀರಾ ಅಂದ್ರೆ, ಸರ್ಕಾರ ಕೈಕಟ್ಟಿಹಾಕ್ಕೊಂಡು ಸುಮ್ಮನೆ ಇರಬೇಕಾ. ಅವರೆಲ್ಲ ನಿಜವಾಗಲೂ ರೈತರುಗಳಾ, ರೈತರು ಮುಗ್ದರು. ಈ ರೀತಿ ಗೂಂಡಾವರ್ತನೆ ಮಾಡೋದಿಲ್ಲ. ಕುಮಾರಣ್ಣನ ಇಮೇಜ್ ಗೆ ಧಕ್ಕೆ ತರಬೇಕೆಂದು ವಿರೋಧ ಪಕ್ಷಗಳು ದಿನನಿತ್ಯ ಪ್ರಯತ್ನ ಮಾಡ್ತಿದ್ದಾರೆ' ಎಂದಿದ್ದರು.

    ಸಿಎಂ ಕುಮಾರಸ್ವಾಮಿಯಂತೆ ರೆಬೆಲ್ ಸ್ಪಷ್ಟನೆ ನೀಡಿದ ಮಗ ನಿಖಿಲ್ಸಿಎಂ ಕುಮಾರಸ್ವಾಮಿಯಂತೆ ರೆಬೆಲ್ ಸ್ಪಷ್ಟನೆ ನೀಡಿದ ಮಗ ನಿಖಿಲ್

    ನಿಖಿಲ್ ಕುಮಾರ್ ಅಧಿಕಾರವೇನು.?

    ನಿಖಿಲ್ ಕುಮಾರ್ ಅಧಿಕಾರವೇನು.?

    ಈ ಹೇಳಿಕೆಯಲ್ಲಿ ಗುಪ್ತಚರ ವರದಿ ಬಗ್ಗೆ ನಿಖಿಲ್ ಪ್ರಸ್ತಾಪಿಸಿರುವುದನ್ನ ಖಂಡಿಸಿರುವ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು''ಗುಪ್ತಚರ ವರದಿ ಅಷ್ಟು ಸಸ್ತಾ ಆಗೋಗಿದೆಯೇ? ಗುಪ್ತಚರ ವರದಿ ಸಿಗೋದಕ್ಕೆ ನಿಖಿಲ್ ಕುಮಾರಸ್ವಾಮಿಯವರ "ಅಧಿಕಾರ" ಏನು? ಮುಖ್ಯಮಂತ್ರಿಗಳ ಮಗನಾಗಿದ್ದಕ್ಕೆ ಈ ಮಹದವಕಾಶವೇ'' ಎಂದು ಪ್ರಶ್ನಿಸಿದ್ದಾರೆ.

    ಸರ್ಕಾರಕ್ಕೆ 15 ದಿನಗಳ ಗಡುವು ನೀಡಿ ಪ್ರತಿಭಟನೆ ಹಿಂಪಡೆದ ರೈತರು

    ನಿಖಿಲ್ ಕುಮಾರ್ ಮಾತಾಡಿದ್ದೇ ತಪ್ಪಾಯ್ತಾ.?

    ನಿಖಿಲ್ ಕುಮಾರ್ ಮಾತಾಡಿದ್ದೇ ತಪ್ಪಾಯ್ತಾ.?

    'ಸೀತಾರಾಮ ಕಲ್ಯಾಣ' ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಿಖಿಲ್ ಪ್ರತಿಕ್ರಿಯೆ ನೀಡಿದ್ದು ತಪ್ಪಾಗಿಲ್ಲ. ಆದ್ರೆ, ನಾವು ಸರ್ಕಾರ ನಡೆಸುತ್ತಿದ್ದೇವೆ, ನಮಗೆ ಬಂದಿರುವ ಇಂಟಲಿಜೆನ್ಸ್ ವರದಿ ಪ್ರಕಾರ'' ಎಂದಿದ್ದು ಈಗ ತಪ್ಪಾಗಿದೆ. ಯಾಕಂದ್ರೆ, ನಿಖಿಲ್ ಅವರು ರಾಜಕೀಯವಾಗಿ ಯಾವುದೇ ಹುದ್ದೆಯಲ್ಲಿಲ್ಲ. ಸರ್ಕಾರದ ಜೊತೆ ಮತ್ತು ಪಕ್ಷದಲ್ಲಿ ನಿರ್ದಿಷ್ಟ ಸ್ಥಾನದಲ್ಲಲ್ಲಿ. ನಿಖಿಲ್ ಸಿಎಂ ಅವರ ಮಗನಾಗಿದ್ದು, ಅವರೊಬ್ಬರ ನಟ. ಹೀಗಾಗಿ, ಸರ್ಕಾರದ ಇಂಟಲಿಜೆನ್ಸ್ ವರದಿ ಸಿಎಂ ಮಗನಿಗೆ ಸಿಕ್ಕಿದ್ದು ಹೇಗೆ ಎಂಬುದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

    ರೈತರ ಪ್ರತಿಭಟನೆ, ಸುವರ್ಣ ವಿಧಾನಸೌಧಕ್ಕೆ ಲಾರಿ ನುಗ್ಗಿಸಿದ ರೈತರು!

    ಪರ-ವಿರೋಧದ ಚರ್ಚೆ

    ಪರ-ವಿರೋಧದ ಚರ್ಚೆ

    ನಿಖಿಲ್ ಕುಮಾರ್ ಅವರ ಹೇಳಿಕೆಯ ಬಗ್ಗೆ ಸುರೇಶ್ ಕುಮಾರ್ ಪ್ರಶ್ನಿಸಿರುವುದನ್ನ ಕೆಲವು ಒಪ್ಪಿಕೊಂಡರೇ, ಮತ್ತೆ ಕೆಲವರು ವಿರೋಧಿಸುತ್ತಿದ್ದಾರೆ. ತಂದೆಯ ಬಗ್ಗೆ ಮಗ ಸಮರ್ಥಿಸಿಕೊಂಡಿದ್ದು ತಪ್ಪಿಲ್ಲ ಎಂದು ಕುಮಾರಸ್ವಾಮಿ ಬೆಂಬಲಿಗರು ಸಪೋರ್ಟ್ ಮಾಡ್ತಿದ್ದಾರೆ. ಇನ್ನು ಇದು ಅಪ್ಪ-ಮಕ್ಕಳ ಸರ್ಕಾರ ಎನ್ನುವುದಕ್ಕೆ ಇದೊಂದು ಕಾರಣ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.

    ದುರಹಂಕಾರಕ್ಕೆ ಮಿತಿ ಇರಬೇಕು: ಎಚ್‌ಡಿಕೆ ವಿರುದ್ಧ ಯಡಿಯೂರಪ್ಪ ಗರಂ

    English summary
    Bjp mla suresh kumar questions, how intelligence report is getting to cm kumaraswamy son nikhil kumar.
    Wednesday, November 21, 2018, 15:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X